ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ದಿನ ಭಾರಿ ಗಾಳಿ, ಮಳೆ; ಕೊಡಗು ಜಿಲ್ಲೆಗೆ Orange ಅಲರ್ಟ್

|
Google Oneindia Kannada News

ಮಡಿಕೇರಿ, ಮೇ 31 : ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆ ಜಿಲ್ಲೆಗೆ Orange ಅಲರ್ಟ್ ಘೋಷಣೆ ಮಾಡಿದೆ.

Recommended Video

ಕೊರೊನ ಬಗ್ಗೆ ಭಯಂಕರ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ..! | Bramanda Guruji | Corona Prediction

ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕೊಡಗು ಜಿಲ್ಲೆಯಲ್ಲಿ ಮೇ 31 ಮತ್ತು ಜೂನ್ 1ರಂದು ಭಾರಿ ಮಳೆಯಾಗಲಿದೆ. ಗಾಳಿಯೊಂದಿಗೆ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಲಾಗಿದೆ.

ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ 115.60 ಮಿ. ಮೀ. ನಿಂದ 204.4 ಮಿ. ಮೀ. ಮಳೆ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಆದ್ದರಿಂದ, ಕೊಡಗು ಜಿಲ್ಲಾಡಳಿತ ಸಾರ್ವಜನಿಕರಿಗೆ ಎಚ್ಚರದಿಂದ ಇರಲು ಸೂಚಿಸಿದೆ.

ಹವಾಮಾನ ಬದಲಾವಣೆಯಿಂದ ಕೊರೊನಾ ದೂರವಾಗದು, ಮತ್ತೇನು ಮಾಡಬೇಕು? ಹವಾಮಾನ ಬದಲಾವಣೆಯಿಂದ ಕೊರೊನಾ ದೂರವಾಗದು, ಮತ್ತೇನು ಮಾಡಬೇಕು?

Two Days Of Heavy Rain Orange Alert For Kodagu

ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳು ಉಂಟಾದರೆ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ಹೇಳಿದೆ. 24*7 ಕಂಟ್ರೋಲ್ ರೂಂ ಸಂಖ್ಯೆ 08272-221077. ವಾಟ್ಸಪ್ ನಂಬರ್ 8550001077.

ಗುಡುಗು ಸಹಿತ ಮಳೆ; ರಾಜ್ಯದ 8 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ಗುಡುಗು ಸಹಿತ ಮಳೆ; ರಾಜ್ಯದ 8 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್

ಕೇರಳಕ್ಕೆ ಮುಂಗಾರು ಆಗಮನ : ಅವಧಿಗೂ ಮೊದಲೇ ನೈಋತ್ಯ ಮುಂಗಾರು ಕೇರಳದ ಕರಾವಳಿ ಪ್ರವೇಶ ಮಾಡಿದೆ ಎಂದು ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಹೇಳಿದೆ. ಗಾಳಿಯ ಒತ್ತಡ, ವೇಗ ಸೇರಿದಂತೆ ಹವಾಮಾನವು ಮುಂಗಾರು ಆಗಮನಕ್ಕೆ ಪೂರಕವಾಗಿತ್ತು ಎಂದು ತಿಳಿಸಿದೆ.

ಜೂನ್ 1ರಂದು ಮುಂಗಾರು ಕೇರಳಕ್ಕೆ ಪ್ರವೇಶ ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮುಂಗಾರು ಪೂರ್ವ ಮಳೆಯೂ ರಾಜ್ಯದಲ್ಲಿ ಚೆನ್ನಾಗಿ ಸುರಿದಿದ್ದು, ಕೃಷಿ ಚಟುವಟಿಕೆ ಆರಂಭವಾಗಿದೆ.

English summary
The India Meteorological Department (IMD) has issued an orange alert for Kodagu district on May 31 and June 1, 2020. Heavy rain with thunder may lash district due to cyclone in arabian sea.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X