• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಡಿಕೇರಿ ವಿಶೇಷ; ಕೊಡವರ ಹೊಸ ವರ್ಷ ಎಡಮ್ಯಾರ್‌

By Coovercolly Indresh
|

ಮಡಿಕೇರಿ, ಏಪ್ರಿಲ್ 13; ಎಡಮ್ಯಾರ್ ಒಂದ್ ಕೊಡವರ ಸಾಂಪ್ರದಾಯಿಕ ಆಚರಣೆಯ ಒಂದು ಪ್ರತೀಕ. ಇದು ಕೊಡವರ ಹೊಸ ವರ್ಷದ ಆರಂಭವೂ ಆಗಿದೆ. ಕೃಷಿ ಪ್ರಧಾನವಾದ ಕೊಡಗಿನಲ್ಲಿ ತಲತಲಾಂತದಿಂದಲೂ ಹಲವಾರು ಆಚರಣೆಗಳಿಗೆ ವಿಶೇಷವಾದ ಮಾನ್ಯತೆ ನೀಡುತ್ತಾ ಬರುತ್ತಿದ್ದಾರೆ. ಅದರಂತೆ ಕೊಡವ ಕ್ಯಾಲೆಂಡರ್‌ನ ಪ್ರಕಾರ ವರ್ಷದ ಮೊದಲ ದಿನವೇ ಈ ಎಡಮ್ಯಾರ್ ಒಂದ್.

ಎಡಮ್ಯಾರ್, ಕಾದ್ಯಾರ್, ಆದರೆ, ಕಕ್ಕಡ, ಚಿನ್ಯಾರ್, ಕನ್ಯಾರ್, ತೊಲ್ಯಾರ್, ಬಿರ್ಚ್ಯಾರ್, ದಲ್ಮಾರ್, ಮಲ್ಯಾರ್, ಕುಂಬ್ಯಾರ್ ಎಂಬ ಕೊಡವ ಕ್ಯಾಲೆಂಡರಿನ ತಿಂಗಳ ಲೆಕ್ಕಾಚಾರವಿದ್ದು, ಇಂಗ್ಲಿಷ್ ಕ್ಯಾಲೆಂಡರಿನ ಏಪ್ರಿಲ್ 14 ರಂದು ಬರುವ ಎಡಮ್ಯಾರ್ ಒಂದರಂದು ವರ್ಷಂಪ್ರತಿ ರೈತನಾದವನು ಬೆಳಿಗ್ಗೆ ಎದ್ದು ತನ್ನ ಉಳುವ ಜೋಡಿ ಎತ್ತುಗಳೊಂದಿಗೆ ಗದ್ದೆಗೆ ತೆರಳುವರು.

ಕೊಡಗು ಭೂಕುಸಿತ; ತಜ್ಞರ ವರದಿ ತಿರಸ್ಕರಿಸಲು ಒತ್ತಾಯ

ಪೂರ್ವಕ್ಕೆ ಮುಖ ಮಾಡಿ ನಿಂತು ಭೂಮಿ ತಾಯಿಗೆ, ಸೂರ್ಯನಿಗೆ ಹಾಗೂ ಜೋಡಿ ಎತ್ತುಗಳಿಗೆ ಅಕ್ಕಿ ಹಾಕಿ ಪೂಜೆ ಸಲ್ಲಿಸಿ ಕೃಷಿಕಾರ್ಯಗಳು ಸಾಂಗವಾಗಿ ನಡೆಯಲೆಂದು ಬೇಡಿಕೊಂಡು ಜೋಡಿ ಎತ್ತುಗಳಿಗೆ ನೇಗಿಲನ್ನೆಲ್ಲ ಜೋಡಿಸಿ ಮೂರು ಸುತ್ತು ಉಳುವುದೇ ಈ ಸಂಪ್ರದಾಯದ ವಿಶೇಷ.

ಒಂದೆಡೆ ತೆಂಗಿನಕಾಯಿಯನ್ನು ಒಡೆದು ಶುಭ ಕಾರ್ಯವನ್ನು ಮಾಡಿದರೆ ಮತ್ತೊಂದೆಡೆ ಭೂಮಿತಾಯಿಗೆ ಹಾಲು ಉಯ್ಯುವರು ಜೊತೆಗೆ ಉಳುಮೆ ಮಾಡಿದ ಒಂದು ಹಿಡಿ ಮಣ್ಣನ್ನು ಭತ್ತ ಸಂಗ್ರಹದ ಪತ್ತಾಯಕ್ಕೆ ಹಾಕುವ ಸಂಪ್ರದಾಯವಿದೆ ಎಂದು ಹಿರಿಯರು ಹೇಳುತ್ತಾರೆ.

ಕೊಡಗು: ಭೂಕುಸಿತ ತಡೆಗೆ ಮಿಯಾವಕಿ ವನ ನಿರ್ಮಾಣ

ಮಳೆ ಪ್ರಾರಂಭವಾದೊಡನೆ ಉಳುಮೆ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೊದಲು ರೈತನೆ ಆಯ್ದ ಮರದ ಸ್ವತಃ ತಯಾರಿಸುತ್ತಿದ್ದ, ನೇಗಿಲ ಪರಿಕರಗಳಿಂದ ಗದ್ದೆಯಲ್ಲಿ ಉತ್ತು ಬಿತ್ತು ನಾಟಿ ಕೆಲಸ ಮುಗಿಯುವ ದಿನಕ್ಕೆ ರೈತ ಸಾಕು ಸಾಕಾಗಿ ಹೋಗುತ್ತಿದ್ದನಲ್ಲದೆ ರೈತನ ದೇಹವೆಲ್ಲ ನೀರು ಕುಡಿದು ಶೀತಹಿಡಿದಿರುವುದು.

ಆ ಸಮಯದಲ್ಲಿ ಕೊಡಗಿನ ಸಂಪ್ರದಾಯದಂತೆ ಆಷಾಢ (ಕಕ್ಕಡ )ತಿಂಗಳಲ್ಲಿ ಪಾಯಸ, ಹಿಟ್ಟನ್ನು ಮಾಡುವುದರ ಜೊತೆಗೆ ಕಕ್ಕಡಕೋಳಿ (ನಾಟಿಕೋಳಿ), ತೋಡು-ತೊರೆಗಳಲ್ಲಿ ಸಿಗುವ ಏಡಿ, ಮರಕೆಸ (ಮರಕೇಂಬು) ದಿಂದ ಮಾಡಿದ ಪತ್ರೊಡೆ, ಎಳ್ಳಿನಿಂದ ಮಾಡಿದ ವಿಶೇಷ ರೀತಿಯ ಎಳ್ಳಡಿಗೆ, ಕಣಿಲೆ, ಅಣಬೆಗಳನ್ನು ಹಾಗೂ ಭತ್ತದಿಂದ ಮಾಡಿದ ವಿಶೇಷ ರೀತಿಯ ಮದ್ಯ (ಗ್ರಾಮೀಣ ಭಾಷೆಯ ಗೆಜ್ಜೆ) ಈ ಕಕ್ಕಡ (ಆಟಿ) ತಿಂಗಳ ಮಳೆಗಾಲದಲ್ಲಿ ಸವಿಯುವ ಮೂಲಕ ಮೈಯನೆಲ್ಲ ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು.

ಎನ್‌ಎಸ್‌ಜಿ ಮುಖ್ಯಸ್ಥರಾಗಿ ಕೊಡಗು ಮೂಲದ ಎಂ.ಎ.ಗಣಪತಿ ನೇಮಕ

ಚಿನ್ಯಾರ್ ತಿಂಗಳಲ್ಲಿ ಬರುವ ಕೈಲ್‌ಪೊಳ್ದ್ ಆಚರಣೆ ಕೃಷಿ ಕಾರ್ಯ ಮುಗಿದು ಕಕ್ಕಡ ತಿಂಗಳು ಕಳೆದ ನಂತರ ಕುಟುಂಬದವರೆಲ್ಲ ಒಂದೆಡೆ ಸೇರಿ ಕೈಲ್‌ಪೊಳ್ದ್ ಹಬ್ಬವನ್ನು ಆಚರಿಸುವ ಸಂಪ್ರದಾಯದಂತೆ ಆಯುಧಗಳ ಜೊತೆಗೆ ಉಳುಮೆಯ ಪರಿಕರಗಳನ್ನು ಪೂಜಿಸುವ ಸಂಪ್ರದಾಯ.

ಬೆಳೆದ ಭತ್ತವನ್ನು ಸಂಪ್ರದಾಯದಂತೆ ಕೊಡಗಿನ ಶ್ರೀಇಗ್ಗುತಪ್ಪ ದೇವನೆಲೆಯಲ್ಲಿ ಪೊಲಿ ಪೊಲಿಯೇ... ಬಾ...ಎಂದು ದೇವರನ್ನು ಕರೆಯುತ್ತ ಹೊಸ ಅಕ್ಕಿಯನ್ನು ಮನೆಗೆ ತುಂಬಿಕೊಳ್ಳುವ ಪುತ್ತರಿ ನಮ್ಮೆಯ ಸಂಪ್ರದಾಯ ಹೀಗೆ ಒಂದೊಂದು ಆಚರಣೆಗೂ ಸಂಬಂಧವಿದೆ.

ಕೊಡಗಿನಲ್ಲಿ ಈಗ ಕೂಡು ಕುಟುಂಬವೆಲ್ಲ ಮರೆಯಾಗಿ ಒತ್ತಾಗಿ ದುಡಿವ ಸಂಪ್ರದಾಯವೇ ಹೋಗಿ ಉಳುಮೆ ಕಾರ್ಯವಿಲ್ಲದೆ ಬರಡಾದ ಗದ್ದೆಗಳ ಜೊತೆಗೆ ಇತರ ಸಂಪ್ರದಾಯಗಳು ಮರೆಯಾಗುವಂತಾಗಿದೆ.

   ತಮಿಳುನಾಡಿನಲ್ಲಿ ವರುಣನ ಆರ್ಭಟ: ಬೆಂಗಳೂರಿನಲ್ಲೂ ಮಳೆ | Oneindia Kannada

   ಇಂತಹ ಸಂಪ್ರದಾಯವನ್ನು ಉಳಿಸಿ ಬೆಳೆಸಲು ಕೊಡವ ಮಕ್ಕಡ ಕೂಟ ಹಾಗೂ ಸಿಎನ್‌ಸಿ ಸಂಘಟನೆ ವರ್ಷಂಪ್ರತಿ ಕೊಡಗಿನ ಕೊಡವ ಸಂಪ್ರದಾಯ ಉಡುಪಿ ನೊಂದಿಗೆ ದೇವನೆಲೆಯಾದ ನೆಲ್ಲಕ್ಕಿ ನಡುಬಾಡೆಯಲ್ಲಿ ಪೂಜಿಸಿ ಗದ್ದೆಗಳಿಗೆ ತೆರಳಿ ಪೂಜೆಸಲ್ಲಿಸಿ ಉಳುಮೆ ಮಾಡಿ ಎಡಮ್ಯಾರ್ ಒಂದ್ ಅನ್ನು ಸಂಪ್ರದಾಯ ಬದ್ಧವಾಗಿ ಆಚರಿಸುತ್ತಾ ಬರುತ್ತಿದ್ದಾರೆ.

   English summary
   The new year celebrations of Kodavas Edamyar Ond was celebrated on April 13, 2021.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X