ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಸಿಬ್ಬಂದಿಗಳ ಸಾಮೂಹಿಕ ಶ್ರಮದಾನ; ಕ್ವಾಟ್ರಸ್ ಕ್ಲೀನ್

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಫೆಬ್ರವರಿ 11: ಕೊಡಗು-ಹಾಸನ ಗಡಿ ಪ್ರದೇಶವಾದ ಶನಿವಾರಸಂತೆ ಪೋಲೀಸರು ಬೆಳಗ್ಗೆ ಕಾರ್ಯಾಚರಣೆಗಿಳಿದಿದ್ದರು. ಆದರೆ, ಇದು ಎಂದಿನಂತೆ ಸಮಾಜ ವಿರೋಧಿಗಳ, ಕ್ರಿಮಿನಲ್‌ಗಳ ವಿರುದ್ದದ ಕಾರ್ಯಾಚರಣೆಯಲ್ಲ. ಬದಲಿಗೆ ತಮ್ಮ ಮನೆಯ ಸುತ್ತ-ಮುತ್ತ ಸ್ವಚ್ಚಗೊಳಿಸುವ ವಿನೂತನ ಕಾರ್ಯಾಚರಣೆ.

ಪೊಲೀಸ್ ವಸತಿ ಗೃಹಗಳ ಸುತ್ತ-ಮುತ್ತ ಗಿಡಗಂಟಿಗಳು ಬೆಳೆದು ನಿಂತಿದ್ದವು. ಇದರಿಂದ ಹಾವುಗಳ ಕಾಟವೂ ಜಾಸ್ತಿ ಆಗಿತ್ತು. ಸಮೀಪದ ಚರಂಡಿಯಲ್ಲೂ ಕೆಸರು ಕಟ್ಟಿಕೊಂಡು ನೀರು ಸರಾಗವಾಗಿ ಹರಿಯದೆ ಸೊಳ್ಳೆ , ನೊಣಗಳು ಹೆಚ್ಚಾಗಿದ್ದವು.

ಶ್ರಮದಾನ ಮಾಡುವ ಮೂಲಕ ಗಮನಸೆಳೆದ ಮಡಿಕೇರಿ ಪೊಲೀಸರುಶ್ರಮದಾನ ಮಾಡುವ ಮೂಲಕ ಗಮನಸೆಳೆದ ಮಡಿಕೇರಿ ಪೊಲೀಸರು

ಇದನ್ನು ಸ್ವಚ್ಚಗೊಳಿಸಲು ಪುರುಷ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಗಳು ಸಾಮೂಹಿಕ ಶ್ರಮದಾನಕ್ಕೆ ಮುಂದಾದರು. ಗುರುವಾರ ಬೆಳಗ್ಗೆ 7 ಘಂಟೆಯಿಂದಲೇ ಗುದ್ದಲಿ, ಕತ್ತಿಯೊಂದಿಗೆ ಕೆಲಸ ಆರಂಭಿಸಿದರು. ಪೊಲೀಸ್ ಠಾಣೆಗೆ ತೆರಳುವ ಮಾರ್ಗ ಹಾಗೂ ಸುತ್ತಲೂ ಬೆಳೆದಿದ್ದ ಕುರುಚಲು ಗಿಡಗಳನ್ನು ಕಳೆ ಕೊಚ್ಚುವ ಯಂತ್ರಗಳಿಂದ ಸ್ವಚ್ಛಗೊಳಿಸಿದರು.

ಪೊಲೀಸ್ ಸಿಬ್ಬಂದಿಗೆ ಕಡ್ಡಾಯ ವಾರದ ರಜೆ ಕೊಡಿ: ಪೊಲೀಸ್ ಮಹಾ ನಿರ್ದೇಶಕರ ಆದೇಶ ಪೊಲೀಸ್ ಸಿಬ್ಬಂದಿಗೆ ಕಡ್ಡಾಯ ವಾರದ ರಜೆ ಕೊಡಿ: ಪೊಲೀಸ್ ಮಹಾ ನಿರ್ದೇಶಕರ ಆದೇಶ

Shanivarasanthe Police Performed Shramadana

ಮೂರು ಗಂಟೆಗಳ ಶ್ರಮದಾನದ ಮೂಲಕ ಪರಿಸರವು ಸಂಪೂರ್ಣ ಸ್ವಚ್ಚವಾಯಿತು. ಒಳಚರಂಡಿಯಲ್ಲೂ ಕೊಳಚೆ ನೀರು ಸರಾಗವಾಗಿ ಹರಿಯಲಾರಂಭಿಸಿತು. ಪೊಲೀಸರ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ! ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!

Shanivarasanthe Police Performed Shramadana

Recommended Video

ನಾಳೆಯಿಂದ ಫೆ. 25ರವರೆಗೆ ಕೃಷಿ ಹಾಗೂ ಕರಾವಳಿ ಕಲೋತ್ಸವ | Oneindia Kannada

ಸದಾ ಲಾಠಿ, ಬಂದೂಕು ಹಿಡಿದು ಓಡಾಡುತ್ತಿದ್ದ ಪೊಲೀ ಸ್ವಚ್ಛತಾ ಕಾರ್ಯದಲ್ಲೂ ಭಾಗವಹಿಸುವ ಮೂಲಕ ತಾವು ಎಲ್ಲಾ ಕೆಲಸಕ್ಕೂ ಸೈ ಎಂಬ ಸಂದೇಶ ರವಾನಿಸಿದ್ದಾರೆ.

English summary
Madikeri Shanivarasanthe police performed shramadana. Police cleaned the place near police quarters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X