ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯದಲ್ಲಿ ಸ್ಪರ್ಧಿಸಿದ್ದೇಕೆ: ರಹಸ್ಯ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಅ 25: ಕಳೆದ ಲೋಕಸಭಾ ಚುನಾವಣೆಯಲ್ಲಿ ಹೈವೋಲ್ಟೇಜ್ ಕಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದನ್ನು ಬಹುಶಃ ಇಂದಿಗೂ ದಳಪತಿಗಳು ಮರೆಯಲಾರರು. ಆ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಖುದ್ದು ನಿಖಿಲ್ ಕೂಡಾ ಹಲವು ಬಾರಿ ಹೇಳಿದ್ದಾರೆ.

ನಿಖಿಲ್ ಸ್ಯೆನ್ಯದ ಸಮಿತಿ ವತಿಯಿಂದ, ದಾಸರಹಳ್ಳಿಯ ಸ್ಥಳೀಯ ಜೆಡಿಎಸ್ ಶಾಸಕರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಂಡ್ಯದಲ್ಲಿ ಯಾವ ಕಾರಣಕ್ಕಾಗಿ ಸ್ಪರ್ಧೆ ಮಾಡಿದೆ ಎನ್ನುವುದನ್ನು ವಿವರಿಸಿದ್ದಾರೆ.

ನಿಖಿಲ್-ಹರೀಶ್ ಗೌಡ ಭೇಟಿ: ಜಿ.ಟಿ.ದೇವೇಗೌಡ ಸುತ್ತ ಮತ್ತೆ ಗುಸುಗುಸು ಸುದ್ದಿನಿಖಿಲ್-ಹರೀಶ್ ಗೌಡ ಭೇಟಿ: ಜಿ.ಟಿ.ದೇವೇಗೌಡ ಸುತ್ತ ಮತ್ತೆ ಗುಸುಗುಸು ಸುದ್ದಿ

"ಮಂಡ್ಯ ಚುನಾವಣೆಯ ಬಗ್ಗೆ ಮಾತನಾಡಿ ಎಂದು ಸ್ನೇಹಿತರು ಮತ್ತು ಜೆಡಿಎಸ್ ಕಾರ್ಯಕರ್ತರು ಒತ್ತಾಯವನ್ನು ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ನಾನು ಯಾಕೆ ಅಲ್ಲಿಂದ ಲೋಕಸಭೆಗೆ ಸ್ಪರ್ಧಿಸಿದೆ ಎನ್ನುವುದನ್ನು ಹೇಳುತ್ತೇನೆ" ಎಂದು ನಿಖಿಲ್ ಕುಮಾರಸ್ವಾಮಿ ಅಂದಿನ ವಿದ್ಯಮಾನವನ್ನು ವಿವರಿಸಿದ್ದಾರೆ.

ಬೊಮ್ಮಾಯಿ- ಸಿದ್ದರಾಮಯ್ಯ- ಕುಮಾರಸ್ವಾಮಿ ನಡುವೆ 'ಕುರಿ - ಕಂಬಳಿ ಫೈಟ್' ಜೋರು! ಬೊಮ್ಮಾಯಿ- ಸಿದ್ದರಾಮಯ್ಯ- ಕುಮಾರಸ್ವಾಮಿ ನಡುವೆ 'ಕುರಿ - ಕಂಬಳಿ ಫೈಟ್' ಜೋರು!

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ 7,03,660 ಮತಗಳನ್ನು ಪಡೆದು, ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರು ನಿಖಿಲ್ ಕುಮಾರಸ್ವಾಮಿಯವನ್ನು 1,25,786 ಮತಗಳ ಅಂತರದಿಂದ ಸೋಲಿಸಿದ್ದರು. ಮುಂದೆ ಓದಿ...

 ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಶಿವರಾಮೇ ಗೌಡ್ರು ನಿಂತು ಗೆದ್ದರು

ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಶಿವರಾಮೇ ಗೌಡ್ರು ನಿಂತು ಗೆದ್ದರು

"ಮಂಡ್ಯ ಚುನಾವಣೆಯಲ್ಲಿ ನಿಲ್ಲಬೇಕೆಂದು ನನಗೆ ಯಾವುದೇ ಯೋಜನೆಗಳು ಇರಲಿಲ್ಲ, ಇದ್ದಿದ್ದರೆ ಅದಕ್ಕಾಗಿ ಪ್ಲ್ಯಾನಿಂಗ್ ಮಾಡುತ್ತಿದ್ದೆ. ಆ ಚುನಾವಣೆಗೆ ಮೂರ್ನಾಲ್ಕು ತಿಂಗಳ ಮುನ್ನ ನಡೆದ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಎಲ್.ಆರ್. ಶಿವರಾಮೇ ಗೌಡ್ರು ನಿಂತು ಗೆದ್ದರು. ನಾನು ಪ್ಲ್ಯಾನ್ ಮಾಡಿದ್ದರೆ, ಬೈ ಎಲೆಕ್ಷನ್‌ನಲ್ಲಿ ನಾನೇ ಸ್ಪರ್ಧಿಸುತ್ತಿದೆ. ಅವತ್ತು ಯಾರೂ ನನ್ನನ್ನು ತಿರಸ್ಕಾರ ಮಾಡುತ್ತಿರಲಿಲ್ಲ"ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

 ಉಸಿರು ಇರುವವರೆಗೆ ನಾನು ಈ ಮಾತನ್ನು ಹೇಳುತ್ತೇನೆ, 5.75 ಲಕ್ಷ ಜನ ನನಗೆ ವೋಟ್ ಹಾಕಿದ್ದಾರೆ

ಉಸಿರು ಇರುವವರೆಗೆ ನಾನು ಈ ಮಾತನ್ನು ಹೇಳುತ್ತೇನೆ, 5.75 ಲಕ್ಷ ಜನ ನನಗೆ ವೋಟ್ ಹಾಕಿದ್ದಾರೆ

"2019ರಲ್ಲಿ ಸಾರ್ವತ್ರಿಕ ಚುನಾವಣೆ ಏನು ನಡೆಯಿತೋ, ಆಗ ನನಗೆ ಅಲ್ಲಿಂದ ನಿಲ್ಲಬೇಕಾದ ಅನಿವಾರ್ಯತೆ ಬಂತು. ಮಂಡ್ಯ ಜಿಲ್ಲೆಯ ಏಳೂ ಶಾಸಕರು, ಮಂಡ್ಯ ಭಾಗದ ಕಾರ್ಯಕರ್ತ ಬಂಧುಗಳ ಭಾವನೆಗೆ ಬೆಲೆಕೊಟ್ಟು, ಅವರೇನು ಪ್ರೀತಿ ತೋರಿಸಿದರು, ಮಂಡ್ಯದಲ್ಲಿ ನೀವು ಬರಬೇಕು ಎನ್ನುವ ಒತ್ತಾಯವನ್ನು ತಿರಸ್ಕರಿಸಲು ನಮ್ಮ ಕುಟುಂಬದಿಂದ ಆಗಲಿಲ್ಲ. ಆ ಕಾರಣಕ್ಕಾಗಿ ನಾನು ಚುನಾವಣೆಗೆ ಸ್ಪರ್ಧೆ ಮಾಡಿದೆ. ಕೊನೆಯ ಉಸಿರು ಇರುವವರೆಗೆ ನಾನು ಈ ಮಾತನ್ನು ಹೇಳುತ್ತೇನೆ, 5.75 ಲಕ್ಷ ಜನ ನನಗೆ ವೋಟ್ ಹಾಕಿದ್ದರು" - ನಿಖಿಲ್ ಕುಮಾರಸ್ವಾಮಿ.

 ಸಿ.ಎಸ್. ಪುಟ್ಟರಾಜು ಅವರಿಗೆ 5.25 ಲಕ್ಷ ಮತಗಳು ಬಂದು ಅವರು ಗೆದ್ದಿದ್ದರು

ಸಿ.ಎಸ್. ಪುಟ್ಟರಾಜು ಅವರಿಗೆ 5.25 ಲಕ್ಷ ಮತಗಳು ಬಂದು ಅವರು ಗೆದ್ದಿದ್ದರು

"ಹಿಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾಗಿದ್ದ ಸಿ.ಎಸ್. ಪುಟ್ಟರಾಜು ಅವರಿಗೆ 5.25 ಲಕ್ಷ ಮತಗಳು ಬಂದು ಅವರು ಗೆದ್ದಿದ್ದರು, ನನಗೆ, 5.75 ಲಕ್ಷ ಮತಗಳು ಬಂದರೂ ನಾನು ಸೋತೆ. ಐವತ್ತು ಸಾವಿರ ಹೆಚ್ಚಿನ ಜನರು ನನಗೆ ವೋಟ್ ಹಾಕಿದ್ದಾರೆ, ಪ್ರತೀ ಒಬ್ಬರ ಜೀವನದಲ್ಲಿ ಎಡವಿ ಬಿದ್ದಾಗಲೇ ಜೀವನಪಾಠವನ್ನು ಕಲಿಯಲು ಸಾಧ್ಯ. ಸೋಲೇ ಗೆಲುವಿನ ಮೆಟ್ಟಿಲು ಎನ್ನುವ ಮಾತು ಸತ್ಯ. ಯಾವತ್ತಿಗೂ ನಾನು ಮಂಡ್ಯ ಜಿಲ್ಲೆಯ ಜನತೆಯ ಪರವಾಗಿ ಇರುತ್ತೇನೆ"ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

 ಮಂಡ್ಯದಲ್ಲಾದ ಸೋಲು, ನನ್ನ ಸೋಲಲ್ಲ, ಇದು ಕಾರ್ಯಕರ್ತರ ಸೋಲು

ಮಂಡ್ಯದಲ್ಲಾದ ಸೋಲು, ನನ್ನ ಸೋಲಲ್ಲ, ಇದು ಕಾರ್ಯಕರ್ತರ ಸೋಲು

"ಮಂಡ್ಯ ಜಿಲ್ಲೆಯ ಬಗ್ಗೆ ತುಂಬಾ ಪ್ರೀತಿಯನ್ನು ಇಟ್ಟುಕೊಂಡಿದ್ದೇನೆ, ನಿರಂತರವಾಗಿ ನಿಮ್ಮ ಸಂಪರ್ಕದಲ್ಲಿ ಇರುತ್ತೇನೆ. ನಮ್ಮ ಏಳು ಶಾಸಕರ ಜೊತೆ ಕೈಜೋಡಿಸುತ್ತೇನೆ, ರಾಮನಗರದಿಂದ ಸ್ಪರ್ಧಿಸಿ ವಿಧಾನಸೌಧದ ಮೆಟ್ಟಲು ಹತ್ತಬೇಕು ಎಂದು ಸರವಣ ಅವರು ಹೇಳುತ್ತಿದ್ದಾರೆ. ಮಂಡ್ಯದಲ್ಲಾದ ಸೋಲು, ನನ್ನ ಸೋಲಲ್ಲ, ಅದು ಕಾರ್ಯಕರ್ತರ ಸೋಲು. ಇದನ್ನು ನನಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ರಾಜಕೀಯ ಷಡ್ಯಂತ್ರದಿಂದ ನಾನು ಸೋಲಬೇಕಾಯಿತು" ಎಂದು ನಿಖಿಲ್ ಕುಮಾರಸ್ವಾಮಿ ಅಂದಿನ ವಿದ್ಯಮಾನವನ್ನು ನೆನಪಿಸಿಕೊಂಡಿದ್ದಾರೆ.

English summary
2019 Loksabha Election Defeat In Mandya: JDS Leader Nikhil Kumaraswamy Revealed The Reason. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X