• search
  • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆದಿಚುಂಚನಗಿರಿ; ವಿಜ್ಞಾನ ಮ್ಯೂಸಿಯಂಗೆ ಅನುದಾನ ಘೋಷಿಸಿದ ಸಿಎಂ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮೇ 16 : ಅನ್ನ, ಆರೋಗ್ಯ, ಅಕ್ಷರ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅಪರಿಮಿತ ಸೇವೆಗೈದಿರುವ ಆದಿಚುಂಚನಗಿರಿ ಶ್ರೀಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಗಳ ಹೆಬ್ಬಯಕೆಯಾಗಿರುವ ವಿಜ್ಞಾನ ಮ್ಯೂಸಿಯಂ ಸ್ಥಾಪನೆಗೆ ಅಗತ್ಯ ಅನುದಾನ ಹಾಗೂ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಸೋಮವಾರ ಬೆಳ್ಳೂರು ಕ್ರಾಸ್‌ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು. "ದೇಶದಲ್ಲೇ ವಿಭಿನ್ನ ರೀತಿಯಲ್ಲಿ ವಿಜ್ಞಾನದ ಸಂಗ್ರಹಾಲಯ ನಿರ್ಮಾಣ ಮಾಡಬೇಕೆಂಬ ಶ್ರೀಗಳ ಹೆಬ್ಬಯಕೆಗೆ ಸರ್ಕಾರದ ಅಗತ್ಯ ಸಹಕಾರ ಇರಲಿದೆ" ಎಂದರು.

ವೈಚಾರಿಕತೆ, ನೆಮ್ಮದಿ, ವಿಜ್ಞಾನದ ಆಸಕ್ತಿ, ಶ್ರೀಮಠದಿಂದ ಬೆಳವಣಿಗೆ ಕಾಣುತ್ತಿದೆ. ಇದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಬುದ್ಧ ಪೂರ್ಣಿಮೆ ದಿನದಂದು ನೂತನ ವೈದ್ಯಕೀಯ ಪದವೀಧರರಿಗೆ ಪದವಿ ಪ್ರದಾನ ಮಾಡುತ್ತಿರುವುದು ಅರ್ಥಪೂರ್ಣ ಕಾರ್ಯ ಎಂದು ಬಣ್ಣಿಸಿದರು.

ವಿಶ್ವದ ಅಗ್ರ ವಿಜ್ಞಾನಿ, ಶಾಂತಿ ಧೂತ ಬುದ್ದನಾಗಿದ್ದು, ಜೀವನದ ಸಂಕಷ್ಟ ದುಃಖಕ್ಕೆ ಆಸೆಯೇ ಮೂಲ ಕಾರಣ ಎಂಬುದನ್ನು ಅರಿತು ತನ್ನಲ್ಲಿನ ಅಧಿಕಾರ ಹಾಗೂ ಸಂಪತ್ತನ್ನು ತ್ಯಾಗ ಮಾಡಿ ಆಸೆಯನ್ನು ಮೆಟ್ಟಿ ನಿಲ್ಲಲು ತ್ಯಾಗದ ಸಾಧನೆ ಮಾಡಿ ಜ್ಞಾನ ಪಡೆದು ಜಗತ್ಗಿಗೆ ಹಂಚಿದ ಬುದ್ಧ ನಮ್ಮೆಲ್ಲರಿಗೂ ಮಾದರಿಯಾಗಿದ್ದು, ಆತನ ತತ್ವ ಆದರ್ಶಗಳ ಆಚರಣೆಗೆ ನಾವೆಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.

ಜಗತ್ತಿನಲ್ಲಿ ಜನಿಸಿದ ಪ್ರತಿ ವ್ಯಕ್ತಿಯೂ ಶಕ್ತಿವಂತನಾಗಿರುತ್ತಾನೆ. ಆದರೆ, ಸಾಧಕರು, ಸಾಮಾನ್ಯ ಮನುಷ್ಯರಿಗಿಂತ ವಿಭಿನ್ನ ಶಕ್ತಿ ಪಡೆದಿರುತ್ತಾರೆ. ಅವರ ಮುಗ್ದತೆಯ ನಡವಳಿಕೆ ಜೀವನದ ಯಶಸ್ಸಿಗೆ ಸೋಪಾನವಾಗಲಿದ್ದು, ಸಾಧಕರ ಹೆಜ್ಜೆಗುರುತುಗಳನ್ನು ಅರಿತು ಬಾಳ್ವೆ ನಡೆಸಬೇಕೆಂದು ಕಿವಿಮಾತು ಹೇಳಿದರು.

Basavaraj Bommai Announces Grant For Establishment Of Science Museum At Adichunchanagiri

ಪ್ರತಿಯೊಬ್ಬರೂ ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು. ಭೌತಿಕ ನಡವಳಿಕೆಗೆ ಹೆದರದೇ ಶೇ. 100 ರಷ್ಟು ಆತ್ಮಸಾಕ್ಷಿಯಾಗಿ ನಡೆದುಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವೈದ್ಯಕೀಯ ಕ್ಷೇತ್ರದ ಸವಾಲುಗಳನ್ನು ಮೆಟ್ಟಿನಿಲ್ಲಲು ಯುವ ವೈದ್ಯರು ತಮ್ಮ ಜ್ಞಾನರ್ಜನೆಯನ್ನು ಹೆಚ್ಚಿಸಿಕೊಳ್ಳಲು ಸದಾ ಕಲಿಕೆಯ ಮಾರ್ಗವನ್ನು ಅವಲಂಭಿಸಬೇಕು. ಗುರುಗಳ ಸಾನಿಧ್ಯದಲ್ಲಿರಬೇಕು, ರೋಗಿಗಳ ನೋವನ್ನು ಶಮನಗೊಳಿಸುವ ಗುಣ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಅನಾದಿ ಕಾಲದಿಂದ ಅರಮನೆ-ಗುರುಮನೆಗೆ ಸಂಪರ್ಕವಿದೆ. ಶ್ರೀಗಳು ನಮ್ಮ ಸರ್ಕಾರಕ್ಕೆ ಆಶೀರ್ವಾದ ಮಾಡಬೇಕು. ರಾಜ್ಯವನ್ನು ಸುಭೀಕ್ಷವಾಗಿಡಲು ಶ್ರೀಗಳ ಮಾರ್ಗ ದರ್ಶನ ಅತ್ಯಗತ್ಯ. ಸರ್ಕಾರದ ಮೇಲೆ ಧಾರ್ಮಿಕ ನೇತಾರರು ಹಾಗೂ ಕಟ್ಟ ಕಡೆಯ ಜನರ ಸಹಕಾರ ಬೇಕೆಂದರು.

ವಿವೇಕಾನಂದರ ನುಡಿಮುತ್ತಿನಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಸಾಧಕ ವಿಜೃಂಭಿಸುತ್ತಾನೆ. ನಮ್ಮ ಅನುಪಸ್ಥಿತಿಯಲ್ಲಿ ನಮ್ಮನ್ನು ಸ್ಮರಿಸಿಕೊಳ್ಳುವ ಒಳ್ಳೆಯ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಕಿವಿಮಾತು ಹೇಳಿದರು.
ನಿಮ್ಮ ಆಲೋಚನೆ ಹಾಗೂ ಗುಣಾತ್ಮಕ ಚಿಂತನೆ ನಿಮ್ಮ ಏಳಿಗೆಗೆ ಸಹಕಾರಿಯಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಕ್ರೀಡಾ ಮತ್ತು ಯುವ ಸಬಲೀಕರಣ ಸಚಿವ ಕೆ. ಸಿ. ನಾರಾಯಣಗೌಡ ಇತರರು ಉಪಸ್ಥಿತರಿದ್ದರು.

English summary
Karnataka chief minister Basavaraj Bommai announced fund for set up science museum at Adichunchanagiri mutt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X