ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಲಾಶಯದ ಲೆಕ್ಕಾಚಾರಕ್ಕೆ ಕೆಆರ್ ಎಸ್ ಗೆ ಬಂದಿದೆ ಆಟೊಮೆಟಿಕ್ ವಾಟರ್‌ಗೇಜ್ ತಂತ್ರಜ್ಞಾನ

|
Google Oneindia Kannada News

ಮಂಡ್ಯ, ಜುಲೈ 27: ಮಂಡ್ಯದ ಕೆಆರ್ ಎಸ್ ಜಲಾಶಯಕ್ಕೆ ಕೇಂದ್ರ ಜಲ ಆಯೋಗ ಆಟೊಮೆಟಿಕ್ ವಾಟರ್‌ಗೇಜ್ ಅಳವಡಿಸಿದೆ. ಈ ಮೂಲಕ ಜಲಾಶಯಗಳ ನೀರಿನ ಸಂಗ್ರಹ ತಿಳಿಯಲು ಕ್ರಮ ಕೈಗೊಳ್ಳಲಾಗಿದೆ.

ಕೆಆರ್ ಎಸ್ ಹಾಗೂ ಹಾರಂಗಿ ಅಣೆಕಟ್ಟೆಗೆ ಟೆಲಿಮೆಟ್ರಿ ವಾಟರ್‌ಗೇಜ್ ಅಳವಡಿಸಲಾಗಿದ್ದು, ಜಲಾಶಯದ ನೀರಿನ ಸಂಗ್ರಹ, ಒಳಹರಿವು ಮತ್ತು ಹೊರ ಹರಿವಿನ ಪ್ರಮಾಣದ ಮಾಹಿತಿಯನ್ನು ಆಯೋಗಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
"ಜಲಾಶಯದ ಸ್ಥಿತಿಗತಿಯ ಜೊತೆಗೆ ಮಳೆಯ ಪ್ರಮಾಣ, ಹವಾಮಾನ ವರದಿ, ಮಳೆಯ ಮುನ್ಸೂಚನೆಯನ್ನೂ ಪಡೆದುಕೊಳ್ಳಲು ಸಹಕಾರಿಯಾಗಿದೆ" ಎಂದು ಅಣೆಕಟ್ಟೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

 ಇಂದಿನಿಂದ ನಾಲೆಗಳಿಗೆ ನೀರು; ನಿಟ್ಟುಸಿರುಬಿಟ್ಟ ಮಂಡ್ಯ ರೈತರು ಇಂದಿನಿಂದ ನಾಲೆಗಳಿಗೆ ನೀರು; ನಿಟ್ಟುಸಿರುಬಿಟ್ಟ ಮಂಡ್ಯ ರೈತರು

ಜಲಾಶಯದಿಂದ ಅನಧಿಕೃತವಾಗಿ ನೀರು ಹರಿಸಿದರೆ, ನೀರಿನ ಸಂಗ್ರಹದ ಬಗ್ಗೆ ತಪ್ಪು ಮಾಹಿತಿ ನೀಡಿದರೆ ಕ್ಷಣಾರ್ಧದಲ್ಲಿ ಆಯೋಗದ ಗಮನಕ್ಕೆ ಬರಲಿದೆ. ಈ ಹಿಂದೆ, ನೀರಾವರಿ ಇಲಾಖೆ ಅಣೆಕಟ್ಟೆ ವಿಭಾಗದ ಅಧಿಕಾರಿಗಳು ಜಲಾಶಯಗಳ ನೀರಿನ ಪ್ರಮಾಣದ ಕುರಿತು ಅಳತೆ ಮಾಡಿ ಲಿಖಿತವಾಗಿ ಕಳುಹಿಸುವ ವ್ಯವಸ್ಥೆ ಇತ್ತು. ಈಗ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಿರುವುದರಿಂದ ಕ್ಷಣ ಕ್ಷಣದ ಮಾಹಿತಿಯು ಆಯೋಗದ ಕಚೇರಿ ತಲುಪುತ್ತದೆ.

Automatic Water Gage In KRS Dam

ಕರ್ನಾಟಕ, ತಮಿಳುನಾಡು, ಪಾಂಡಿಚೇರಿ ಹಾಗೂ ಕೇರಳ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಜಲಾಶಯಗಳ ನೀರಿನ ಸಂಗ್ರಹದ ಅಳತೆಗೆ ಅಳವಡಿಸಿರುವ ವಿಧಾನದ ಕುರಿತು ಅಧ್ಯಯನ ನಡೆಸಿದ ಸಮಿತಿ ಸದಸ್ಯರು ಆನ್ ಲೈನ್ ಮಾನಿಟರಿಂಗ್ ಸಿಸ್ಟಂ ಅನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ.

ಉತ್ತಮ ಮಳೆಯಾಗಲೆಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ದರ್ಶನ್ ಪುಟ್ಟಣ್ಣಯ್ಯ ಉತ್ತಮ ಮಳೆಯಾಗಲೆಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ದರ್ಶನ್ ಪುಟ್ಟಣ್ಣಯ್ಯ

ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹಗಳಿಗೆ ಹಾರಂಗಿ ಅಣೆಕಟ್ಟೆಯ ನೀರಿನ ಅವೈಜ್ಞಾನಿಕ ನಿರ್ವಹಣೆಯೇ ಕಾರಣ ಎನ್ನುವ ಆರೋಪ ಕೇಳಿಬಂದಿತ್ತು. ಹೀಗಾಗಿ, ಜಲಾಶಯದ ವಿದ್ಯಮಾನಗಳ ಮೇಲೆ ಕಣ್ಣಿಡಲು ಸರ್ಕಾರ ಟೆಲಿಮೆಟ್ರಿ ವಾಟರ್‌ಗೇಜ್ ಅಳವಡಿಸಿದೆ. ತಮಿಳುನಾಡಿಗೆ ಹರಿಸುವ ಕಾವೇರಿ ನೀರಿನಲ್ಲಿ ಹಾರಂಗಿ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣವೂ ಮಹತ್ವದ ಪಾತ್ರ ವಹಿಸುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

English summary
The Central Water Commission has adopted the Automatic Watergage for KRS reservoir in Mandya. Steps have been taken to know the water storage of the reservoirs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X