ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಪಿ ಪರ ವಕಾಲತ್ತು ವಹಿಸುವುದು ಅಪರಾಧವೇ?: ಚಂದ್ರಮೌಳಿ ಪ್ರಶ್ನೆ

By Vikas Nanjappa
|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಮಡಿಕೇರಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಘೋಷಣೆಯ ಹೆಸರನ್ನು ಕಾಂಗ್ರೆಸ್ ತಡೆಹಿಡಿದಿದೆ ಎಂಬ ಸುದ್ದಿ ಹರಡಿದ್ದು, ಈ ಸಂಬಂಧ ಅನೇಕ ಗೊಂದಲಗಳು ಸೃಷ್ಟಿಯಾಗಿವೆ.

ಮಡಿಕೇರಿಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಎಚ್.ಎಸ್. ಚಂದ್ರಮೌಳಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿ ಮೆಹುಲ್ ಚೋಕ್ಸಿ ಪರ ವಕೀಲಿಕೆ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯನ್ನು ತಡೆಹಿಡಿಯಲಾಗಿದೆ ಎಂಬ ರೂಮರ್‌ಗಳ ನಡುವೆಯೇ, ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟೀಕರಣ ನೀಡಿದೆ. ಈ ಎಲ್ಲ ಬೆಳವಣಿಗೆಗಳಿಂದ ಬೇಸರಗೊಂಡಿರುವ ಚಂದ್ರಮೌಳಿ, ಪ್ರಕರಣವೊಂದರ ವಕೀಲಿಕೆ ವಹಿಸಿಕೊಳ್ಳುವುದು ಅಪರಾಧವೇ ಎಂದು ಪ್ರಶ್ನಿಸಿದ್ದಾರೆ.

Was it a crime to take up a case?: Chandramouli

'ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾದ ಬಳಿಕ ಸಿಐಡಿ ತನಿಖೆ ನಡೆಸುವ ನಿರ್ಧಾರವನ್ನು ಪ್ರಶ್ನಿಸಿದ್ದೇನೆ. ಇದು ನನ್ನನ್ನು ಅಪರಾಧಿಯನ್ನಾಗಿ ಮಾಡುತ್ತದೆಯೇ? ಈ ಪ್ರಕರಣದಲ್ಲಿ ನನ್ನ ಸಹಭಾಗಿತ್ವ ಇಷ್ಟೇ' ಎಂದು ಚಂದ್ರಮೌಳಿ ಒನ್ ಇಂಡಿಯಾಕ್ಕೆ ತಿಳಿಸಿದರು.

ಮಡಿಕೇರಿಯಲ್ಲಿ ಪ್ರಚಾರ ನಡೆಸುತ್ತಿದ್ದ ಅವರನ್ನು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಬೆಂಗೂರಿಗೆ ಕರೆಯಿಸಿಕೊಂಡಿದ್ದಾರೆ. ತಾವು ಹೈಕಮಾಂಡ್‌ನ ಮನವೊಲಿಸುವುದಾಗಿ ಚಂದ್ರಮೌಳಿ ತಿಳಿಸಿದರು.

ಮಡಿಕೇರಿ ಅಭ್ಯರ್ಥಿಗೆ ಮೆಹುಲ್ ಚೋಕ್ಸಿ ನಂಟು, ಒಟ್ಟು 4 ಬಿ-ಫಾರಂಗೆ ತಡೆಮಡಿಕೇರಿ ಅಭ್ಯರ್ಥಿಗೆ ಮೆಹುಲ್ ಚೋಕ್ಸಿ ನಂಟು, ಒಟ್ಟು 4 ಬಿ-ಫಾರಂಗೆ ತಡೆ

ಯಾವುದೇ ಲಾಬಿ ಮಾಡದೆ ಟಿಕೆಟ್ ಪಡೆದುಕೊಂಡಿದ್ದೇನೆ. ಮುಂದೆ ಈ ವಿಚಾರ ಯಾವ ಸ್ವರೂಪ ಪಡೆದುಕೊಂಡರೂ, ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಅವರು ಹೇಳಿದರು.

ಚಂದ್ರಮೌಳಿ ಅವರಿಗೆ ಟಿಕೆಟ್ ನೀಡಿದ ಬಳಿಕ ಕಾಂಗ್ರೆಸ್ ಮಾಧ್ಯಮ ಸಂಚಾಲಕ ಬ್ರಿಜೇಶ್ ಕಾಳಪ್ಪ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಚಂದ್ರಮೌಳಿ ಎದುರು ಸೋತಿರುವುದಾಗಿ ಮತ್ತು ಮುಂದೆ ಗ್ರಾಮ ಪಂಚಾಯಿತಿ ಚುನಾವಣೆಗೆ ಪ್ರಯತ್ನಿಸುವುದಾಗಿ ಹೇಳಿದ್ದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಚೋಕ್ಸಿ ವಿವಾದ ಸದ್ದುಮಾಡುತ್ತಿದ್ದಂತೆಯೇ, ಬ್ರಿಜೇಶ್ ಕಾಳಪ್ಪ ಅವರ ಬದಲು ಚಂದ್ರಮೌಳಿ ಅವರನ್ನು ಆಯ್ದುಕೊಂಡ ಕಾಂಗ್ರೆಸ್‌ನ ನಿರ್ಧಾರವನ್ನು ಬಿಜೆಪಿ ಪ್ರಶ್ನಿಸಿತ್ತು.

ಹೇಳಿದ್ದೇ ಬೇರೆ, ಚರ್ಚೆಯ ದಿಕ್ಕೇ ಬೇರೆ
ಬಳಿಕ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದ ಬ್ರಿಜೇಶ್ ಕಾಳಪ್ಪ, ಚಂದ್ರಮೌಳಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ನಾನು ಎತ್ತಿದ್ದ ವಿಚಾರಗಳು, ಪ್ರಸ್ತುತ ಚರ್ಚೆಯಾಗುತ್ತಿರುವುದಕ್ಕಿಂತ ಸಂಪೂರ್ಣ ವಿಭಿನ್ನವಾದುದು ಎಂದಿದ್ದರು.

'ನಾನೂ ಕೂಡ ವಕೀಲ. ನಾನು 2010ರಲ್ಲಿ ಒಬ್ಬ ವ್ಯಕ್ತಿ ಪರ ವಾದ ಮಂಡಿಸಿದರೆ, 2018ರಲ್ಲಿ ಆ ವ್ಯಕ್ತಿ ಅಪರಾಧದಲ್ಲಿ ಭಾಗಿಯಾದ ಕಾರಣಕ್ಕೆ ನನ್ನನ್ನು ತಳುಕು ಹಾಕಬಹುದೇ? ಇಲ್ಲ.

ಕೈತಪ್ಪಿದ ಮಡಿಕೇರಿ ಟಿಕೆಟ್: ರಾಜೇಶ್ ಖನ್ನಾ ಡೈಲಾಗ್ ಹೇಳಿದ ಕಾಳಪ್ಪಕೈತಪ್ಪಿದ ಮಡಿಕೇರಿ ಟಿಕೆಟ್: ರಾಜೇಶ್ ಖನ್ನಾ ಡೈಲಾಗ್ ಹೇಳಿದ ಕಾಳಪ್ಪ

ಚಂದ್ರಮೌಳಿ ಅವರು ಮೆಹುಲ್ ಚೋಕ್ಸಿ ಪರ ಹಾಜರಾಗಿದ್ದಕ್ಕೆ ಸಂಬಂಧಿಸಿದ ವಿಚಾರ ಕೂಡ ಇದೇ ರೀತಿಯದ್ದಾಗಿದೆ' ಎಂದು ಕಾಳಪ್ಪ ಹೇಳಿದ್ದಾರೆ.

ಸುಷ್ಮಾ, ಜೇಟ್ಲಿ ಮಕ್ಕಳೂ ಇದ್ದಾರೆ
ಅಪರಾಧದಲ್ಲಿ ಭಾಗಿಯಾದ ವ್ಯಕ್ತಿಯ ಪರವಾಗಿ ಹಾಜರಾಗಿದ್ದಕ್ಕೆ ಈ ರೀತಿ ತಳುಕುಹಾಕುವುದು ಸರಿಯಲ್ಲ. ಲಲಿತ್ ಮೋದಿ ದೇಶಭ್ರಷ್ಟ ಆದ ಬಳಿಕವೂ ಸುಷ್ಮಾ ಸ್ವರಾಜ್ ಅವರ ಮಗಳು ಬಾನ್ಸುರಿ ಅವರ ಪರ ವಾದ ಮಂಡಿಸಿರುವುದನ್ನು ನೆನಪಿಸಿಕೊಳ್ಳುವುದು ಮುಖ್ಯವಾಗುತ್ತದೆ.

ಅಥವಾ ಅರುಣ್ ಜೇಟ್ಲಿ ಅವರ ಮಗಳು ಸೋನಾಲಿ ಮತ್ತು ಆಕೆಯ ಪತಿಯನ್ನು ನೀರವ್ ಮೋದಿ ವಕೀಲಿಕೆಯಲ್ಲಿ ಮುಂದುವರಿಸಿದಾಗಲೂ ಜೇಟ್ಲಿ ಹಣಕಾಸು ಸಚಿವರಾಗಿ ಮುಂದುವರಿದರು. ಅವರ ರಕ್ಷಣೆಯಲ್ಲಿಯೇ ನೀರವ್ ದೇಶದಿಂದ ಹೊಸ ಹೋಗಲು ಸಿದ್ಧತೆ ನಡೆಸಿದರು ಎಂದು ದೂರಿದ್ದಾರೆ.

ಮಾಧ್ಯಮದ ಅನೇಕ ಹಿತೈಷಿಗಳು ಕರೆ ಮಾಡಿ ಈ ಬಾರಿ ನಿಮಗೆ ನ್ಯಾಯ ಸಿಗುತ್ತದೆ ಎಂದಿದ್ದಾರೆ. ಆದರೆ, ಈ ಕಾರಣಕ್ಕಾಗಿ ಚಂದ್ರಮೌಳಿ ಅವರಿಗೆ ಟಿಕೆಟ್‌ಅನ್ನು ನಿರಾಕರಿಸಲು ಸಾಧ್ಯವಿಲ್ಲ. ಈ ಘಟನೆಯ ಲಾಭವನ್ನು ಪಡೆದುಕೊಳ್ಳಲು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ.

ನನಗೆ ಅವಕಾಶ ಸಿಗುವುದಾದರೆ, ಅದಕ್ಕೆ ಸೂಕ್ತ ಕಾರಣಗಳಿರಬೇಕು. ಸಹ ವಕೀಲರ ವೃತ್ತಿಪರ ನೈತಿಕತೆಯನ್ನು ದುರ್ಬಳಕೆ ಮಾಡಿಕೊಂಡು ಅಲ್ಲ. 2013ರಲ್ಲಿ ಏನೂ ಅಲ್ಲದ ನನ್ನನ್ನು ಪಕ್ಷದ ವಕ್ತಾರನನ್ನಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಆಯ್ಕೆ ಮಾಡಿದ್ದರು. ಅದೇ ರೀತಿ ಕಾಂಗ್ರೆಸ್ ಮತ್ತು ಅದರ ನಾಯಕತ್ವ ನನಗೆ ಮುಂದೊಂದು ದಿನ ನ್ಯಾಯ ಒದಗಿಸುತ್ತದೆ ಎಂಬ ಆತ್ಮವಿಶ್ವಾಸವಿದೆ.

ಬಿಜೆಪಿ ಬೆಂಬಲ ಬೇಡ
ನಿನ್ನೆಯಿಂದ ಬಿಜೆಪಿಯ 2-3 ವಕ್ತಾರರು ಕರೆ ಮಾಡಿ ವಾಹಿನಿಯಲ್ಲಿ ಟಿಕೆಟ್ ನಿಮಗೆ ಸಿಗಬೇಕು ಎಂದು ನಿಮ್ಮ ಪರ ಧ್ವನಿ ಎತ್ತಿರುವುದಾಗಿ ಹೇಳಿದರು.

ವಿಭಿನ್ನ ರಾಜಕೀಯ ಪಕ್ಷಕ್ಕೆ ಸೇರಿದವರಾದರೂ ಅವರ ಪ್ರಾಮಾಣಿಕ ಕಾಳಜಿಗೆ ನನ್ನ ಹೃದಯದಾಳದಿಂದ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ ಪಕ್ಷದಲ್ಲಿ ನ್ಯಾಯ ಪಡೆದುಕೊಳ್ಳಲು ಬಿಜೆಪಿಯ ಸಹಾಯವನ್ನು ಪಡೆದುಕೊಳ್ಳುವುದು ಸರಿಯಲ್ಲ. ಕಾಂಗ್ರೆಸ್ ಮತ್ತು ಅದರ ನಾಯಕತ್ವದ ಬಗ್ಗೆ ನನ್ನಲ್ಲಿ ವಿಶ್ವಾಸವಿದೆ. ನನ್ನಗೆ ತಕ್ಕ ಅವಕಾಶವನ್ನು ಖಂಡಿತಾ ನೀಡಲಿದೆ. ಮಾಜಿ ಪತ್ರಕರ್ತನಾಗಿ, ಮಾಧ್ಯಮದಲ್ಲಿರುವ ನನ್ನೆಲ್ಲ ಸ್ನೇಹಿತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

English summary
There was plenty of confusion regarding the Madikeri assembly constituency after it was widely rumoured that the Congress had put the seat on hold. The issue that was raked up was that H S Chandramouli who was declared the candidate from Madikeri had represented PNB scam accused Mehul Choksi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X