• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಿವರಾಮೇಗೌಡ ವಿರುದ್ಧ ಪ್ರತಿಭಟನೆ:ಉಪೇಂದ್ರ ಕೊಟ್ಟ ಪ್ರತಿಕ್ರಿಯೆ ಏನು?

|
   Lok Sabha Elections : ಮಂಡ್ಯದಲ್ಲಿ ದಾಸನ ಮಾತಿಗೆ ಸಿಳ್ಳೆ, ಚಪ್ಪಾಳೆಗಳ ಸುರಿಮಳೆ | Oneindia Kannada

   ಮಂಡ್ಯ, ಏಪ್ರಿಲ್ 02: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರು ಗೌಡ್ತಿ ಅಲ್ಲ ಎಂದು ಹೇಳಿಕೆ ನೀಡಿರುವ ಸಂಸದ ಎಲ್.ಆರ್.ಶಿವರಾಮೇಗೌಡರ ಕ್ರಮ ಖಂಡಿಸಿ ಸಮೀಪದ ಅಂಬಿ ತವರು ಗ್ರಾಮ ದೊಡ್ಡರಸಿನಕೆರೆ ಗೇಟ್ ಬಳಿ ಅಂಬಿ ಅಭಿಮಾನಿಗಳು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

   ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

   ಅಂಬಿ ಬದುಕಿದ್ದ ವೇಳೆ ತುಟಿ ಬಿಚ್ಚದೇ ಅವರ ನೆರಳಿನಲ್ಲಿದ್ದು, ಈಗ ಅವರ ಪತ್ನಿ ಮೇಲೆ ಟೀಕೆ ಮಾಡುತ್ತಿರುವ ಕ್ರಮ ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿ ಅವರು ಎಲ್‌ಆರ್‌ಎಸ್ ವಿರುದ್ಧ ಧಿಕ್ಕಾರ ಕೂಗಿದರು.

   ಮಂಡ್ಯವನ್ನು ನಾಯ್ಡುಮಯ ಮಾಡಲು ಹೊರಟಿದ್ದಾರೆ: ಶಿವರಾಮೇಗೌಡ

   ಸುಮಲತಾ ಮಂಡ್ಯದ ಸೊಸೆ, ನಮ್ಮೂರಿನ ಮನೆಯ ಮಗಳು. ಆಕೆಯ ಬಗ್ಗೆ ಹಗುರವಾಗಿ ಮಾತನಾಡಿದರೆ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲ್ಲಿ. ತೇಜೋವಧೆ ಮಾಡುವುದನ್ನು ನಿಲ್ಲಿಸಬೇಕು. ತಮ್ಮ ಲೋಕ ಸಭಾ ಚುನಾವಣೆಯಲ್ಲಿ ಅಂಬಿ ಬೆಂಬಲ ಪಡೆದಿರುವುದನ್ನು ಮರೆತಿರಾ? ಶಿವರಾಮೇಗೌಡರೇ...ಎಂದು ಕಿಡಿಕಾರಿದರು.

   Ambareesh fans protested against MP L.R.Shivarame Gowda

   ಅಂಬಿ ಕುಟುಂಬದ ಬಗ್ಗೆ ಕೀಳು ವ್ಯಕ್ತ್ತಿತ್ವ ತೋರಿಸುತಿದ್ದಾರೆ. ಈ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಅಭಿಮಾನಿಗಳು ಎಚ್ಚರಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಬ್‌ಇನ್ಸ್ಪೆಕ್ಟರ್ ಅಯ್ಯನಗೌಡ ಪ್ರತಿಭಟನಾ ನಿರತರ ಮನವೊಲಿಸಿದ ನಂತರ ಪ್ರತಿಭಟನೆ ಹಿಂಪಡೆದರು.

   ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

   ಪ್ರತಿಭಟನಾ ವೇಳೆ ಸುಮಲತಾ ಅವರ ಚಿಹ್ನೆಯಾದ ರಣಕಹಣೆ ಮೊಳಗಿಸಿದ ಪ್ರತಿಭಟನಾ ನಿರತರು ನಮ್ಮೂರಿನ ಹೆಣ್ಣು ಮಗಳನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

   Ambareesh fans protested against MP L.R.Shivarame Gowda

   ಉಪೇಂದ್ರಗೂ ತಟ್ಟಿದ ಪ್ರತಿಭಟನಾ ಬಿಸಿ
   ಶಿವರಾಮೇಗೌಡ ಅವರ ವಿರುದ್ಧ ಪ್ರತಿಭಟನೆ ನಡೆಸುತಿದ್ದ ವೇಳೆ ಬೆಂಗಳೂರಿನಿಂದ ಮಳವಳ್ಳಿಗೆ ತೆರಳುತ್ತಿದ್ದ ನಟ ಉಪೇಂದ್ರರಿಗೆ ಪ್ರತಿಭಟನೆಯ ಬಿಸಿ ತಟ್ಟಿತು. ಈ ವೇಳೆ ಪ್ರತಿಭಟನಾ ನಿರತರು ಉಪೇಂದ್ರ ಅವರನ್ನು ಸುತ್ತುವರಿದು, ಚಿತ್ರರಂಗದ ಒಬ್ಬ ಮಹಿಳೆ ಮೇಲೆ ಅವಹೇಳನಕಾರಿ ಹೇಳಿಕೆ ನೀಡಿ ಅವಮಾನಿಸುತಿದ್ದಾರೆ ಇದಕ್ಕೆ ಪ್ರತಿಕ್ರಿಯಿಸಿ ಎಂದಾಗ ಪ್ರಜಾಕೀಯ ಪಕ್ಷದಿಂದ ನಮ್ಮ ಅಭ್ಯರ್ಥಿ ಸ್ಪರ್ಧಿಸಿದ್ದು, ಅವರನ್ನು ಬೆಂಬಲಿಸಿ ಎಂದರು. ಬಳಿಕ ಮಂಡ್ಯ ಜಿಲ್ಲೆಯ ಜನ ಬುದ್ಧಿವಂತರು. ಈ ಚುನಾವಣೆಯಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುತ್ತಾ ತಮ್ಮ ಬುದ್ಧಿವಂತಿಕೆ ಮಾತು ಹೇಳಿ ಜಾರಿಕೊಂಡರು.

   ಮಂಡ್ಯ ರಣಕಣ
   ವರ್ಷ
   ಅಭ್ಯರ್ಥಿಯ ಹೆಸರು ಪಕ್ಷ ಹಂತ ವೋಟ್ ವೋಟ್ ದರ ಅಂತರ
   2018
   L.R. Shivarame Gowda ಜೆ ಡಿ (ಎಸ್) ಗೆದ್ದವರು 5,69,347 53% 3,24,943
   D. R. Siddaramaiah BJP ರನ್ನರ್ ಅಪ್ 2,44,404 0% 0
   2014
   ಸಿ.ಎಸ್. ಪುಟ್ಟರಾಜು ಜೆ ಡಿ (ಎಸ್) ಗೆದ್ದವರು 5,24,370 44% 5,518
   ರಮ್ಯಾ ಐ ಎನ್ ಸಿ ರನ್ನರ್ ಅಪ್ 5,18,852 44% 0
   2009
   ಎನ್. ಚೆಲುವರಾಯ ಸ್ವಾಮಿ @ ಸ್ವಾಮಿಗೌಡ ಜೆ ಡಿ (ಎಸ್) ಗೆದ್ದವರು 3,84,443 37% 23,500
   ಎಂ.ಎಚ್. ಅಂಬರೀಶ ಐ ಎನ್ ಸಿ ರನ್ನರ್ ಅಪ್ 3,60,943 35% 0
   2004
   ಅಂಬರೀಶ ಎಂ.ಎಚ್. ಐ ಎನ್ ಸಿ ಗೆದ್ದವರು 4,11,116 48% 1,24,438
   ಡಾ. ಎಸ್. ರಾಮೇಗೌಡ ಜೆ ಡಿ (ಎಸ್) ರನ್ನರ್ ಅಪ್ 2,86,678 33% 0
   1999
   ಅಂಬರೀಶ @ ಅಮರನಾಥ ಎಂ.ಎಚ್. ಐ ಎನ್ ಸಿ ಗೆದ್ದವರು 4,18,110 52% 1,52,180
   ಕೃಷ್ಣಾ ಜೆ ಡಿ (ಎಸ್) ರನ್ನರ್ ಅಪ್ 2,65,930 33% 0
   1998
   ಅಂಬರೀಶ ಜೆ ಡಿ ಗೆದ್ದವರು 4,31,439 55% 1,80,523
   ಜಿ. ಮಾದೆಗೌಡ ಐ ಎನ್ ಸಿ ರನ್ನರ್ ಅಪ್ 2,50,916 32% 0
   1996
   ಕೃಷ್ಣಾ ಜೆ ಡಿ ಗೆದ್ದವರು 3,35,852 46% 33,386
   ಜಿ. ಮಾದೇಗೌಡ ಐ ಎನ್ ಸಿ ರನ್ನರ್ ಅಪ್ 3,02,466 41% 0
   1991
   ಜಿ. ಮಾದೇಗೌಡ ಐ ಎನ್ ಸಿ ಗೆದ್ದವರು 2,59,500 42% 95,347
   ಡಿ. ರಾಮಲಿಂಗಯ್ಯ ಬಿ ಜೆ ಪಿ ರನ್ನರ್ ಅಪ್ 1,64,153 27% 0
   1989
   ಜಿ. ಮಾದೆಗೌಡ ಐ ಎನ್ ಸಿ ಗೆದ್ದವರು 3,37,024 48% 74,889
   ಎಚ್.ಎಲ್. ನಾಗೇ ಗೌಡ ಜೆ ಎನ್ ಪಿ ( ಜೆ ಪಿ) ರನ್ನರ್ ಅಪ್ 2,62,135 37% 0
   1984
   ಕೆ.ವಿ. ಶಂಕರಗೌಡ ಜೆ ಎನ್ ಪಿ ಗೆದ್ದವರು 3,19,176 59% 1,20,396
   ಎಸ್.ಎಂ. ಕೃಷ್ಣ ಐ ಎನ್ ಸಿ ರನ್ನರ್ ಅಪ್ 1,98,780 36% 0
   1980
   ಎಸ್.ಎಂ. ಕೃಷ್ಣ ಐ ಎನ್ ಸಿ (ಐ) ಗೆದ್ದವರು 2,23,675 52% 1,15,342
   ಸಿ. ಬಂಡೇಗೌಡ ಜೆ ಎನ್ ಪಿ ರನ್ನರ್ ಅಪ್ 1,08,333 25% 0
   1977
   ಕೆ. ಚಿಕಲಿಂಗಯ್ಯ ಐ ಎನ್ ಸಿ ಗೆದ್ದವರು 2,00,360 48% 5,321
   ಎಂ. ಶ್ರೀನಿವಾಸ ಬಿ ಎಲ್ ಡಿ ರನ್ನರ್ ಅಪ್ 1,95,039 47% 0

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Ambareesh fans protested against MP L.R.Shivarame Gowda near Doddarasinakere gate. During this time fans asked question to Actor Upendra.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more