ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಕೊಡಗಿನಲ್ಲಿ ಸರಳವಾಗಿ ಕೈಲ್ ಮೂರ್ತ ಹಬ್ಬ ಆಚರಣೆ

By Gururaj
|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 04 : ಪ್ರಕೃತಿ ವಿಕೋಪದಿಂದ ಅಪಾರವಾದ ನಷ್ಟ ಉಂಟಾಗಿರುವ ಕೊಡಗು ಜಿಲ್ಲೆಯಲ್ಲಿ ಸರಳವಾಗಿ ಕೈಲ್ ಮೂರ್ತ ಹಬ್ಬ ಆಚರಣೆ ಮಾಡಲಾಯಿತು. ಪ್ರತಿವರ್ಷದ ಸಂಭ್ರಮ, ಸಡಗರ ಬಾರಿ ಕಂಡು ಬರಲಿಲ್ಲ.

ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆ, ಭೂ ಕುಸಿತದಿಂದಾಗಿ ಸಾವಿರಾರು ಜನರು ಕೊಡಗಿನಲ್ಲಿ ಮಳೆ ಕಳೆದುಕೊಂಡಿದ್ದಾರೆ. ಸಾವಿರಕ್ಕೂ ಅಧಿಕ ಜನರು ಇನ್ನೂ ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಸ್ವಂತ ಮನೆ ಕಳೆದುಕೊಂಡು ಕಂಗೆಟ್ಟಿದ್ದಾರೆ.

ಕೊಡಗು ಪ್ರಕೃತಿ ವಿಕೋಪಕ್ಕೆ 'ಕೈಲ್'ಸಂಭ್ರಮ ಬಲಿ!ಕೊಡಗು ಪ್ರಕೃತಿ ವಿಕೋಪಕ್ಕೆ 'ಕೈಲ್'ಸಂಭ್ರಮ ಬಲಿ!

ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಕೊಡಗಿನಲ್ಲಿ ಸಂಭ್ರಮ ಮನೆ ಮಾಡಿರುತ್ತಿತ್ತು. ಕೈಲ್ ಹಬ್ಬಕ್ಕೆ ಸಂಭ್ರಮದಿಂದ ಮುಹೂರ್ತ ಮಾಡುತ್ತಿದ್ದರು. ಗದ್ದೆ ಕೆಲಸಗಳನ್ನು ಮಾಡಿದ ಜನರು ಹೊಟ್ಟೆ ತುಂಬಾ ಉಂಡು, ಕಂಠಮಟ್ಟ ಕುಡಿದು ಕೈಲ್ ಮೂರ್ತ ಹಬ್ಬದಲ್ಲಿ ಸಂಭ್ರಮಿಸುತ್ತಿದ್ದರು.

ಕೊಡಗು : 1795 ಜನರು ಇನ್ನೂ ಸಂತ್ರಸ್ತರ ಕೇಂದ್ರದಲ್ಲಿ ವಾಸಕೊಡಗು : 1795 ಜನರು ಇನ್ನೂ ಸಂತ್ರಸ್ತರ ಕೇಂದ್ರದಲ್ಲಿ ವಾಸ

ಕೈಲ್ ಎಂದರೆ ಆಯುಧಗಳ ಹಬ್ಬ. ಕೃಷಿ ಚಟುವಟಿಕೆ ಮುಗಿದ ತಕ್ಷಣ ಕೃಷಿ ಸಲಕರಣೆ, ಕೋವಿ, ಕತ್ತಿಗಳಿಗೆ ಪೂಜೆ ಮಾಡುತ್ತಿದ್ದರು. ಕೊಡಗ ಜನಾಂಗದವರಿಗೆ ಕೈಲ್ ಮೂರ್ತ ಹಬ್ಬ ಆಯುಧ ಪೂಜೆಯಾಗಿದೆ. ಆದರೆ, ಈ ಬಾರಿ ಹಬ್ಬದಲ್ಲಿ ಯಾವುದೇ ಸಂಭ್ರಮವಿಲ್ಲ.

ಚಿತ್ರಗಳು : ಆಗಸ್ಟ್ ಮಳೆ, ಭೂ ಕುಸಿತದ ಬಳಿಕ ಕೊಡಗುಚಿತ್ರಗಳು : ಆಗಸ್ಟ್ ಮಳೆ, ಭೂ ಕುಸಿತದ ಬಳಿಕ ಕೊಡಗು

ಕೈಲ್ ಮೂರ್ತ ಹಬ್ಬ

ಕೈಲ್ ಮೂರ್ತ ಹಬ್ಬ

ಮಡಿಕೇರಿ ತಾಲೂಕಿನ ಕರ್ಣಂಗೇರಿಯಲ್ಲಿರುವ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಕೈಲ್ ಮೂರ್ತ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

ಮಡಿಕೇರಿ ತಾಲೂಕಿನ 12 ಕಾಳಜಿ ಕೇಂದ್ರದಲ್ಲಿ 1,265 ಜನರು, ಸೋಮವಾರಪೇಟೆ ತಾಲೂಕಿನ 3 ಕಾಳಜಿ ಕೇಂದ್ರದಲ್ಲಿ 530 ಜನರು ಇನ್ನೂ ಆಶ್ರಯ ಪಡೆಯುತ್ತಿದ್ದಾರೆ.

5 ಲಕ್ಷದ ಚೆಕ್ ವಿತರಣೆ

5 ಲಕ್ಷದ ಚೆಕ್ ವಿತರಣೆ

ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷದ ಮುಖಂಡರಾದ ಅಶೋಕ್ ಖೇಣಿ ರವರು ಕೊಡುಗು ಸಂತ್ರಸ್ತರ ಪರಿಹಾರ ನಿಧಿಗೆ 5 ಲಕ್ಷ ರೂ.ಗಳ ಚೆಕ್‌ಅನ್ನು ಬೀದರ್ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಾಂತರ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರಿಗೆ ನೀಡಿದರು.

ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಡಿಕೇರಿ ನಗರದ ಗೋದಾಮುಗಳಿಗೆ ಭೇಟಿ ನೀಡಿ ಸಂತ್ರಸ್ತರ ಪರಿಹಾರ ಸಾಮಾಗ್ರಿಗಳ ದಾಸ್ತಾನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಪರಿಹಾರ ಕೇಂದ್ರಗಳಿಗೆ ಸಾಮಾಗ್ರಿಗಳನ್ನು ತ್ವರಿತ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಕ್ಕಳ ಜೊತೆ ಸಚಿವರ ಮಾತು

ಮಕ್ಕಳ ಜೊತೆ ಸಚಿವರ ಮಾತು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಡಾ.ಜಯಮಾಲಾ ಅವರು ಮಡಿಕೇರಿ ನಗರದ ಮೈತ್ರಿ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಆಶ್ರಯ ಪಡೆದಿರುವ ಮಕ್ಕಳನ್ನು ಮಾತನಾಡಿಸಿದರು.

ಕುಡಿಯುವ ನೀರು

ಕುಡಿಯುವ ನೀರು

ಕೊಡಗು ಜಿಲ್ಲೆಯಲ್ಲಿ ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಕುಡಿಯುವ ನೀರು ಪರೀಕ್ಷಿಸುವ ಕಿಟ್ ಗಳನ್ನು ಜಿಲ್ಲಾಡಳಿತ ಗ್ರಾಮ ಪಂಚಾಯತಿಗಳಿಗೆ ಸರಬರಾಜು ಮಾಡಿದೆ. ಗ್ರಾಮ ಪಂಚಾಯತಿಯಿಂದ ಕಿಟ್ ಗಳನ್ನು ಬಳಸಿಕೊಂಡು ನೀರಿನ ಶುದ್ಧತೆಯನ್ನು ಪರೀಕ್ಷೆ ನಡೆಸಲಾಗುತ್ತಿದೆ.

English summary
Simple celebration of the Kail Pold festival in different parts of Kodagu. Due to heavy rain and landslide in the month of August 2018 thousands of people lost house in Kodagu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X