ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿವೈಎಸ್ಪಿ ಪೃಥ್ವಿ ಕರ್ತವ್ಯ ನಿಷ್ಠೆಗೆ ಸೆಲ್ಯೂಟ್ ಹೊಡೆದ ಉಪ ಮುಖ್ಯಮಂತ್ರಿ

|
Google Oneindia Kannada News

ಮಂಡ್ಯ, ಏಪ್ರಿಲ್ 18: ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿಯಾಗಿರುವ ಎಂ.ಜೆ.ಪೃಥ್ವಿ ಕರ್ತವ್ಯ ನಿಷ್ಠೆಯನ್ನು ಉಪ ಮುಖ್ಯಮಂತ್ರಿ ಡಾ ಅಶ್ವತ್ ನಾರಾಯಣ್ ಮೆಚ್ಚಿಕೊಂಡಿದ್ದಾರೆ. ಪೃಥ್ವಿ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದು, ಅವರಿಗೆ ಸೆಲ್ಯೂಟ್ ಹೊಡೆದಿದ್ದಾರೆ.

''ತಮ್ಮ ಮದುವೆಯನ್ನೇ ಮುಂದೂಡಿ ಕರ್ತವ್ಯ ಪ್ರಜ್ಞೆಯನ್ನು ಮೆರೆದ ಮಂಡ್ಯ ಜಿಲ್ಲೆಯ ಮಳವಳ್ಳಿ ಪೊಲೀಸ್ ಅಧಿಕಾರಿ DySP ಪೃಥ್ವಿ ಅವರಿಗೆ ನನ್ನ ಸೆಲ್ಯೂಟ್. ಇಂದು #CivilServicesDay ಸಂದರ್ಭದಲ್ಲಿ ಇಂತಹ ಅಧಿಕಾರಿಗಳ ಈ ಸೇವಾ ಮನೋಭಾವ ಸಮಾಜಕ್ಕೆ ಪ್ರೇರಣೆಯಾಗಲಿ.'' ಎಂದು ಟ್ವೀಟ್ ಮಾಡಿದ್ದಾರೆ.

ಕೊರೊನಾ ಕರ್ತವ್ಯಕ್ಕೆ ಮದುವೆ ಮುಂದೂಡಿದ ಮಳವಳ್ಳಿ ಡಿವೈಎಸ್ಪಿ; ಸುಮಲತಾ ಮೆಚ್ಚುಗೆಕೊರೊನಾ ಕರ್ತವ್ಯಕ್ಕೆ ಮದುವೆ ಮುಂದೂಡಿದ ಮಳವಳ್ಳಿ ಡಿವೈಎಸ್ಪಿ; ಸುಮಲತಾ ಮೆಚ್ಚುಗೆ

ಡಿವೈಎಸ್ಪಿ ಎಂ.ಜೆ. ಪೃಥ್ವಿ ಮತ್ತು ದ್ಯಾಮಪ್ಪ ಅವರ ಮದುವೆ ಏಪ್ರಿಲ್ 4 ಮತ್ತು 5 ರಂದು ಧಾರವಾಡದ ಡಿ.ಬಿ. ಪಾಟೀಲ್ ಕನ್ವೆಂಷನ್ ಹಾಲ್‌ನಲ್ಲಿ ನಿಗದಿಯಾಗಿತ್ತು. ಅದರೊಂದಿಗೆ ಮೈಸೂರಿನ ಪೊಲೀಸ್ ಭವನದಲ್ಲಿ ಏಪ್ರಿಲ್ 10 ರಂದು ಆರತಕ್ಷತೆ ಸಮಾರಂಭ ನಿಗದಿಯಾಗಿತ್ತು.

Ashwath Narayan Praised Malavalli Dysp Who Postponed Her Marriage For Corona

ಆದರೆ, ಲಾಕ್‌ಡೌನ್ ಸಮಯದಲ್ಲಿ ಮದುವೆಯ ಕಾರಣಕ್ಕೆ ರಜೆ ಪಡೆಯುವುದು ಸರಿಯಲ್ಲ ಎಂದು ಪೃಥ್ವಿ ತಮ್ಮ ಮದುವೆಯನ್ನೇ ಮುಂದಕ್ಕೆ ಹಾಕಿಕೊಂಡಿದ್ದಾರೆ. ಕೊರೊನಾ ಹೋರಾಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರು ಮದುವೆಗಿಂತ ಕರ್ತವ್ಯ ಮುಖ್ಯ ಎಂದಿದ್ದಾರೆ.

ಕೊರೊನಾ ಕಾರಣದಿಂದಾಗಿ ಮದುವೆ ಮುಂದೂಡಿದ್ದಾರೆ ಎಂದು ಪೃಥ್ವಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ನಟಿ, ಮಂಡ್ಯ ಸಂಸದೆ ಸುಮಲತಾ ಕೂಡ ಪೃಥ್ವಿ ಬಗ್ಗೆ ಮೆಚ್ಚಿಕೊಂಡು ಟ್ವೀಟ್ ಮಾಡಿದ್ದಾರೆ.

English summary
Deputy cm Ashwath Narayan praised malavalli DYSP who postponed her marriage for Corona duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X