ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾದರಾಯನಪುರದಿಂದ ಕೊಡಗಿಗೆ ಆಂಬ್ಯುಲೆನ್ಸ್: ಸಿಕ್ಕಿಬಿದ್ದ ಖದೀಮರು

|
Google Oneindia Kannada News

ಕೊಡಗು, ಏಪ್ರಿಲ್ 22: ಲಾಕ್‌ಡೌನ್ ಸಮಯದಲ್ಲಿ ಆಂಬ್ಯುಲೆನ್ಸ್ ನಲ್ಲಿ ಜನರ ಸಾಗಾಟ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಆ ರೀತಿಯ ಮತ್ತೊಂದು ಘಟನೆ ಕೊಡಗಿನಲ್ಲಿ ನಡೆದಿದೆ. ಬೆಂಗಳೂರಿನಿಂದ ಕೊಡಗಿಗೆ ಹೋಗುತ್ತಿದ್ದ ಖದೀಮರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.

ಕೊಡಗಿನ ಕೂಡಿಗೆಯಿಂದ ವಿದ್ಯಾರ್ಥಿನಿಯ ಸಾಗಿಸಲು ಬೆಂಗಳೂರಿನಿಂದ ಆಂಬ್ಯುಲೆನ್ಸ್ ಕರೆಸಲಾಗಿತ್ತು. ಬೆಂಗಳೂರಿನ ಹೊಸೂರಿನ ಪ್ರಭಾಕರ್ ಎಂಬಾತನ ಮಗಳು ಕುಶಾಲನಗರ ಸಮೀಪದ ಕೂಡಿಗೆಯಲ್ಲಿ ಇದ್ದರು. ಆಕೆಯನ್ನು ಬೆಂಗಳೂರಿಗೆ ಕರೆತರಲು ಪ್ಲಾನ್ ಮಾಡಲಾಗಿತ್ತು.

7 ಮಂದಿ ತುಂಬಿಕೊಂಡು ಉಡುಪಿಗೆ ಬಂದಿದ್ದ ಆಂಬ್ಯುಲೆನ್ಸ್ ಪೊಲೀಸರ ವಶಕ್ಕೆ7 ಮಂದಿ ತುಂಬಿಕೊಂಡು ಉಡುಪಿಗೆ ಬಂದಿದ್ದ ಆಂಬ್ಯುಲೆನ್ಸ್ ಪೊಲೀಸರ ವಶಕ್ಕೆ

ಆಸಿಫ್ ಬಾಷಾ ಮತ್ತು ಆರೀಫ್ ಎಂಬ ಆರೋಪಿಗಳು ಈ ಡೀಲ್‌ಗೆ 10 ಸಾವಿರ ಹಣ ಪಡೆದಿದ್ದರು. ಆಸಿಫ್ ಆಂಬ್ಯುಲೆನ್ಸ್ ಡ್ರೈವರ್ ಆಗಿ ಮತ್ತು ಆರೀಫ್ ರೋಗಿಯಂತೆ ನಾಟಕ ಮಾಡುತ್ತ ಆಂಬ್ಯುಲೆನ್ಸ್ ನಲ್ಲಿ ಮಲಗಿದ್ದ. ಹೀಗೆ ಹೋಗುತ್ತಿದ್ದ ಕಿಡಿಗೇಡಿಗಳು ಕೊಡಗಿನ ಕುಶಾಲನಗರದ ಚೆಕ್‌ಪೋಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದಾರೆ.

Ambulance Used For To Take People From Kodagu To Bengaluru

ಕುಶಾಲನಗರ ಸಿಪಿಐ ಮಹೇಶ್ ದೇವ್ರು ಮತ್ತು ತಂಡದ ಕಾರ್ಯಾಚರಣೆ ನಡೆಸಿ, ಖದೀಮರನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. ಸಿಕ್ಕಿಬಿದ್ದ ನಂತರ ಪೊಲೀಸರಿಗೆ ಸತ್ಯ ಬಾಯಿಬಿಟ್ಟಿದ್ದಾರೆ. ಪ್ರಭಾಕರ್ ಮಗನನ್ನು ಕರೆದುಕೊಂಡು ಬರಲು ಅವರಿಂದ 10 ಸಾವಿರ ವಸೂಲಿ ಮಾಡಿರುವುದಾಗಿ ತಿಳಿಸಿದ್ದಾರೆ. ಎಲ್ಲರನ್ನೂ ಈಗ ಜಿಲ್ಲಾ ಕ್ವಾರಂಟೈನ್ ಗೆ ಶಿಫ್ಟ್ ಮಾಡಲಾಗಿದೆ.

English summary
Ambulance used for to take people from Kodagu to Bengaluru. Police took them to quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X