ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡ್ಯಕ್ಕೆ ಕಂಟಕವಾದ ಮಳವಳ್ಳಿ ತಬ್ಲಿಘಿ ಸಂಪರ್ಕ

|
Google Oneindia Kannada News

ಮಂಡ್ಯ, ಏಪ್ರಿಲ್ 24: ಮಂಡ್ಯ ಜಿಲ್ಲೆಗೆ ಮಳವಳ್ಳಿ ಕಂಟಕವಾಗಿ ಪರಿಣಮಿಸುತ್ತಿದ್ದು, ಇದೀಗ ಮಳವಳ್ಳಿಯಲ್ಲಿ ಮತ್ತೆರಡು ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ. ಒಟ್ಟಾರೆ ಜಿಲ್ಲೆಯಲ್ಲಿ ಪ್ರಕರಣ 14ಕ್ಕೆ ಏರಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.

ಮಳವಳ್ಳಿಯಲ್ಲಿ ತಬ್ಲಿಘಿಗಳೊಂದಿಗೆ ಸಂಪರ್ಕದಲ್ಲಿದ್ದ ಒಬ್ಬ ಮಹಿಳೆಗೂ ಕೊರೊನಾ ಸೋಂಕು ತಗುಲಿದ್ದು ಆತಂಕಕಾರಿಯಾಗಿದೆ. ಸದ್ಯ ಮಂಡ್ಯದಲ್ಲಿ ಪ್ರಕರಣಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಈ ಪೈಕಿ 13 ಪ್ರಕರಣಗಳು ಮಳವಳ್ಳಿ ತಾಲೂಕೊಂದರಲ್ಲೇ ಪತ್ತೆಯಾಗಿರುವುದು ಜನ ಬೆಚ್ಚಿ ಬೀಳುವಂತಾಗಿದೆ.

 ಐವರಲ್ಲಿ ನಾಲ್ವರಿಗೆ ನೆಗೆಟಿವ್

ಐವರಲ್ಲಿ ನಾಲ್ವರಿಗೆ ನೆಗೆಟಿವ್

ಮಂಡ್ಯದ ಒಂದು ಪ್ರಕರಣವೂ ಸೇರಿದಂತೆ ಒಟ್ಟು 14 ಪ್ರಕರಣಗಳಲ್ಲಿ 14 ದಿನಗಳ ಐಸೊಲೇಷನ್ ಚಿಕಿತ್ಸೆ ಮುಗಿಸಿರುವ ಐದು ಮಂದಿ ಸೋಂಕಿತರಲ್ಲಿ ನಾಲ್ಕು ಜನರ ವರದಿ ನೆಗಟಿವ್ ಬಂದಿದ್ದು, ಮತ್ತೊಬ್ಬನ ವರದಿ ಪಾಸಿಟಿವ್ ಬಂದಿದೆ. ನೆಗೆಟಿವ್ ಬಂದಿರುವ ನಾಲ್ಕು ಜನರನ್ನು ಮತ್ತೆ ಮುಂದಿನ 14 ದಿನಗಳ ಕಾಲ ಕ್ವಾರೆಂಟೈನ್ ಮಾಡಲಾಗುವುದು. ಪಾಸಿಟಿವ್ ಬಂದಿರುವ ವ್ಯಕ್ತಿಯನ್ನು ಮತ್ತೆ 14 ದಿನಗಳ ಕಾಲ ಐಸೊಲೇಷನ್ ವಾರ್ಡ್ ನಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಗುವುದಾಗಿ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.

 ಮಳವಳ್ಳಿಯ ಒಬ್ಬ ಮಹಿಳೆ, ಪುರುಷನಿಗೆ ಸೋಂಕು

ಮಳವಳ್ಳಿಯ ಒಬ್ಬ ಮಹಿಳೆ, ಪುರುಷನಿಗೆ ಸೋಂಕು

ಮಳವಳ್ಳಿ ಪಟ್ಟಣದ 47 ವರ್ಷದ ವ್ಯಕ್ತಿ ಹಾಗೂ 28 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. 47 ವರ್ಷದ ವ್ಯಕ್ತಿ ಪಟ್ಟಣದ ಈದ್ಗಾ ಮಸೀದಿ ಬಳಿ ವಾಸವಾಗಿದ್ದು, ಟೀ ಅಂಗಡಿ ನಡೆಸುತ್ತಿದ್ದಾರೆ. ಈದ್ಗಾ ಮಸೀದಿ ಬಳಿ ನಮಾಜ್ ಮಾಡಲು ಬಂದಿದ್ದರು ಹಾಗೂ ತಬ್ಲಿಘಿಯಿಂದ ಆಗಮಿಸಿದ್ದ ಧರ್ಮಗುರುಗಳ ಜೊತೆಯೂ ನಮಾಜ್ ಮಾಡಿದ್ದರು ಎಂದು ಹೇಳಿದ್ದಾರೆ. ತಬ್ಲಿಘಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಕಾರಣ ಏ.11ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಬ್ಬರನ್ನೂ ಕ್ವಾರೆಂಟೈನ್ ಮಾಡಲಾಗಿತ್ತು. ಇವರನ್ನು ಪರೀಕ್ಷೆಗೆ ಒಳಪಡಿಸಿ ಏ.14ರಂದು ಗಂಟಲ ಪರೀಕ್ಷೆಗೆ ಒಳಪಡಿಸಿ, 16ರಂದು ಪರೀಕ್ಷಾ ವರದಿ ಬಂದಿತ್ತು. ಅದು ಅಪೂರ್ಣವಾಗಿದ್ದರಿಂದ ಏ.20ರಂದು ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಫಲಿತಾಂಶ ಪಾಸಿಟಿವ್ ಎಂದು ದೃಢಪಟ್ಟಿದೆ ಎಂದಿದ್ದಾರೆ.

 ಮಹಿಳೆ ಸಂಬಂಧಿಗಳಿಗೆ ಕ್ವಾರಂಟೈನ್

ಮಹಿಳೆ ಸಂಬಂಧಿಗಳಿಗೆ ಕ್ವಾರಂಟೈನ್

ಈ ವ್ಯಕ್ತಿಯನ್ನು ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಯಾವುದೇ ರೋಗ ಲಕ್ಷಣಗಳಿಲ್ಲದೆ ಸಾಮಾನ್ಯರಂತೆ ಇದ್ದಾರೆ. ಸೋಂಕಿತ ವ್ಯಕ್ತಿ ಜೊತೆ ಒಂಬತ್ತು ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಇವರನ್ನೂ ಕ್ವಾರೈಂಟೈನ್ನಲ್ಲಿಟ್ಟು ನಿಗಾ ವಹಿಸಲಾಗಿದೆ. ಮತ್ತೊಬ್ಬರು ಸೋಂಕಿತ 28 ವರ್ಷದ ಮಹಿಳೆ ಕೋಟೆ ಬೀದಿ ಮಸೀದಿಯ ಎರಡನೇ ಮನೆಯಲ್ಲಿ ವಾಸವಾಗಿದ್ದಾರೆ. ಇವರು 179ರ ವ್ಯಕ್ತಿ ಜೊತೆ ನಿಕಟ ಸಂಪರ್ಕ ಹೊಂದಿದ್ದರು. 237ರ ವ್ಯಕ್ತಿಯೊಂದಿಗೂ ಸಂಪರ್ಕ ಹೊಂದಿರುವುದು ವಿಚಾರಣೆ ವೇಳೆ ಕಂಡುಬಂದಿತ್ತು. ಹೀಗಾಗಿ ಆಕೆಯ ತಂದೆ, ಅತ್ತೆ, ಮಾವ, ಗಂಡ ಹಾಗೂ ಮಕ್ಕಳನ್ನು ಕ್ವಾರೆಂಟೈನ್ ಗೆ ಒಳಪಡಿಸಲಾಗಿತ್ತು ಎಂದು ಹೇಳಿದ್ದಾರೆ.

 ಮಂಡ್ಯದಲ್ಲಿ 994 ಮಂದಿಗೆ ಗಂಟಲ ದ್ರವದ ಪರೀಕ್ಷೆ

ಮಂಡ್ಯದಲ್ಲಿ 994 ಮಂದಿಗೆ ಗಂಟಲ ದ್ರವದ ಪರೀಕ್ಷೆ

ಇವರ ರಕ್ತ ಮತ್ತು ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷಿಸಿದಾಗ ಒಬ್ಬರಿಗೆ ಮಾತ್ರ ಪಾಸಿಟಿವ್ ಬಂದಿದೆ. ಪತಿ, ಅತ್ತೆ, ಮಾವ ಅವರ ಪರೀಕ್ಷಾ ವರದಿ ನೆಗೆಟಿವ್ ಬಂದರೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಮಹಿಳೆಯ ಪ್ರಾಥಮಿಕ ಹಾಗೂ ಎರಡನೇ ಹಂತದಲ್ಲಿ ಸಂಪರ್ಕಕ್ಕೆ ಬಂದಂತಹ ವ್ಯಕ್ತಿಗಳನ್ನು ಸಹ ಗುರುತಿಸಿ ಕ್ವಾರೆಂಟೈನ್ ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ. ಮಳವಳ್ಳಿ ಮತ್ತು ಮಂಡ್ಯದ 994 ಮಂದಿಗೆ ಗಂಟಲ ದ್ರವದ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 651 ನೆಗೆಟಿವ್, 14 ಪಾಸಿಟಿವ್ ವರದಿ ಬಂದಿದೆ. ಉಳಿದ 329 ಪ್ರಕರಣಗಳ ಫಲಿತಾಂಶ ಬರಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.

English summary
Till now 14 coronavirus positive cases have been found in mandya,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X