ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ; ಹುಲಿ ಸೆರೆ ಅಸಾಧ್ಯವಾದರೆ ಮಾತ್ರ ಕಂಡಲ್ಲಿ ಗುಂಡು

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮಾರ್ಚ್ 09: ನರಹಂತಕ ವ್ಯಾಘ್ರನ ಸೆರೆಯು ವಿಳಂಬವಾಗುತ್ತಿದೆ. ಗ್ರಾಮಸ್ಥರ ಆಕ್ರೋಶವೂ ಹೆಚ್ಚಾಗುತ್ತಿದೆ. ಈಗಾಗಲೇ ಮೂರು ಜೀವಗಳನ್ನು ಬಲಿ ಪಡೆದಿರುವ ಗಂಡು ಹುಲಿ ಯಾರ ಕಣ್ಣಿಗೂ ಬೀಳುತ್ತಿಲ್ಲ. ಅರಣ್ಯ ಇಲಾಖೆಯ 150ಕ್ಕೂ ಅಧಿಕ ಸಿಬ್ಬಂದಿ ಹುಲಿ ಸೆರೆ ಹಿಡಿಯಲು ಶ್ರಮಿಸುತ್ತಿದ್ದಾರೆ.

ಶ್ರೀಮಂಗಲ ಹೋಬಳಿಯ ಟಿ. ಶೆಟ್ಟಿಗೇರಿ, ಕುಮಟೂರು ಮತ್ತು ಬೆಳ್ಳೂರು ಗ್ರಾಮಗಳ ವ್ಯಾಪ್ತಿಯಲ್ಲಿ ಹುಲಿ ಹಾವಳಿ ಅಧಿಕವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವರಾದ ಅರವಿಂದ ಲಿಂಬಾವಳಿ ಅವರು ಸೋಮವಾರ ಬೆಂಗಳೂರಿನಲ್ಲಿ ಶಾಸಕರಾದ ಕೆ. ಜಿ. ಬೋಪಯ್ಯ, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೊತೆ ಚರ್ಚೆ ನಡೆಸಿದರು.

ಕೊಡಗಿನಲ್ಲಿ ಹುಲಿ ದಾಳಿಗೆ ಬಾಲಕ ಸಾವು, ಮತ್ತೋರ್ವನ ಸ್ಥಿತಿ ಗಂಭೀರಕೊಡಗಿನಲ್ಲಿ ಹುಲಿ ದಾಳಿಗೆ ಬಾಲಕ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

150ಕ್ಕೂ ಅಧಿಕ ಸಿಬ್ಬಂದಿ ಶ್ರಮಿಸುತ್ತಿದ್ದರೂ ಹುಲಿ ಸೆರೆ ಸಾಧ್ಯವಾಗಿಲ್ಲ. ಜನರೂ ಜೀವ ಭಯದಲ್ಲೇ ಬದುಕುತ್ತಿದ್ದಾರೆ. ಕತ್ತಲಾದ ಮೇಲೆ ಯಾರೂ ಮನೆಯಿಂದ ಹೊರಗೆ ಬರುತ್ತಿಲ್ಲ. ತೋಟಗಳಲ್ಲಿ ಕೆಲಸ ಮಾಡಲು ಕಾರ್ಮಿಕರೂ ಹಿಂದೇಟು ಹಾಕುತ್ತಿದ್ದಾರೆ.

ಮಡಿಕೇರಿ; ಹುಲಿ ಸೆರೆ ಸಿಕ್ಕಿಲ್ಲ, ಅರಣ್ಯ ಇಲಾಖೆಯ ಶತ ಪ್ರಯತ್ನ ಮಡಿಕೇರಿ; ಹುಲಿ ಸೆರೆ ಸಿಕ್ಕಿಲ್ಲ, ಅರಣ್ಯ ಇಲಾಖೆಯ ಶತ ಪ್ರಯತ್ನ

 Shoot At Sight Order If Fail To Capture Tiger

ಅರಣ್ಯ ಇಲಾಖೆಯ ಪಿಸಿಸಿಎಫ್‌ ಹುಲಿ ಸೆರೆ ಕುರಿತು ಕೊಡಗಿನ ಅರಣ್ಯಾಧಿಕಾರಿಗಳಗೆ ಆದೇಶ ನೀಡಿದ್ದಾರೆ. ಮಾನವ, ಪ್ರಾಣ ಹಾನಿಗೆ ಕಾರಣವಾಗಿರುವ ಹುಲಿಯ ಚಲನ-ವಲನದ ಮೇಲೆ ನಿಗಾವಹಿಸಲು ಕೇಂದ್ರ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಗಳನ್ವಯ ಒಂದು ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಹುಲಿ ಹಾವಳಿ ತಡೆಯದಿದ್ದರೆ ರೈತರಿಂದ ಕೊಡಗು ಬಂದ್‌ ಎಚ್ಚರಿಕೆ ಹುಲಿ ಹಾವಳಿ ತಡೆಯದಿದ್ದರೆ ರೈತರಿಂದ ಕೊಡಗು ಬಂದ್‌ ಎಚ್ಚರಿಕೆ

ಈ ಸಮಿತಿಯ ಅಭಿಪ್ರಾಯ ಹಾಗೂ ಸ್ಥಳೀಯ ಜನರ ಮತ್ತು ಜನಪ್ರತಿನಿಧಿಗಳೊಡನೆ ಚರ್ಚಿಸಿದಂತೆ ಮಾನವ ಪ್ರಾಣ ಹಾನಿಗೆ ಕಾರಣವಾಗಿರುವ ಹುಲಿಯನ್ನು ಗುರುತಿಸಿ, ಸೆರೆಹಿಡಿಯಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರನ್ನು ಕೋರಿರುತ್ತಾರೆ. ಈ ಕೋರಿಕೆಯನ್ನು ಪರಿಗಣಿಸಿ ಹುಲಿಯನ್ನು ಸೆರೆಹಿಡಿಯಲು ಅನುಮತಿ ನೀಡಲಾಗಿದೆ.

ಪೊನ್ನಂಪೇಟೆ ವಲಯದಲ್ಲಿ 2021ರ ಮಾರ್ಚ್ 8ರಂದು ಹುಲಿ ದಾಳಿಯಿಂದ ಮಾನವ ಪ್ರಾಣ ಹಾನಿ ಸಂಭವಿಸಿರುವುದಾಗಿ ಕೊಡಗಿನ ಅರಣ್ಯಾಧಿಕಾರಿಗಳು ವರದಿ ಮಾಡಿದ್ದಾರೆ. ಈ ಹುಲಿಯನ್ನು ತಕ್ಷಣವೇ ಸೆರೆ ಹಿಡಿಯಲು ಹಾಗೂ ಒಂದು ವೇಳೆ ನಿರ್ದಿಷ್ಟವಾಗಿ ಗುರುತಿಸಲಾದ ಹುಲಿಯನ್ನು ಸೆರೆಹಿಡಿಯುವುದು ಅಸಾಧ್ಯವಾದಲ್ಲಿ ಮಾತ್ರ ಈ ಹುಲಿಯನ್ನು ಗುಂಡಿಕ್ಕುವುದನ್ನು ಕೊನೆಯ ಪ್ರಕ್ರಿಯೆಯನ್ನಾಗಿ ಪರಿಗಣಿಸಲು ಆದೇಶ ನೀಡಿದ್ದಾರೆ.

Recommended Video

Karnataka Budget 2021 : ಯಡಿಯೂರಪ್ಪ ಅವರ 2021 ಬಜೆಟ್ ! | Oneindia Kannada

ಕೊಡಗಿನ ರೈತ ಸಂಘವು ಬೆಳ್ಳೂರು ಹೆದ್ದಾರಿಯಲ್ಲಿ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಹುಲಿಯನ್ನು ಸೆರೆ ಅಥವಾ ಗುಂಡಿಕ್ಕಿ ಕೊಲ್ಲುವ ವರೆಗೂ ಧರಣಿ ಮುಂದುವರಿಯಲಿದೆ ಹೇಳಿದ್ದಾರೆ.

English summary
Forest department officials said that shoot at sight order will be issued if fail to capture man eater tiger. From February 21, 2021 forest department officials busy in Ponnampet to carry out a tiger capture operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X