ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಜಿಲ್ಲೆಯ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಇಲ್ಲಿದೆ ವಿವರ...

By Lekhaka
|
Google Oneindia Kannada News

ಮಡಿಕೇರಿ, ಅಕ್ಟೋಬರ್ 23: ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 5.60 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗಿನ ಒಟ್ಟು 2494.12 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2727.23 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 6.68 ಮಿ.ಮೀ ಇದ್ದು, ಜನವರಿಯಿಂದ ಇಲ್ಲಿಯವರೆಗಿನ ಮಳೆ 3533.74 ಮಿ.ಮೀ ಮಳೆಯಾಗಿದೆ. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 4.92 ಮಿ.ಮೀ ಇದ್ದು, ಜನವರಿಯಿಂದ ಇಲ್ಲಿಯವರೆಗಿನ ಮಳೆ 2240.70 ಮಿ.ಮಿ. ಮಳೆಯಾಗಿರುವುದಾಗಿ ತಿಳಿದುಬಂದಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 5.20 ಮಿ.ಮೀ ಇದ್ದು, ಇಲ್ಲಿಯವರೆಗೆ 1707.92 ಮಿ.ಮೀ ಮಳೆ ದಾಖಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ, ತಾಲೂಕುವಾರು ವಿವರಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ, ತಾಲೂಕುವಾರು ವಿವರ

ಹೋಬಳಿವಾರು ಮಳೆ ವಿವರ: ಮಡಿಕೇರಿ ಕಸಬಾ 6.80, ನಾಪೋಕ್ಲು 7, ಭಾಗಮಂಡಲ 12.90, ವಿರಾಜಪೇಟೆ ಕಸಬಾ 10.80, ಹುದಿಕೇರಿ 8, ಪೊನ್ನಂಪೇಟೆ 1.20, ಅಮ್ಮತ್ತಿ 5.50, ಬಾಳೆಲೆ 4, ಸೋಮವಾರಪೇಟೆ ಕಸಬಾ 8, ಶಾಂತಳ್ಳಿ 14, ಕುಶಾಲನಗರ 5.20, ಸುಂಟಿಕೊಪ್ಪ 4 ಮಿ.ಮೀ.ಮಳೆಯಾಗಿದೆ.

Kodagu: Taluk Level Rain Details And Haragi Dam Water Level On October 23

Recommended Video

Robbery in Filmy Style | ಇಂಥಾ ಕಳ್ಳರನ್ನ ಎಲ್ಲು ನೋಡಿಲ್ಲಾ!! | Oneindia Kannada

ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ ಇದ್ದು, ಇಂದಿನ ನೀರಿನ ಮಟ್ಟ 2858.50 ಅಡಿಯಾಗಿದೆ. ಹಾರಂಗಿಯಲ್ಲಿ 3.20 ಮಿ.ಮೀ ಮಳೆಯಾಗಿದೆ. ಇಂದಿನ ನೀರಿನ ಒಳಹರಿವು 1973 ಕ್ಯುಸೆಕ್ ಇದ್ದು, ಹೊರ ಹರಿವು 500 ಕ್ಯುಸೆಕ್ ಇದೆ.

English summary
kodagu district reported 5.60 mm rain in last 24 hours on october 23. Here is detail on taluk level rain and harangi dam water level,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X