ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದ್ದೂರಿನ ಬಟ್ಟೆ ಫ್ಯಾಕ್ಟರಿಯಲ್ಲಿ ಕೊರೊನಾ ಆತಂಕ

|
Google Oneindia Kannada News

ಮಂಡ್ಯ, ಡಿಸೆಂಬರ್ 07: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ವಲಯದ ಗಿಲ್ ವುಡ್ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯಲ್ಲಿ ಸಿಬ್ಬಂದಿಗೆ ಕೊರೊನಾ ಸೋಂಕು ಹರಡಿರುವುದು ಬೆಳಕಿಗೆ ಬಂದಿದ್ದು ಇದರಿಂದ ಆತಂಕ ಸೃಷ್ಟಿಯಾಗಿದೆ.

ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 14ಕ್ಕೂ ಹೆಚ್ಚು ಮಂದಿ ಮಹಿಳಾ ಕಾರ್ಮಿಕರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಬೆನ್ನಲ್ಲೇ ಒಂದೇ ಕಾರ್ಖಾನೆಯಲ್ಲಿ ಇಷ್ಟೊಂದು ಮಂದಿಗೆ ಸೋಂಕು ಹರಡಿರುವುದು ಭಯ ಪಡುವಂತಾಗಿದೆ. ಮುಂದೆ ಓದಿ...

 ಕರ್ತವ್ಯ ನಿರ್ವಹಣೆಗೆ ಕಾರ್ಮಿಕರ ನಿರಾಕರಣೆ

ಕರ್ತವ್ಯ ನಿರ್ವಹಣೆಗೆ ಕಾರ್ಮಿಕರ ನಿರಾಕರಣೆ

ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ತಾಲೂಕು ಆಸ್ಪತ್ರೆ ವತಿಯಿಂದ ಕೋವಿಡ್-19 ಪರೀಕ್ಷೆಗೆ ಒಳಪಡಿಸಿದ ವೇಳೆ 70 ಮಂದಿ ಕಾರ್ಮಿಕರ ಪೈಕಿ 14 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ಕಂಡುಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಮಿಕರು ಕರ್ತವ್ಯ ನಿರ್ವಹಿಸಲು ನಿರಾಕರಿಸಿದರು ಎಂದು ಹೇಳಲಾಗಿದೆ.

ಶಾಕಿಂಗ್ ಸುದ್ದಿ: ಲಕ್ಷಣಗಳಿಲ್ಲದಿದ್ದರೂ ಮಕ್ಕಳಿಗೆ ಕೊವಿಡ್-19 ಸೋಂಕು!ಶಾಕಿಂಗ್ ಸುದ್ದಿ: ಲಕ್ಷಣಗಳಿಲ್ಲದಿದ್ದರೂ ಮಕ್ಕಳಿಗೆ ಕೊವಿಡ್-19 ಸೋಂಕು!

 ಕಾರ್ಖಾನೆಯಲ್ಲಿದ್ದಾರೆ 550ಕ್ಕೂ ಹೆಚ್ಚು ಕಾರ್ಮಿಕರು

ಕಾರ್ಖಾನೆಯಲ್ಲಿದ್ದಾರೆ 550ಕ್ಕೂ ಹೆಚ್ಚು ಕಾರ್ಮಿಕರು

ಈ ನಡುವೆ 550ಕ್ಕೂ ಹೆಚ್ಚು ಮಂದಿ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕೆಲ ಮಂದಿಗೆ ಕೊರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಕಾರ್ಖಾನೆಗೆ ತೆರಳಲು ನಿರಾಕರಿಸಿದರಲ್ಲದೇ ನೌಕರರಿಗೆ ವೇತನ ಸಹಿತ ರಜೆ ಘೋಷಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಇದಕ್ಕೆ ಅಧಿಕಾರಿಗಳು ಸೊಪ್ಪು ಹಾಕದೆ ಎಂದಿನಂತೆ ಕರ್ತವ್ಯ ನಿರ್ವಹಿಸುವ ನೌಕರರು ಎರಡು ದಿನಗಳಲ್ಲಿ ಕೊರೊನಾ ಪರೀಕ್ಷೆ ನಡೆಸುವಂತೆ ಸೂಚಿಸಿದರಲ್ಲದೇ ಯಾವುದೇ ರೋಗ ಲಕ್ಷಣಗಳು ಕಂಡು ಬರದ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.

 ಕಾರ್ಖಾನೆಗೆ ತಹಶೀಲ್ದಾರ್ ಎಚ್ಚರ

ಕಾರ್ಖಾನೆಗೆ ತಹಶೀಲ್ದಾರ್ ಎಚ್ಚರ

ಕಾರ್ಮಿಕರ ಬೇಡಿಕೆಯನ್ವಯ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ ತಹಶೀಲ್ದಾರ್ ವಿಜಯಕುಮಾರ್ ಸೋಮವಾರದಿಂದಲೇ ಕಾರ್ಖಾನೆಗೆ ರಜೆ ಘೋಷಿಸುವಂತೆ ಸೋಂಕಿತ ನೌಕರರನ್ನು ಸೂಕ್ತ ಚಿಕಿತ್ಸೆಗೆ ರವಾನಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಯಾಯಿತು. ಈಗಾಗಲೇ ಸೋಂಕು ಸಕ್ರಿಯವಾಗಿರುವ 14ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಮದ್ದೂರು, ಕುಣಿಗಲ್, ಚನ್ನಪಟ್ಟಣ ಆಸ್ಪತ್ರೆಗಳಲ್ಲಿ ಒಳ ರೋಗಿಗಳಾಗಿ ಚಿಕಿತ್ಸೆಗೆ ದಾಖಲಾಗಿರುವುದಾಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಆಶಾಲತಾ ತಿಳಿಸಿದ್ದಾರೆ.

 ಮಂಡ್ಯದಲ್ಲಿರುವ ಕೊರೊನಾ ಪ್ರಕರಣಗಳೆಷ್ಟು?

ಮಂಡ್ಯದಲ್ಲಿರುವ ಕೊರೊನಾ ಪ್ರಕರಣಗಳೆಷ್ಟು?

ಡಿಸೆಂಬರ್ 7ರ ವರದಿಯಂತೆ ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ 18869 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 18376 ಮಂದಿ ಗುಣಮುಖರಾಗಿದ್ದಾರೆ. ಸದ್ಯಕ್ಕೆ 346 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯಲ್ಲಿ ಇದುವರೆಗೂ 147 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

Recommended Video

ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಆಗಿದೆ BJP ಪರಿಸ್ಥಿತಿ!! | Tejasvi Surya | Oneindia Kannada

English summary
14 workers of gilwood garments factory in Somanahalli industrial zone of Maddur tested coronavirus positive. It has created anxiety among workers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X