• search
For madikeri Updates
Allow Notification  

  ಪ್ರತಾಪ್ ಸಿಂಹಗೆ ಭಾಷಣ ನಿಲ್ಲಿಸಿ ಸಾಕು ಎಂದು ಸಿಎಂ ಕುಮಾರಸ್ವಾಮಿ

  By ಯಶಸ್ವಿನಿ ಎಂ.ಕೆ
  |
    ವೇದಿಕೆಯಲ್ಲೇ ಸಿಎಂ ಕುಮಾರಸ್ವಾಮಿ –ಸಂಸದ ಪ್ರತಾಪ್ ಸಿಂಹ ವಾಗ್ವಾದ | Oneindia Kannada

    ಮಡಿಕೇರಿ, ಡಿಸೆಂಬರ್ 7 : ಮಡಿಕೇರಿಯ ಸೋಮವಾರಪೇಟೆ ತಾಲೂಕಿನ ಜಂಬೂರುವಿನಲ್ಲಿ ಶುಕ್ರವಾರ ನಡೆದ ಮನೆಯ ಪುನರ್ ನಿರ್ಮಾಣ ಕಾರ್ಯಕ್ರಮದ ವೇದಿಕೆಯಲ್ಲಿ ಅನುದಾನದ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ - ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯೆ ವಾಕ್ಸಮರ ನಡೆದಿದೆ.

    ಮೊದಲು ಭಾಷಣ ಆರಂಭಿಸಿದ ಸಂಸದ ಪ್ರತಾಪ್ ಸಿಂಹ, ಕೊಡಗಿನಲ್ಲಿ ನೆರೆ ಪ್ರವಾಹ ಸಂಭವಿಸಿದೆ. ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರವೂ ತಕ್ಕುದಾದ ಅನುದಾನವನ್ನು ನೀಡಿದೆ. ಆದರೆ ನಮ್ಮ ರಾಜ್ಯ ಸರಕಾರ ಮಾತ್ರ ಅದಕ್ಕೊಂದು ಮೌಲ್ಯ ನೀಡುತ್ತಿಲ್ಲ. ಶಾಲೆಗೆ ಮಕ್ಕಳನ್ನು ಅಡ್ಮಿಶನ್ ಮಾಡುವಾಗ ಸನ್ ಆಫ್, ಡಾಟರ್ ಆಫ್ ಎಂಬ ಕಾಲಂ ಇದೆ. ಅದೇ ಥರ ನಾವು ಕೂಡ ಕೇಂದ್ರ ಸರಕಾರದಿಂದ ಬಂದ ಅನುದಾನವೆಷ್ಟು ಎಂಬುದನ್ನು ರಾಜ್ಯ ಸರಕಾರಕ್ಕೆ ಹೇಳಬೇಕಿದೆ ಎಂದರು.

    ಕೊಡಗು ನೆರೆ ಹಾವಳಿಗೆ ಕೇಂದ್ರದಿಂದ ಅನುದಾನ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳುತ್ತಾರೆ. ಆದರೆ ಕೊಡಗು ನೆರೆ ಹಾವಳಿ ಸಂದರ್ಭ ಕೇಂದ್ರದಿಂದ ಅನೇಕ ನೆರೆವು ನೀಡಲಾಗಿದೆ ಎಂದರು.

    ಭಾಷಣ ನಿಲ್ಲಿಸಿ ಸಾಕು ಎಂದ ಮುಖ್ಯಮಂತ್ರಿ

    ಭಾಷಣ ನಿಲ್ಲಿಸಿ ಸಾಕು ಎಂದ ಮುಖ್ಯಮಂತ್ರಿ

    ಇದೇ ವೇಳೆ ಸಿಟ್ಟಾದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪ್ರತಾಪ್ ಸಿಂಹ ಮಾತಿಗೆ ಗರಂ ಆದರು. ವೇದಿಕೆ ಮೇಲಿಂದಲೇ, ರೀ ಸಾಕು, ನಿಮ್ಮ ಭಾಷಣ ನಿಲ್ಲಿಸಿ ಅಂತ ಹೇಳಿದರು. ಆ ನಂತರವೂ ಸಂಸದ ಪ್ರತಾಪ್ ಸಿಂಹ ತಮ್ಮ ಭಾಷಣವನ್ನು ಮುಂದುವರಿಸಿದಾಗ ಅದೇ ವೇದಿಕೆಯಲ್ಲೇ ಇದ್ದ ಉಸ್ತುವಾರಿ ಸಚಿವರೂ ಆದ ಸಾ.ರಾ.ಮಹೇಶ್ ಕೂಡ ಭಾಷಣವನ್ನು ನಿಲ್ಲಿಸಿ ಎಂದರು.

    ಸಿಎಂ ಕುಮಾರಸ್ವಾಮಿಯಿಂದ ರೈತರ ದುರ್ಬಳಕೆ: ಸಂಸದ ಪ್ರತಾಪ್ ಸಿಂಹ

    ಮಕ್ಕಳನ್ನು ಶಾಲೆಗೆ ಸೇರಿಸುವಾಗ ಅಪ್ಪ-ಅಮ್ಮನ ಹೆಸರು ಹೇಳಲ್ಲವಾ?

    ಮಕ್ಕಳನ್ನು ಶಾಲೆಗೆ ಸೇರಿಸುವಾಗ ಅಪ್ಪ-ಅಮ್ಮನ ಹೆಸರು ಹೇಳಲ್ಲವಾ?

    ಆ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ, ಯಾವುದೇ ಮಕ್ಕಳನ್ನು ಶಾಲೆಗೆ ಸೇರಿಸುವ ವೇಳೆಯಲ್ಲಿ ಅಪ್ಪ-ಅಮ್ಮನ ಹೆಸರನ್ನು ಹೇಳದೇ ಹೋದರೆ ಹೇಗೆ ಹೇಳಿ ಎಂದು ಪ್ರಶ್ನಿಸಿದರು. ಅಂದರೆ ಯಾವುದೇ ಯೋಜನೆಗೆ ಅಥವಾ ನೆರವಿಗೆ ಎಲ್ಲಿಂದ ಎಷ್ಟು ಹಣ ಬಂದಿದೆ ಎಂಬ ಬಗ್ಗೆ ಜನರಿಗೆ ಲೆಕ್ಕೆ ನೀಡಬೇಕು ಎಂದರು. ಇದಾದ ಬಳಿಕ ಸಿಎಂ ಕುಮಾರಸ್ವಾಮಿ ಅವರು ಸಂಸದ ಪ್ರತಾಪ್ ಸಿಂಹರನ್ನು ತರಾಟೆಗೆ ತೆಗೆದುಕೊಂಡರು.

    ಕುಮಾರಸ್ವಾಮಿ ಅಪ್ಪನ ಕಾಲ ಬಳಿಯೇ ಕುಳಿತೀರಲ್ಲ ಸಿದ್ದರಾಮಯ್ಯ?: ಚುಚ್ಚಿದ ಸಿಂಹ

    ರಕ್ಷಣಾ ಹೆಲಿಕಾಪ್ಟರ್ ಗೆ ಸರಕಾರದಿಂದ ಹಣ ಪಾವತಿ

    ರಕ್ಷಣಾ ಹೆಲಿಕಾಪ್ಟರ್ ಗೆ ಸರಕಾರದಿಂದ ಹಣ ಪಾವತಿ

    ಅಂದಹಾಗೆ, ಕೇರಳದಲ್ಲಿ ಮಳೆಯಿಂದ ಹಾನಿ ಸಂಭವಿಸಿದ ಅವಧಿಯಲ್ಲೇ ಕರ್ನಾಟಕದ ಕೊಡಗು ಜಿಲ್ಲೆಯಲ್ಲೂ ಜಲ ಪ್ರವಾಹ ಏರ್ಪಟ್ಟಿತ್ತು. "ಆ ವೇಳೆ ಮುಖ್ಯಮಂತ್ರಿಯಾಗಿ ನಾನು ಕೇಂದ್ರದ ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ದೇನೆ. ರಕ್ಷಣಾ ಕಾರ್ಯಾಚರಣೆಗೆ ಬಂದ ಹೆಲಿಕಾಪ್ಟರ್ ಗಳಿಗೆ ಸರಕಾರದಿಂದ ಹಣವನ್ನು ಕೊಟ್ಟಿದ್ದೇವೆ" ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತಷ್ಟು ಸಿಟ್ಟಾದರು.

    ಸುಮ್ಮನಿರುವಂತೆ ಕೈ ಸನ್ನೆ ಮಾಡಿದ ಸಚಿವರು

    ಸುಮ್ಮನಿರುವಂತೆ ಕೈ ಸನ್ನೆ ಮಾಡಿದ ಸಚಿವರು

    ಹೀಗೆ ದಿಢೀರನೇ ಸಿಟ್ಟಾದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಉತ್ತರ ನೀಡಲು ಪ್ರತಾಪ್ ಸಿಂಹ ಯತ್ನಿಸಿದರು. ಆದರೆ ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಅನ್ನಿಸಿದಾಗ, ಅಲ್ಲೇ ಇದ್ದ ಇತರ ಸಚಿವರ ಮುಖ ನೋಡುತ್ತಾ ಮೌನ ವಹಿಸಿದರು ಪ್ರತಾಪ್ ಸಿಂಹ. ಆ ವೇಳೆಗೆ ಸಚಿವ ಸಾರಾ ಮಹೇಶ್, ಶಾಸಕ ಕೆ.ಜಿ. ಬೋಪಯ್ಯ ಅವರು ಏನು ಮಾತನಾಡದಂತೆ ಸನ್ನೆ ಮಾಡಿ, ಪ್ರತಾಪ್ ಸಿಂಹರಿಗೆ ಹೇಳಿದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    ಇನ್ನಷ್ಟು ಮಡಿಕೇರಿ ಸುದ್ದಿಗಳುView All

    English summary
    War of words between chief minister HD Kumaraswamy and Pratap Simha in Kodagu district, Somavarapet on Friday while speak about rain havok relief released by central government.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more