ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಕ್ಕರೆ ಬೆಳ್ಳೂರಲ್ಲಿ ನಕಲಿ ವೈದ್ಯೆ ಪತ್ತೆ:ದಾಳಿ ವಿಷಯ ತಿಳಿದು ಪರಾರಿ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮದ್ದೂರು, ಸೆಪ್ಟೆಂಬರ್.28:ತಾನು ವೈದ್ಯೆ ಎನ್ನುತ್ತಾ ಮನೆಯಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯೆ ಮನೆ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ ನಡೆಸಿರುವ ಘಟನೆ ತಾಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ನಡೆದಿದೆ.

ಆದರೆ ದಾಳಿಯ ವಿಷಯ ತಿಳಿಯುತ್ತಿದ್ದಂತೆಯೇ ವೈದ್ಯೆ ನಾಪತ್ತೆಯಾಗಿದ್ದಾರೆ. ಭಾರತಿ ಎಂಬಾಕೆಯೇ ನಕಲಿ ವೈದ್ಯೆಯಾಗಿದ್ದು, ಈಕೆ ಕೊಕ್ಕರೆ ಬೆಳ್ಳೂರಿನ ತನ್ನ ಮನೆಯಲ್ಲಿ ಗ್ರಾಮದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಳು ಎನ್ನಲಾಗಿದೆ.

ನಾಯಿ ಕಚ್ಚಿದ್ದಕ್ಕೆ ಪಶುವೈದ್ಯರ ಬಂಧನ, ಪೊಲೀಸರ ವಿರುದ್ಧ ಡಾಕ್ಟರ್ಸ್ ಗರಂನಾಯಿ ಕಚ್ಚಿದ್ದಕ್ಕೆ ಪಶುವೈದ್ಯರ ಬಂಧನ, ಪೊಲೀಸರ ವಿರುದ್ಧ ಡಾಕ್ಟರ್ಸ್ ಗರಂ

ಆದರೆ ಕಳೆದ ಐದು ವರ್ಷಗಳಿಂದ ಈಕೆ ಚಿಕಿತ್ಸೆ ನೀಡುತ್ತಿದ್ದರೂ ಯಾರಿಗೂ ಆಕೆ ನಕಲಿ ವೈದ್ಯೆ ಎಂಬ ಸಂಶಯವೇ ಬಂದಿರಲಿಲ್ಲ. ಈ ನಡುವೆ ಆಕೆ ವೈದ್ಯೆ ಅಲ್ಲ ನಕಲಿ ವೈದ್ಯೆ ಎಂಬುದು ಕೆಲವರ ಗಮನಕ್ಕೆ ಬಂದಿದೆ. ಹೀಗಾಗಿ ಆರೋಗ್ಯ ಇಲಾಖೆ ಹಾಗೂ ತಹಸೀಲ್ದಾರ್ ಕಚೇರಿಗೆ ಮಾಹಿತಿ ನೀಡಿದ್ದಾರೆ.

A fake doctor was treating patients at home

ನಕಲಿ ಪಾಸ್‌ಪೋರ್ಟ್‌: ವಿದೇಶಕ್ಕೆ ಹೊರಟಿದ್ದ ನೇಪಾಳ ಯುವತಿ ಸೆರೆನಕಲಿ ಪಾಸ್‌ಪೋರ್ಟ್‌: ವಿದೇಶಕ್ಕೆ ಹೊರಟಿದ್ದ ನೇಪಾಳ ಯುವತಿ ಸೆರೆ

ಖಚಿತ ಮಾಹಿತಿ ಮೇರೆಗೆ ಮದ್ದೂರು ತಹಸೀಲ್ದಾರ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮನೆ ಮೇಲೆ ದಾಳಿ ಮಾಡಿದ್ದಾರೆ. ಆದರೆ ಅದು ಹೇಗೋ ದಾಳಿಯ ಸುಳಿವು ದೊರೆತ ಹಿನ್ನಲೆಯಲ್ಲಿ ಭಾರತಿ ನಾಪತ್ತೆಯಾಗಿದ್ದಾರೆ.

A fake doctor was treating patients at home

ನಕಲಿ ಪದವಿ: ಹರ್ಮನ್‌ಪ್ರೀತ್ ಕೌರ್ ಡಿಎಸ್‌ಪಿ ಹುದ್ದೆ ವಾಪಸ್ನಕಲಿ ಪದವಿ: ಹರ್ಮನ್‌ಪ್ರೀತ್ ಕೌರ್ ಡಿಎಸ್‌ಪಿ ಹುದ್ದೆ ವಾಪಸ್

ಆದರೆ ದಾಳಿ ನಡೆಸಿದ ಅಧಿಕಾರಿಗಳು ಮನೆ ಪರಿಶೀಲನೆ ನಡೆಸಿದಾಗ ವೈದ್ಯಕೀಯ ಪರಿಕರಗಳು, ಅವಧಿ ಮೀರಿದ ಔಷಧ ಮತ್ತು ಮಾತ್ರೆಗಳು ಪತ್ತೆಯಾಗಿವೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ನಕಲಿ ವೈದ್ಯೆ ಭಾರತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

English summary
A fake doctor was treating patients at home. Finally, the villagers knew she was not a doctor and complained against her. Then What happened? Read this article
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X