ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್‌ ತೊರೆದು ಜೆಡಿಎಸ್ ಸೇರಲು ಅಂಬರೀಷ್ ನಿರ್ಧಾರ?

By Sachhidananda Acharya
|
Google Oneindia Kannada News

Recommended Video

ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಹಾರಲು ಅಂಬಿ ಪ್ಲಾನ್ | Oneindia Kannada

ಮಂಡ್ಯ, ಏಪ್ರಿಲ್ 23: ಅರ್ಜಿ ಸಲ್ಲಿಸದಿದ್ದರೂ ಚಿತ್ರನಟ, ಮಾಜಿ ಸಚಿವ ಎಂ.ಎಚ್. ಅಂಬರೀಷ್ ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹೀಗಿದ್ದೂ ಸ್ಪರ್ಧಿಸಲು ಅವರು ಮೀನಾಮೇಷ ಎಣಿಸುತ್ತಿದ್ದು ನಾಮಪತ್ರ ಸಲ್ಲಿಸಿಲ್ಲ, ಹಾಗೂ ಸಲ್ಲಿಕೆಗೂ ಮುಂದಾಗಿಲ್ಲ.

ಸದ್ಯಕ್ಕೆ ಅವರು ಕಾಂಗ್ರೆಸ್ ಬಿಡಲಿದ್ದಾರೆ, ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲೂ ಮುಖ್ಯವಾಗಿ ಮಂಡ್ಯದಲ್ಲಿ ಅವರು ಜೆಡಿಎಸ್ ಸೇರುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.

ಮಂಡ್ಯಕ್ಕೆ ಬರುವಂತೆ ಅಂಬಿ ನಿವಾಸಕ್ಕೆ ದೌಡಾಯಿಸಿದ ಮುಖಂಡರುಮಂಡ್ಯಕ್ಕೆ ಬರುವಂತೆ ಅಂಬಿ ನಿವಾಸಕ್ಕೆ ದೌಡಾಯಿಸಿದ ಮುಖಂಡರು

ನಡೆಯದ ಭೇಟಿ

ಹಾಗೆ ನೋಡಿದರೆ ಮೈಸೂರಿನಲ್ಲಿ ಭಾನುವಾರ ಸಿದ್ದರಾಮಯ್ಯ ಮತ್ತು ಅಂಬರೀಷ್ ಭೇಟಿಯಾಗಬೇಕಾಗಿತ್ತು. ಮತ್ತು ಅಂಬರೀಷ್ ಸ್ಪರ್ಧೆಯ ಬಗ್ಗೆ ಸ್ಪಷ್ಟನೆ ಹೊರ ಬೀಳಬೇಕಾಗಿತ್ತು. ಆದರೆ ಇಬ್ಬರ ನಡುವೆಯೂ ಭಾನುವಾರ ಭೇಟಿ ನಡೆಯಲೇ ಇಲ್ಲ.

Ambarish to join JDS says report

ಬೆಂಗಳೂರಿನಿಂದ ಬಂದ ಸಿದ್ದರಾಮಯ್ಯ ನೇರವಾಗಿ ಎಚ್‌.ಡಿ. ಕೋಟೆಗೆ ತೆರಳಿ ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಂಡರು. ಸಂಜೆ ತಮ್ಮ ಮೈಸೂರಿನ ನಿವಾಸಕ್ಕೆ ಸಿಎಂ ವಾಪಸಾದರು. ಈ ಸಂದರ್ಭದಲ್ಲಿ ನಗರದ 'ಸಂದೇಶ್ ದಿ ಪ್ರಿನ್ಸ್‌' ಹೋಟೆಲಿನಲ್ಲಿದ್ದ ಅಂಬರೀಷ್ ಮತ್ತು ಸಿಎಂ ನಡುವೆ ಭೇಟಿ ನಡೆಯಲಿದೆ ಎಂದುಕೊಳ್ಳಲಾಗಿತ್ತು. ಆದರೆ ಈ ಭೇಟಿ ನಡೆಯಲೇ ಇಲ್ಲ.

ಹೀಗಾಗಿ ಅವರು ಕಾಂಗ್ರೆಸ್ ಬಿಡಲಿದ್ದಾರೆ ಎಂಬ ಸುದ್ದಿಗಳಿಗೆ ಈಗ ಮತ್ತಷ್ಟು ಬಲ ಬಂದಿದೆ.

ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಅಂಬಿ, ಏನು ಮಾಡುತ್ತೆ ಕಾಂಗ್ರೆಸ್‌?ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಅಂಬಿ, ಏನು ಮಾಡುತ್ತೆ ಕಾಂಗ್ರೆಸ್‌?

ಸೋಮವಾರ ನಿರ್ಧಾರ

ಮಂಡ್ಯದಲ್ಲಿ ಅಂಬರೀಷ್ ವಿರೋಧಿ ಅಲೆ ಇದೆ. ಈ ಕಾರಣಕ್ಕೆ ಅವರು ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಸೇರಿ ಸದ್ಯಕ್ಕೆ ಸ್ಪರ್ಧೆಯಿಂದ ಹೊರಗುಳಿಯುವುದು, ಆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರವನ್ನು ನಡೆಸುವ ಗುರಿಯನ್ನು ಅಂಬರೀಷ್ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಮುಂದೆ ಮೇಲ್ಮನೆ ಪ್ರವೇಶಿಸುವ ಉದ್ದೇಶವನ್ನು ಅವರಿಗಿದೆಯಂತೆ.

English summary
Actor, former minister Ambarish will leave the Congress and the news is that he will join JDS. Especially in Mandya, they are saying that Ambarish will sure to join JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X