ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಮಂಡ್ಯ, ಬಾವಿಯಲ್ಲಿ ಸಿಕ್ಕ ಮಗುವಿಗೆ ಮಿಮ್ಸ್‌ನಲ್ಲಿ ಚಿಕಿತ್ಸೆ

|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 18: ಮಂಡ್ಯ ಜಿಲ್ಲೆಯ ಪಾಂಡವಪುರ ಚಂದ್ರೆ ಗ್ರಾಮದಲ್ಲಿ 35 ಅಡಿ ಆಳದ ನೀರಿಲ್ಲದ ತೆರದ ಬಾವಿಯಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಗಂಡು ಮಗು ಜೀವಂತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನವಜಾತ ಶಿಶುಗೆ ಪಾಂಡವಪುರ ತಾಲ್ಲೂಕಿನ ವೈದ್ಯಾಧಿಕಾರಿಗಳ ತಂಡ ಪ್ರಥಮ ಚಿಕಿತ್ಸೆ ನೀಡಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್‌ಗೆ ಕಳುಹಿಸಿಕೊಟ್ಟಿದೆ. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಿಮ್ಸ್ ಐಸಿಯುನಲ್ಲಿರುವ ಮಗುವಿನ ಆರೋಗ್ಯದ ವೈದ್ಯರಿಂದ ಮಾಹಿತಿ ಪಡೆದುಕೊಂಡರು.

 ಮಂಡ್ಯ: ಹೆಜ್ಜಾರ್ಲೆ ಪಕ್ಷಿಗೆ ಜಿಪಿಎಸ್ ಅಳವಡಿಸಿದ ವಿಜ್ಞಾನಿಗಳು; ದೇಶದಲ್ಲೇ ಮೊದಲ ಯಶಸ್ವಿ ಪ್ರಯೋಗ ಮಂಡ್ಯ: ಹೆಜ್ಜಾರ್ಲೆ ಪಕ್ಷಿಗೆ ಜಿಪಿಎಸ್ ಅಳವಡಿಸಿದ ವಿಜ್ಞಾನಿಗಳು; ದೇಶದಲ್ಲೇ ಮೊದಲ ಯಶಸ್ವಿ ಪ್ರಯೋಗ

child

ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವತಿ ಸಹ ಸಚಿವರ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಜಿಲ್ಲಾಡಳಿತದ ವತಿಯಿಂದ ಮಗುವಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

 ಸೆ.30. ರಿಂದ ಮಂಡ್ಯ ಮೈ ಶುಗರ್‌ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ: ಸಚಿವ ಕೆ.ಗೋಪಾಲಯ್ಯ ಸೆ.30. ರಿಂದ ಮಂಡ್ಯ ಮೈ ಶುಗರ್‌ನಲ್ಲಿ ಕಬ್ಬು ಅರೆಯುವಿಕೆಗೆ ಚಾಲನೆ: ಸಚಿವ ಕೆ.ಗೋಪಾಲಯ್ಯ

ಮಗುವಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಧನಂಜಯ್, "ಮಗು ಅವಧಿಗೆ ಮುನ್ನವೇ ಜನಿಸಿರುವ ಹಿನ್ನೆಲೆಯಲ್ಲಿ ಮಗುವಿನ ತೂಕ 1.50 ಕೆಜಿ ಮಾತ್ರ ಇದ್ದು, ಮಗುವಿನ ತೂಕ ಹೆಚ್ಚಳವಾಗುವವರೆಗೆ ಒಂದು ವಾರ ಐಸಿಯುನಲ್ಲಿ ಚಿಕಿತ್ಸೆ ಒದಗಿಸಲಾಗುವುದು" ಎಂದರು.

 ರಾಜಧನ ವಸೂಲಿಯಲ್ಲಿ ಮಂಡ್ಯ ಜಿಲ್ಲೆಗೆ ಕೊನೆಯ ಸ್ಥಾನ: ಸುಮಲತಾ ಅಸಮಧಾನ ರಾಜಧನ ವಸೂಲಿಯಲ್ಲಿ ಮಂಡ್ಯ ಜಿಲ್ಲೆಗೆ ಕೊನೆಯ ಸ್ಥಾನ: ಸುಮಲತಾ ಅಸಮಧಾನ

ಹಾವಿನ ಪಕ್ಕದಲ್ಲಿದ್ದ ಮಗು; ಶನಿವಾರ ಪಾಂಡವಪುರದ ಚಂದ್ರೆ ಗ್ರಾಮದಲ್ಲಿ ಪಾಳುಬಿದ್ದ ಬಾವಿಯಲ್ಲಿ ನವಜಾತ ಗಂಡು ಶಿಶು ಪತ್ತೆಯಾಗಿತ್ತು. ಗ್ರಾಮಸ್ಥರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದರು.

ತೋಟಕ್ಕೆ ರೈತ ಮಹಿಳೆ ಹೋಗುವಾಗ ಮಗುವಿನ ಅಳುವಿನ ಶಬ್ದ ಕೇಳಿ ಬಂದಿತ್ತು. ಬಾವಿಯ ಬಳಿ ಬಂದು ನೋಡಿದಾಗ ಮಗು ಪತ್ತೆಯಾಗಿತ್ತು. ಗ್ರಾಮಸ್ಥರು ಮಗುವಿನ ತಾಯಿಗೆ ಹಿಡಿಶಾಪ ಹಾಕಿದ್ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಧಿಕಾರಿಗಳು ಸ್ಥಳೀಯ ವ್ಯಕ್ತಿಯೊಬ್ಬನನ್ನು ಬಾವಿಗೆ ಇಳಿಸಿ ಮಗು ರಕ್ಷಣೆ ಮಾಡಿದ್ದರು. ಆಗ ಮಗುವಿನ ಪಕ್ಕದಲ್ಲಿ ಹಾವು ಸಹ ಇತ್ತು.

ಗ್ರಾಮದ ಮಹಿಳೆಯೊಬ್ಬರು ಮಗುವಿಗೆ ಎದೆಹಾಲು ಉಣಿಸಿ ಮಾನವೀಯತೆ ಮೆರೆದಿದ್ದದ್ದರು. ಬಳಿಕ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳಿಸಲಾಗಿತ್ತು. ಪಾಂಡವಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ವಿಮ್ಸ್‌ಗೆ ಕಳಿಸಲಾಗಿದೆ.

ಕಸ ಕಡ್ಡಿ ತುಂಬಿದ್ದ ಬಾವಿಯಲ್ಲಿ ಹಾವಿನ ಪಕ್ಕದಲ್ಲಿ ಮಗು ಇದ್ದರೂ ಮಗುವಿಗೆ ಅಪಾಯವಾಗಿಲ್ಲ. ಮಗುವಿನ ಕೈ, ಕಾಲು ಸೇರಿದಂತೆ ವಿವಿಧ ಭಾಗದಲ್ಲಿ ಇರುವೆಗಳು ಕಚ್ಚಿವೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಮಗು ಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.

English summary
New born baby boy found in wall at Pandavapura, Mandya district. Child admitted for Mandya Institute of Medical Sciences (MIMS) for treatment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X