ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ : ವೈರಲ್ ಆಗಿರುವ ಮನೆ ಕುಸಿತದ ವಿಡಿಯೋ ಹಿಂದಿನ ಕಥೆ!

By Gururaj
|
Google Oneindia Kannada News

Recommended Video

ಕೊಡಗಿನಲ್ಲಿ ಜೋರಾಗಿದೆ ಮಳೆಯ ಆರ್ಭಟ..! | Oneindia Kannada

ಮಡಿಕೇರಿ, ಆಗಸ್ಟ್ 22 : ಕೊಡಗಿನಲ್ಲಿ ಪ್ರಕೃತಿ ಮುನಿಸಿಕೊಳ್ಳದಿದ್ದರೆ 54 ವರ್ಷದ ಅನಿಫ್ ಸಂಭ್ರಮದಿಂದ ಈ ಬಾರಿಯ ಬಕ್ರೀದ್ ಆಚರಣೆ ಮಾಡಬೇಕಿತ್ತು. ಆದರೆ, ಈಗಿನ ಪರಿಸ್ಥಿತಿಯೇ ಬೇರೆ, ಸಾಲ ಮಾಡಿ ಕಟ್ಟಿದ್ದ ಮನೆ ಭೂ ಮಾತೆಯ ಒಡಲು ಸೇರಿದೆ. ಇದ್ದ ಒಂದೇ ಆಸ್ತಿ ಕಳೆದುಕೊಂಡು ಅನಿಫ್ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.

ಕೊಡಗನ್ನು ಮತ್ತೆ ಕಟ್ಟುವುದು ಸರ್ಕಾರದ ಸದ್ಯದ ಸವಾಲುಕೊಡಗನ್ನು ಮತ್ತೆ ಕಟ್ಟುವುದು ಸರ್ಕಾರದ ಸದ್ಯದ ಸವಾಲು

ಹೌದು..ಇದು ಮಡಿಕೇರಿಯ ಅನಿಫ್ ಕುಟುಂಬದ ದುಃಖದ ಕಥೆ. ಮಡಿಕೇರಿಯಲ್ಲಿ ಮನೆಯೊಂದು ಗುಡ್ಡದಿಂದ ಜಾರಿ ಹೋಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮನೆಯ ಮಾಲೀಕರೇ ಅನಿಫ್.

ಎರಡು ತಿಂಗಳ ಮಗುವನ್ನು ರಕ್ಷಿಸಿದ ಈ ವಿಡಿಯೋ ಎಲ್ಲೆಲ್ಲೂ ವೈರಲ್ಎರಡು ತಿಂಗಳ ಮಗುವನ್ನು ರಕ್ಷಿಸಿದ ಈ ವಿಡಿಯೋ ಎಲ್ಲೆಲ್ಲೂ ವೈರಲ್

ಮಡಿಕೇರಿಯ ಪ್ರಸಿದ್ಧ ಮುತ್ತಪ್ಪ ದೇವಾಲಯದ ಬಳಿ ಅನಿಫ್ ಮನೆ ಇತ್ತು. ಆದರೆ, ಈಗ ಮನೆಯ ಜೊತೆ ಅನಿಫ್ ಬದುಕು ಕೂಡ ಕುಸಿದು ಬಿದ್ದಿದೆ. ಆ.15ರಂದು ಮನೆ ಇದ್ದಹಾಗೇಯೇ ಗುಡ್ಡದಿಂದ ಜಾರಿ ಭೂ ಮಾತೆಯ ಒಡಲು ಸೇರಿದೆ.

ಛೆ, ಎಂಥ ದುರಂತ! ಮನೆ ಪಕ್ಕದ ಬೆಟ್ಟ-ಗುಡ್ಡಗಳೇ ಮೃತ್ಯುಕೂಪವಾಗಿ..ಛೆ, ಎಂಥ ದುರಂತ! ಮನೆ ಪಕ್ಕದ ಬೆಟ್ಟ-ಗುಡ್ಡಗಳೇ ಮೃತ್ಯುಕೂಪವಾಗಿ..

ಮನೆ ಹೋದರೆ ಹೋಗಲಿ ಕುಟುಂಬದವರೆಲ್ಲಾ ಸುರಕ್ಷಿತವಾಗಿದ್ದಾರೆ ಎಂದು ಅನಿಫ್ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ಹಣ್ಣು ಮತ್ತು ತರಕಾರಿ ವ್ಯಾಪಾರಿ ಅನಿಫ್ ಹೊಸ ಬದುಕನ್ನು ಕಟ್ಟಿಕೊಳ್ಳಬೇಕು ಜೊತೆಗೆ ವಾಸಕ್ಕೆ ವ್ಯವಸ್ಥೆಯಾಗಬೇಕು.

ಆಗಸ್ಟ್ 15 ಕನಸು ನುಚ್ಚುನೂರಾದ ದಿನ

ಆಗಸ್ಟ್ 15 ಕನಸು ನುಚ್ಚುನೂರಾದ ದಿನ

ಆ.15ರ ಬುಧವಾರ ದೇಶವೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿತ್ತು. ಮಡಿಕೇರಿಯಲ್ಲಿ ಮಳೆ ಸುರಿಯುತ್ತಿತ್ತು. 54 ವರ್ಷದ ಅನಿಫ್ ಪುತ್ರನ ಜೊತೆ ಬೆಳಗ್ಗೆ 7.30ಕ್ಕೆ ತಮ್ಮ ತರಕಾರಿ, ಹಣ್ಣಿನ ಅಂಗಡಿಗೆ ತೆರಳುತ್ತಾರೆ.

ನಿರಂತರವಾಗಿ ಸುರಿದ ಮಳೆಯಿಂದಾಗಿ ಅನಿಫ್ ಪಕ್ಕದ ಮನೆ ಪಾಯ ಕುಸಿದು ಹೋಗಿತ್ತು. ಮನೆ ಯಾವುದೇ ಸಮಯದಲ್ಲಿ ಜಾರಿ ಹೋಗುವ ಅಪಾಯವಿತ್ತು. 8 ವರ್ಷಗಳ ಹಿಂದೆ ಕಟ್ಟಿದ ಅನಿಫ್ ಮನೆ ಸುರಕ್ಷಿತವಾಗಿತ್ತು. ನಮ್ಮ ಮನೆಗೆ ಏನೂ ಆಗುವುದಿಲ್ಲ ಎಂಬ ಭರವಸೆಯಲ್ಲಿಯೇ ಅನಿಫ್ ಅಂಗಡಿಯತ್ತ ತೆರಳಿದ್ದರು.

9 ಗಂಟೆಗೆ ಬಂತು ದುರಂತದ ಕರೆ

9 ಗಂಟೆಗೆ ಬಂತು ದುರಂತದ ಕರೆ

ಬೆಳಗ್ಗೆ 9 ಗಂಟೆ ಸುಮಾರಿಗೆ ಅನಿಫ್‌ಗೆ ದೂರವಾಣಿ ಕರೆ ಬಂತು. ತಕ್ಷಣ ಪುತ್ರನ ಜೊತೆ ಮನಗೆ ಬಂದ ಅವರು ಕಂಡಿದ್ದು, ಬದುಕಿನಲ್ಲಿ ಎಂದೂ ಮರೆಯಲಾಗದ ದುರಂತವನ್ನು. ಬೆವರು ಸುರಿಸಿದ ದುಡಿದು ಕೂಡಿಟ್ಟ ಹಣ, ಸಾಲ ಮಾಡಿ ಕಟ್ಟಿದ್ದ ಮನೆ ಕಣ್ಣೆದುರೇ ಜಾರಿಕೊಂಡು ಭೂ ತಾಯಿಯ ಒಡಲು ಸೇರುತ್ತಿತ್ತು.

ಮನೆಯಲ್ಲಿ ಏಕಾಂಗಿಯಾಗಿದ್ದ 45 ವರ್ಷದ ಪತ್ನಿ ಅಮೀನಾರನ್ನು ಅನಿಫ್ ಪವಾಡ ಸದೃಶ ರೀತಿಯಲ್ಲಿ ಕಾಪಾಡಿದ್ದರು. ಕಣ್ಣಮುಂದೆ ಮನೆ ಕುಸಿಯವುದನ್ನು ನೋಡಿ ಅಮೀನಾ ಪ್ರಜ್ಞೆ ತಪ್ಪಿದ್ದರು. ಮನೆಯ ಯಾವ ವಸ್ತುವನ್ನು ಹೊರತರಲು ಸಮಯವಿಲ್ಲದಂತೆ ಮನೆ ಗುಡ್ಡದಿಂದ ಜಾರಿ ಹೋಯಿತು.

2 ಅಂತಸ್ತಿನ ಮನೆ ಮಣ್ಣುಪಾಲು

2 ಅಂತಸ್ತಿನ ಮನೆ ಮಣ್ಣುಪಾಲು

8 ವರ್ಷಗಳ ಹಿಂದೆ ಅನಿಫ್ ಕೂಡಿಟ್ಟ 3 ಲಕ್ಷ ಹಣ, 16 ಲಕ್ಷ ಸಾಲ ಮಾಡಿ ಎರಡು ಅಂತಸ್ತಿನ ಮನೆಯನ್ನು ಕಟ್ಟಿದ್ದರು. ಬದುಕಿಗೆ ಒಂದು ಆಸರ ಆಯಿತು ಎಂದು ಅಂದುಕೊಂಡಿದ್ದರು. ನೆಲ ಮಹಡಿಯನ್ನು 3 ವರ್ಷಗಳ ಕಾಲ ಕುಟುಂಬವೊಂದಕ್ಕೆ ಭೋಗ್ಯಕ್ಕೆ ನೀಡಿದ್ದರು.

ಮೊದಲ ಮಹಡಿಯಲ್ಲಿ ಅನಿಫ್ ಕುಟುಂಬ ವಾಸವಾಗಿತ್ತು. ಅನಿಫ್ ಪುತ್ರಿ, ಅಳಿಯ, ಆರು ತಿಂಗಳ ಮಗು ಮಂಗಳೂರಿಗೆ ಹೋಗಿದ್ದರು. ಮಡಿಕೇರಿಗೆ ಬರುವ ಮಾರ್ಗ ಬಂದ್ ಆಗಿದ್ದರಿಂದ ಅವರು ವಾಪಸ್ ಬಂದಿರಲಿಲ್ಲ ಆದ್ದರಿಂದ ಮನೆಯಲ್ಲಿ ಅಮೀನಾ ಮಾತ್ರ ಇದ್ದರು.

ಕುಟುಂಬಕ್ಕೆ ಇದ್ದ ಆಸ್ತಿ ಒಂದೇ

ಕುಟುಂಬಕ್ಕೆ ಇದ್ದ ಆಸ್ತಿ ಒಂದೇ

'ಮನೆಯ ಸಾಮಾನುಗಳನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡಿದೆವು, ಒಂದು ಚಿಕ್ಕ ವಸ್ತುಗಳು ನಮಗೆ ಸಿಗಲಿಲ್ಲ' ಎಂದು ಅನಿಫ್ ದುರಂತದ ಅನುಭವ ಹಂಚಿಕೊಳ್ಳುತ್ತಾರೆ.

'ಈಗ ನನ್ನ ಕುಟುಂಬದ ಬಳಿ ಏನೂ ಇಲ್ಲ. ಆದರೆ, ಎಲ್ಲರೂ ಸುರಕ್ಷಿತವಾಗಿದ್ದಾರೆ. ಅಷ್ಟು ಸಾಕು' ಎಂದು ಅನಿಫ್ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ.

ಅನಿಫ್ ಮನೆ ಕುಸಿದ ವಿಡಿಯೋ

ಅನಿಫ್ ಮನೆ ಕುಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಡಿಯೋ ನೋಡಿ

English summary
54 year old Aneef house collapsed in Madikeri on August 15, 2018. 8 year old house near Muthappa temple crashed. Now nothing left for my family but all the members are safe said Aneef. House collapse video goes viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X