ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಲತಾ ನಾಯ್ಡು ಅಂದಿದ್ದ ಜೆಡಿಎಸ್, ಮೊರೆ ಹೋಗಿದ್ದು ಚಂದ್ರಬಾಬು ನಾಯ್ಡುಗೆ

|
Google Oneindia Kannada News

Recommended Video

Lok Sabha Elections 2019 : ನಿಖಿಲ್‍ಗಾಗಿ ಮಂಡ್ಯಕ್ಕೆ ಬರ್ತಾರೆ ಆಂಧ್ರ ಮುಖ್ಯಮಂತ್ರಿ

ಒಂದು ವಾರದ ಹಿಂದಿನ ರಾಜಕೀಯ ಮುಖಂಡರೊಬ್ಬರ ಹೇಳಿಕೆಯನ್ನೊಮ್ಮೆ ಅವಲೋಕಿಸುವುದಾದರೆ, ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ತಮ್ಮದು ಎಲುಬಿಲ್ಲದ ನಾಲಿಗೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾಜ್ಯದಲ್ಲಿನ ಮೊದಲ ಹಂತದ ಚುನಾವಣೆಗೆ ಬಹಿರಂಗ ಪ್ರಚಾರ, ಇನ್ನೇನು 48ಗಂಟೆಯಲ್ಲಿ ಮುಕ್ತಾಯಗೊಳ್ಳಲಿದೆ. ಅಂತೆಯೇ ಇಂಡ್ಯಾದಲ್ಲಿ ಚುನಾವಣೆ ನಡೆಯುತ್ತಿದೆಯೋ ಅಥವಾ ಮಂಡ್ಯದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆಯೋ ಎನ್ನುವಷ್ಟರ ಮಟ್ಟಿಗೆ ಆ ಲೋಕಸಭಾ ಕ್ಷೇತ್ರದ ಚುನಾವಣೆಗೆ ಪ್ರಚಾರವೂ ಸಿಗುತ್ತಿದೆ.

ಮಂಡ್ಯದಲ್ಲಿ ನಿಖಿಲ್ ಪರ ಎನ್.ಚಂದ್ರಬಾಬು ನಾಯ್ಡು ಪ್ರಚಾರಮಂಡ್ಯದಲ್ಲಿ ನಿಖಿಲ್ ಪರ ಎನ್.ಚಂದ್ರಬಾಬು ನಾಯ್ಡು ಪ್ರಚಾರ

ಮುಖ್ಯಮಂತ್ರಿಗಳ ಪುತ್ರ ಇಲ್ಲಿನ ಅಭ್ಯರ್ಥಿ ಎನ್ನುವುದಕ್ಕಿಂತ ಹೆಚ್ಚಾಗಿ, ಅವರಿಗೆ ಸಡ್ಡು ಹೊಡೆಯಲು ಕಣಕ್ಕಿಳಿದಿರುವುದು ಮಂಡ್ಯದ ಗಂಡು ಅಂಬರೀಶ್ ಅವರ ಅರ್ಧಾಂಗಿ ಎನ್ನುವುದು. ಪ್ರಚಾರದ ವೇಳೆ ನಿಖಿಲ್ ಗಿಂತ ಅತ್ಯಂತ ಮೆಚ್ಯೂರ್ಡ್ ಆಗಿ ಮತಯಾಚಿಸುತ್ತಿರುವ ಸುಮಲತಾ, ಜೆಡಿಎಸ್ ಪಡೆಯನ್ನು ಅಕ್ಷರಸಃ ಚಿಂತೆಗೀಡಾಗುವಂತೆ ಮಾಡಿದ್ದಾರೆ.

ಜಾತಿ ಬಿಟ್ಟು ಪ್ರಚಾರ ಮಾಡಿ: ಶಿವರಾಮೇಗೌಡರಿಗೆ ಸಚಿವ ಎಂಟಿಬಿ ತರಾಟೆಜಾತಿ ಬಿಟ್ಟು ಪ್ರಚಾರ ಮಾಡಿ: ಶಿವರಾಮೇಗೌಡರಿಗೆ ಸಚಿವ ಎಂಟಿಬಿ ತರಾಟೆ

ಸುಮಲತಾ ಗೌಡ್ತಿ ಅಲ್ಲ, ಅವಳೊಬ್ಬಳು ನಾಯ್ಡು ಎಂದು ಮಂಡ್ಯದ ಹಾಲೀ ಸಂಸದ ಶಿವರಾಮೇಗೌಡ ಟೀಕಿಸಿದ್ದರು. ಈಗ ನಾಯ್ಡು ಜನಾಂಗದ ಮುಖ್ಯಮಂತ್ರಿಯೊಬ್ಬರನ್ನು ನಿಖಿಲ್ ಪರ ಮತಯಾಚಿಸಲು ಜೆಡಿಎಸ್ ಮೊರೆಹೋಗಿರುವುದು ವಿಪರ್ಯಾಸವೋ ಅಥವಾ ಅನಿವಾರ್ಯತೆಯೋ? ರಾಜಕೀಯ ಲೆಕ್ಕಾಚಾರದ ಪ್ರಕಾರ, ಇದರಲ್ಲಿ ತಪ್ಪೇನಿಲ್ಲದಿದ್ದರೂ, ಶಿವರಾಮೇಗೌಡ್ರ 'ನಾಯ್ಡು' ಹೇಳಿಕೆಯನ್ನು ಜೆಡಿಎಸ್ ಒಮ್ಮೆ ರಿವೈಂಡ್ ಮಾಡಿಕೊಳ್ಳಬೇಕಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು 'ನಾಯ್ಡು'

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು 'ನಾಯ್ಡು'

ತೆಲುಗುದೇಶಂ ಪಕ್ಷದ ಮುಖ್ಯಸ್ಥ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು 'ನಾಯ್ಡು' ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಮಂಡ್ಯಗೆ ಬರುತ್ತಿದ್ದಾರೆ. ಕ್ಷೇತ್ರದ ವ್ಯಾಪ್ತಿಯ ಮಳವಳ್ಳಿ, ಮೇಲುಕೋಟೆ ಮತ್ತು ಪಾಂಡವಪುರದಲ್ಲಿ ನಾಯ್ಡುಗಾರು ಪ್ರಚಾರ ನಡೆಸಲಿದ್ದಾರೆ. ದೇವೇಗೌಡ್ರ ವಿನಂತಿಯ ಮೇರೆಗೆ ನಾಯ್ಡು ಪ್ರಚಾರಕ್ಕೆ ಬರುತ್ತಿದ್ದಾರೆ.

ಜೆಡಿಎಸ್ ವರಿಷ್ಠ ದೇವೇಗೌಡ್ರು, ನಾಯ್ಡು ಪರ ಪ್ರಚಾರ ಮಾಡಿದ್ದರು

ಜೆಡಿಎಸ್ ವರಿಷ್ಠ ದೇವೇಗೌಡ್ರು, ನಾಯ್ಡು ಪರ ಪ್ರಚಾರ ಮಾಡಿದ್ದರು

ಆಂಧ್ರಪ್ರದೇಶದ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನ ಜೆಡಿಎಸ್ ವರಿಷ್ಠ ದೇವೇಗೌಡ್ರು, ನಾಯ್ಡು ಪರ ಪ್ರಚಾರ ಮಾಡಿದ್ದರು. ಎನ್ ಟಿ ರಾಮರಾವ್ ಅವರ ಹುಟ್ಟಿದ ಸ್ಥಳ ಕೃಷ್ಣಾ ಜಿಲ್ಲೆಯಲ್ಲಿ ಗೌಡ್ರು, ಟಿಡಿಪಿ ಪರ ಪ್ರಚಾರ ನಡೆಸಿದ್ದರು. ಜೊತೆಗೆ, ಕರ್ನಾಟಕಕ್ಕೂ ಬಂದು ಪ್ರಚಾರ ನಡೆಸಿ ಎಂದು ಆಹ್ವಾನ ನೀಡಿದ್ದರು. ಮೊದಲ ಹಂತದ ಹದಿನಾಲ್ಕು ಕ್ಷೇತ್ರಗಳಲ್ಲಿ ನಾಯ್ಡು ಪ್ರಚಾರ ಮಾಡುತ್ತಿರುವುದು ಮಂಡ್ಯದಲ್ಲಿ. ವಿರೋಧಿ ಅಭ್ಯರ್ಥಿ ಗೌಡ್ತಿಯಲ್ಲ, ನಾಯ್ಡು ಎಂದು ಜರಿದಿದ್ದ ಶಿವರಾಮೇ ಗೌಡ್ರು ಪ್ರತಿನಿಧಿಸುತ್ತಿರುವ ಕ್ಷೇತ್ರ ಮಂಡ್ಯ.

ಮಹಾಘಟಬಂದನ್ ನಿಂದ ಪ್ರಧಾನಿ ಹುದ್ದೆಗೆ ಯಾರು, ಓವರ್ ಟು ಗೌಡ್ರುಮಹಾಘಟಬಂದನ್ ನಿಂದ ಪ್ರಧಾನಿ ಹುದ್ದೆಗೆ ಯಾರು, ಓವರ್ ಟು ಗೌಡ್ರು

ಜೆಡಿಎಸ್, ನಾಯ್ಡು ಜನಾಂಗದ ನಾಯಕನ ಮೊರೆ ಯಾಕೆ ಹೋಯಿತು

ಜೆಡಿಎಸ್, ನಾಯ್ಡು ಜನಾಂಗದ ನಾಯಕನ ಮೊರೆ ಯಾಕೆ ಹೋಯಿತು

ಲೋಕಸಭಾ ಚುನಾವಣೆಯ ವೇಳೆ ಒಬ್ಬರು, ಇನೊಬ್ಬರ ಪರ ಪ್ರಚಾರ ಮಾಡುವುದು ಮಾಮೂಲಿ. ಎನ್ಡಿಎ ಮೈತ್ರಿಕೂಟದಿಂದ ಹೊರಬಂದ ನಂತರ, ಮೋದಿ ವಿರುದ್ದ ಬೀದಿಗಿಳಿದಿರುವ ಚಂದ್ರಬಾಬು ನಾಯ್ಡು, ದೇಶದಲ್ಲೆಲ್ಲಾ ಸುತ್ತಾಡಿ, ಬಿಜಿಪಿ ವಿರೋಧಿ ಬಣವನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿದ್ದಾರೆ. ಚಂದ್ರಬಾಬು ನಾಯ್ಡು ಅವರನ್ನು ಜೆಡಿಎಸ್ ತಮ್ಮ ಅಭ್ಯರ್ಥಿ ಪರ ಪ್ರಚಾರಕ್ಕೆ ಕರೆತರುವುದಕ್ಕೆ ಯಾರ ತಕರಾರೂ ಇರುವುದಿಲ್ಲ. ಆದರೆ, ಶಿವರಾಮೇಗೌಡ್ರು, ನಾಯ್ಡುಗಳು, ಬೆಂಗಳೂರಿನಲ್ಲೆಲ್ಲಾ ತುಂಬಿಕೊಂಡಿದ್ದಾರೆ, ಇಂತವರನ್ನು ದೂರವಿಡಬೇಕು ಎನ್ನುವ ಹೇಳಿಕೆಯನ್ನು ನೀಡಿದ್ದರು. ಹಾಗಾಗಿ, ಮತ್ತೆ ಯಾಕೆ ಜೆಡಿಎಸ್, ನಾಯ್ಡು ಜನಾಂಗದ ನಾಯಕನ ಮೊರೆಹೋಯಿತು ಎನ್ನುವುದಿಲ್ಲಿ ಪ್ರಶ್ನೆ.

ಜಾತಿ ಬಿಟ್ಟು ಗೌಡರನ್ನು ಮದುವೆಯಾದ ಸುಮಲತಾ ಗೌಡ್ತಿ ಹೇಗೆ ಆಗುತ್ತಾರೆ

ಜಾತಿ ಬಿಟ್ಟು ಗೌಡರನ್ನು ಮದುವೆಯಾದ ಸುಮಲತಾ ಗೌಡ್ತಿ ಹೇಗೆ ಆಗುತ್ತಾರೆ

ನಾಯ್ಡು ಜಾತಿ ಬಿಟ್ಟು ಗೌಡರನ್ನು ಮದುವೆಯಾದ ಸುಮಲತಾ ಗೌಡ್ತಿ ಹೇಗೆ ಆಗುತ್ತಾರೆ. ಅಂಬರೀಷ್ ಅವರನ್ನು ಮದುವೆಯಾದ ಮಾತ್ರಕ್ಕೆ ನಾಯ್ಡು ಜನಾಂಗಕ್ಕೆ ಸೇರಿದ ಸುಮಲತಾ ಗೌಡ್ತಿ ಆಗುವುದಿಲ್ಲ. ಅವರ ಜಾತಿ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ನಾಯ್ಡು ಜನಾಂಗದವರು ಬೆಂಗಳೂರಿನ ತುಂಬ ಇದ್ದಾರೆ. ಅದೇ ರೀತಿ ಈಗ ಮಂಡ್ಯವನ್ನೂ ನಾಯ್ಡುಮಯವನ್ನಾಗಿಸಲು ಹೊರಟಿದ್ದಾರೆ - ಶಿವರಾಮೇಗೌಡ್ರು ನೀಡಿದ್ದ ಹೇಳಿಕೆ.

ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾಗೆ ಗೆಲುವು: ಸಮೀಕ್ಷೆ ವರದಿಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾಗೆ ಗೆಲುವು: ಸಮೀಕ್ಷೆ ವರದಿ

ಇಂತವರನ್ನು ಜನ ನೇರಾನೇರಾ ತಿರಸ್ಕರಿಸಬೇಕು ಎನ್ನುವ ಹೇಳಿಕೆಯನ್ನು ಶಿವರಾಮೇಗೌಡ್ರು ನೀಡಿದ್ದರು

ಇಂತವರನ್ನು ಜನ ನೇರಾನೇರಾ ತಿರಸ್ಕರಿಸಬೇಕು ಎನ್ನುವ ಹೇಳಿಕೆಯನ್ನು ಶಿವರಾಮೇಗೌಡ್ರು ನೀಡಿದ್ದರು

ನಾಯ್ಡು ಜನಾಂಗದವರ ಕೊಡುಗೆ ಏನು, ಸುಮಲತಾ ಅವರು ಮಳವಳ್ಳಿ ಹುಚ್ಚೇಗೌಡರ ಸೊಸೆ ಎನ್ನುವುದರಲ್ಲಿ ಅರ್ಥವೇ ಇಲ್ಲ. ಅಂಬರೀಷ್ ಅವರ ಮೃತದೇಹವನ್ನು ಮಂಡ್ಯಕ್ಕೆ ತಂದಾಗ ಸೇರಿದ್ದ ಜನಸಾಗರವನ್ನು ಕಂಡು ಸುಮಲತಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇಂತವರನ್ನು ಜನ ನೇರಾನೇರಾ ತಿರಸ್ಕರಿಸಬೇಕು ಎನ್ನುವ ಹೇಳಿಕೆಯನ್ನು ಶಿವರಾಮೇಗೌಡ್ರು ನೀಡಿದ್ದರು.

ಜಯಲಲಿತಾ ನಂತರ ಸುಮಲತಾ ಬಹುದೊಡ್ಡ ಮಾಯಾಂಗನೆ: ಶಿವರಾಮೇಗೌಡಜಯಲಲಿತಾ ನಂತರ ಸುಮಲತಾ ಬಹುದೊಡ್ಡ ಮಾಯಾಂಗನೆ: ಶಿವರಾಮೇಗೌಡ

English summary
Andhra Pradesh CM Chandrababu Naidu campaigning in Mandya for JDS candidate Nikhil Kumaraswamy, recalling Shivarame Gowda statement on Naidu's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X