ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯನವರದು ಹಿಟ್‌ ಅಂಡ್‌ ರನ್‌ ಕೆಲಸ; ವಿ.ಸೋಮಣ್ಣ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜುಲೈ 10: ರಾಜ್ಯ ಸರ್ಕಾರ ಮೆಡಿಕಲ್ ಕಿಟ್ ಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದೆ ಎಂದು ಸಿದ್ದರಾಮಯ್ಯನವರು ಕೇವಲ ಆರೋಪ ಮಾಡುವ ಮೂಲಕ ಹಿಟ್ ರನ್ ಕೆಲಸ ಮಾಡಿದ್ದಾರೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಿರುಗೇಟು ನೀಡಿದ್ದಾರೆ.

Recommended Video

Indo China Metting :ಚೀನಾ ಜೊತೆ ಇಂದು ಮತ್ತೊಂದು ಸುತ್ತಿನ ಚರ್ಚೆ! | Oneindia Kannada

ಮಡಿಕೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ "ಸಿದ್ದರಾಮಯ್ಯ ಅವರು ದಾಖಲೆ ಇದೆ, ಬಿಡುಗಡೆ ಮಾಡುತ್ತೇನೆ ಎಂದಿದ್ದರು. ಆದರೆ ಈತನಕ ದಾಖಲೆ ಬಿಡುಗಡೆ ಮಾಡದೆ ವೃಥಾ ಆರೋಪ ಮಾಡಿದ್ದು ಪ್ರಚಾರ ತಂತ್ರ ಅಷ್ಟೆ. ಸರ್ಕಾರ ಮೆಡಿಕಲ್ ಕಿಟ್ ಅನ್ನು ಖರೀದಿಯನ್ನೇ ಮಾಡಿಲ್ಲ. ಅವ್ಯವಹಾರ ಹೇಗೆ ನಡೆಯುತ್ತದೆ? ಇದು ಸುಮ್ಮನೇ ಮಾಡಿರುವ ಆರೋಪ" ಎಂದು ಟೀಕಿಸಿದರು.

ಮೊದಲು ಉತ್ತರ ಕೊಡಿ, ಅಂಜಿಕೆ ಯಾಕೆ? ಸಿದ್ದರಾಮಯ್ಯ
ಅವ್ಯವಹಾರ ಆಗಿದೆ ಎಂದಾಗಲೇ ಸಿಎಂ ಅವರು ಸಿದ್ದರಾಮಯ್ಯನವರಿಗೆ ಸಭೆಗೆ ಬರುವಂತೆ ಆಹ್ವಾನಿಸಿದ್ದರು. ಖರೀದಿಯಲ್ಲಿ ಅವ್ಯವಹಾರ ಆಗಿದೆ ಎನ್ನುವ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದು ಹೇಳಿದ್ದರು. ಆದರೆ ಸಿದ್ದರಾಮಯ್ಯನವರು ಸಭೆಗೆ ಹೋಗದೆ ಕೇವಲ ಹಿಟ್ ಅಂಡ್ ರನ್ ಕೆಲಸ ಮಾಡುತ್ತಿದ್ದಾರೆ. ಆ ರೀತಿ ಯಾವುದೇ ದಾಖಲೆಗಳಿದ್ದರೆ ತೋರಿಸಲಿ ಎಂದು ಸವಾಲು ಎಸೆದರು.

V Somanna Responded To Siddaramaiah Allegation Regarding Medical Kit Purchase

ಕೊರೊನಾ ಸಂದಿಗ್ಧ ಸಂದರ್ಭದಲ್ಲಿ 500 ರಿಂದ 600 ಕೋಟಿ ರೂ.ಗಳನ್ನು ಮಾತ್ರ ಖರ್ಚು ಮಾಡಲಾಗಿದೆ. ಆದರೆ ಈ ಹಣದಲ್ಲಿ ಸರ್ಕಾರ ಒಂದೇ ಒಂದು ರೂಪಾಯಿ ಅವ್ಯವಹಾರ ಮಾಡಿಲ್ಲ. ಆದರೂ ಹೀಗೆ ಸುಮ್ಮನೆ ಆರೋಪ ಮಾಡಿರುವುದು ಸರಿಯಲ್ಲ. ಹೆಚ್ಚುವರಿ ಹಣ ಖರ್ಚು ಮಾಡದೆ ಇದ್ದರೂ ಅವ್ಯವಹಾರ ಹೇಗೆ ಆಗುತ್ತೆ ಎಂದು ಅವರೇ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಸಚಿವ ಸೋಮಣ್ಣ ಹೇಳಿದರು.

English summary
Minister of Housing V Somanna has reacted to the Siddaramaiah allegation, accusing state government of misusing money in purchasing medical kits
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X