ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆ: ವಸತಿ ಸಚಿವರ ಭರವಸೆ

By Manjunatha
|
Google Oneindia Kannada News

ಕೊಡಗು, ಆಗಸ್ಟ್ 23: ಕೊಡಗಿನಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಹಳೆ ಮನೆಯ ಪಹಣಿ ಇದ್ದರೆ ಹೊಸ ಮನೆ ಕಟ್ಟಿ ಕೊಡುವುದಾಗಿ ವಸತಿ ಸಚಿವ ಯು.ಟಿ.ಖಾದರ್ ಇಂದು ಭರವಸೆ ನೀಡಿದ್ದಾರೆ.

ಇಂದು ಕೊಡಗಿಗೆ ಭೇಟಿ ನೀಡಿದ್ದ ಅವರು, ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ನಿರಾಶ್ರಿತರೊಂದಿಗೆ ಮಾತನಾಡಿದರು.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಪಹಣಿ ಹೊಂದಿದವರಿಗೆ ಹಕ್ಕು ಪತ್ರ ನೀಡುವ ಮೂಲಕ ಹೊಸ ಮನೆ ಕಟ್ಟಿಕೊಡಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದ ಅವರು, ನಿರಾಶ್ರಿತರಿಗೆ ಧೈರ್ಯ ತುಂಬಿದರು.

Who lost house due flood in Kodagu will get new house: Khader

ಕೊಡಗು ಜಿಲ್ಲೆಯಲ್ಲಿ ಪ್ರವಾಃ ಪೀಡಿತ ಸ್ಥಳಗಳು ಹಾಗೂ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಜೊತೆಗೆ ನಿರಾಶ್ರಿತರೊಂದಿಗೂ ಮಾತನಾಡಿದರು.

ಕೊಡಗು ಪ್ರವಾಹ: 7000 ಜನರ ರಕ್ಷಣೆ, 10 ಸಾವು, 3 ನಾಪತ್ತೆ ಕೊಡಗು ಪ್ರವಾಹ: 7000 ಜನರ ರಕ್ಷಣೆ, 10 ಸಾವು, 3 ನಾಪತ್ತೆ

ಕೊಡಗಿನ ಜನರ ಕಷ್ಟಗಳಲ್ಲಿ ಸರ್ಕಾರ ಜೊತೆಯಾಗಿ ನಿಲ್ಲುತ್ತದೆ ಎಂದ ಅವರು, ಆಸರೆ ಕಳೆದುಕೊಂಡಿರುವ ನದಿ ತೀರದ ಜನರು, ಸರ್ಕಾರ ಪುನರ್ವಸತಿ ಕಲ್ಪಿಸಿಕೊಡುವ ಸ್ಥಳಕ್ಕೆ ತೆರಳಿ ಹೊಸ ಜೀವನ ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಮನೆ ಕುಸಿದಾಗ ಜೀವ ಉಳಿಸಿಕೊಂಡರು, ಗುಡ್ಡ ಕುಸಿದಾಗ ಜೀವ ಬಿಟ್ಟರು! ಮನೆ ಕುಸಿದಾಗ ಜೀವ ಉಳಿಸಿಕೊಂಡರು, ಗುಡ್ಡ ಕುಸಿದಾಗ ಜೀವ ಬಿಟ್ಟರು!

Who lost house due flood in Kodagu will get new house: Khader

ಈ ವರೆಗಿನ ಲೆಕ್ಕದ ಪ್ರಕಾರ ಸುಮಾರು 800 ಮನೆಗಳು ಮಳೆಯಿಂದ ಹಾನಿಗೊಳಗಾಗಿವೆ. ಈ ಸಂಖ್ಯೆಯಲ್ಲಿ ಅರ್ಧದಷ್ಟು ಮನೆಗಳು ಸಂಪೂರ್ಣ ನಾಮಾವಶೇಷವಾಗಿವೆ.

English summary
Who ever lost home in Kodagu floods they will get new home say Housing minister UT Khader. He visited Kodagu today and talked with flood victims.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X