ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದೇ ದಿನ 62 ಪ್ರಕರಣ; ಬೆಚ್ಚಿಬಿದ್ದ ಮಂಡ್ಯ ಜಿಲ್ಲೆ

By ಮಂಡ್ಯ ಪ್ರತಿನಿಧಿ
|
Google Oneindia Kannada News

ಮಂಡ್ಯ, ಮೇ 19: ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಅಬ್ಬರಿಸುವಂತೆ ಕಾಣುತ್ತಿದೆ. ಮಂಗಳವಾರ ಒಂದೇ ದಿನ ಇಲ್ಲಿ ಬರೋಬ್ಬರಿ 62 ಪ್ರಕರಣಗಳು ದೃಢಪಟ್ಟಿರುವ ಸಂಗತಿ ಜಿಲ್ಲೆಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಜಿಲ್ಲೆಯಲ್ಲಿ ಇದೀಗ ಸೋಂಕಿತರ ಸಂಖ್ಯೆ ಒಟ್ಟು 151ಕ್ಕೆ ಏರಿದೆ.

ಇಂದು ದೃಢಪಟ್ಟ ಪ್ರಕರಣಗಳಲ್ಲಿ, ಎಲ್ಲರೂ ಕ್ವಾರಂಟೈನ್ ನಲ್ಲಿದ್ದು, ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದವರಾಗಿದ್ದಾರೆ. ಒಂದೇ ದಿನದಲ್ಲಿ ಇಷ್ಟು ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಕಂಡ ರಾಜ್ಯದ ಮೊದಲ ಜಿಲ್ಲೆ ಇದಾಗಿದೆ.

ಸಕ್ಕರೆ ನಾಡು ಮಂಡ್ಯಕ್ಕೆ ಮುಂಬೈನಿಂದ ಅಂಟಿಕೊಂಡಿದೆ ಕೊರೊನಾ ಕಹಿಸಕ್ಕರೆ ನಾಡು ಮಂಡ್ಯಕ್ಕೆ ಮುಂಬೈನಿಂದ ಅಂಟಿಕೊಂಡಿದೆ ಕೊರೊನಾ ಕಹಿ

ಮಂಡ್ಯದ ಕೆ.ಆರ್.ಪೇಟೆಗೆ ಮುಂಬೈನಿಂದ ಬರುವವರ ಸಂಖ್ಯೆ ಹೆಚ್ಚಿದ್ದು, ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಈ ವಲಸಿಗರಲ್ಲಿಯೇ ಸೋಂಕು ದೃಢಪಡುತ್ತಿರುವುದು, ಜಿಲ್ಲೆಗೆ ಸೋಂಕು ವ್ಯಾಪಿಸುವ ಆತಂಕ ಹುಟ್ಟಿಕೊಂಡಿದೆ. ಎರಡು ದಿನಗಳ ಹಿಂದಷ್ಟೇ ಒಂದೇ ದಿನ 22 ಸೋಂಕುಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 72ಕ್ಕೆ ಏರಿತ್ತು. ಮುಂಬೈನ ನಂಟಿನಿಂದಲೇ ಮಂಡ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿತ್ತು. ಇಂದು ಮತ್ತೆ 62 ಪ್ರಕರಣಗಳು ಕಂಡುಬಂದಿರುವುದು ಭೀತಿ ಆವರಿಸುವಂತೆ ಮಾಡಿದೆ.

62 New Corona Positive Cases Reported Today In Mandya District

ಮಂಡ್ಯದಲ್ಲಿ ಈವರೆಗೆ 21 ಮಂದಿ ಗುಣಮುಖರಾಗಿದ್ದರೆ, 130 ಪ್ರಕರಣಗಳು ಸಕ್ರಿಯವಾಗಿವೆ. ಒಟ್ಟು ಸೋಂಕಿತರ ಸಂಖ್ಯೆ ನೂರೈವತ್ತನ್ನು ಮೀರಿದೆ.

English summary
62 new corona positive cases reported today in mandya created fear among people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X