• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಕಲಿ ಕೋವಿಡ್ ನೆಗೆಟಿವ್‌ ವರದಿ ಕೊಡುತ್ತಿದ್ದ ಪತ್ರಕರ್ತನ ಬಂಧನ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮೇ 25; ಕೋವಿಡ್ ಮಹಾಮಾರಿ ರಣಕೇಕೆ ಹಾಕುತ್ತಿರಬೇಕಾದರೆ ರೋಗ ಹರಡದಂತೆ ತಡೆಯಲು ಸಮಾಜಮುಖಿ ಕೆಲಸವನ್ನು ಪತ್ರಕರ್ತ ಮಾಡಬೇಕು. ಕೊರೊನಾ ಫ್ರಂಟ್ ಲೈನ್ ವಾರಿಯರ್‌ ಆಗಿ ಕೆಲಸ ಮಾಡಬೇಕಾದ ಪತ್ರಕರ್ತ ನಕಲಿ ಕೋವಿಡ್ ನೆಗೆಟಿವ್‌ ವರದಿ ತಯಾರಿಸಿ ಮಾರಾಟ ಮಾಡಿ, ಸಿಕ್ಕಿಬಿದ್ದಿದ್ದಾನೆ.

ಕರ್ನಾಟಕದಿಂದ ಕೇರಳಕ್ಕೆ ಹೋಗುವವರಿಗೆ ಕೋವಿಡ್ ನೆಗಟಿವ್ ವರದಿ ಕಡ್ಡಾಯವಾಗಿದೆ. ವೀರಾಜಪೇಟೆ ತಾಲೂಕು ಸಿದ್ಧಾಪುರದ ಪತ್ರಿಕೆಯೊಂದರ ವರದಿಗಾರ ಅಬ್ದುಲ್ ಅಜೀಜ್ ಕೇರಳಕ್ಕೆ ಗಿಡ ತಗೊಂಡು ಹೋಗುವವರಿಗೆ ಮತ್ತು ಕೇರಳಕ್ಕೆ ಪ್ರಯಾಣಿಸುವವರಿಗೆ ತನ್ನ ಸ್ಟುಡಿಯೋದಲ್ಲಿಯೇ ನಕಲಿ ವರದಿ ತಯಾರಿಸಿ ಕೊಡುತ್ತಿದ್ದ.

ನಕಲಿ ಆರ್‌ಟಿ-ಪಿಸಿಆರ್ ವರದಿಯನ್ನು ನೀಡುತ್ತಿದ್ದ ಮೂವರ ಬಂಧನ ನಕಲಿ ಆರ್‌ಟಿ-ಪಿಸಿಆರ್ ವರದಿಯನ್ನು ನೀಡುತ್ತಿದ್ದ ಮೂವರ ಬಂಧನ

ಯಾವುದೇ ಟೆಸ್ಟ್ ಮಾಡಿಸದೇ ಹಣವನ್ನು ಪಡೆದು ನಕಲಿ ವರದಿ ಕೊಡುತ್ತಿದ್ದ ಅಬ್ದುಲ್ ಅಜೀಜ್ ಮಾಧ್ಯಮದ ಘನತೆಯನ್ನು ಹಾಳು ಮಾಡಿದ್ದು, ಮಡಿಕೇರಿ ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್ ಮಾದಪ್ಪ ಅಬ್ದುಲ್ ಬಂಧಿಸಿದ್ದಾರೆ.

ನಕಲಿ ನೆಗಟಿವ್ ಕೋವಿಡ್ ರಿಪೋರ್ಟ್ ಕೊಡ್ತಿದ್ದ ವ್ಯಕ್ತಿ ಬಂಧನನಕಲಿ ನೆಗಟಿವ್ ಕೋವಿಡ್ ರಿಪೋರ್ಟ್ ಕೊಡ್ತಿದ್ದ ವ್ಯಕ್ತಿ ಬಂಧನ

ಕೊಡಗಿನಿಂದ ಕೇರಳಕ್ಕೆ ತೆರಳುವ ವಾಹನಗಳನ್ನು ಗಡಿಯಲ್ಲಿ ತಪಾಸಣೆ ಮಾಡುವಾಗ ನಕಲಿ ನೆಗೆಟಿವ್‌ ವರದಿ ಪತ್ತೆಯಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿದಾಗ ನಕಲಿ ವರದಿ ತಯಾರು ಮಾಡುವವ ಸಿಕ್ಕಿಬಿದ್ದಿದ್ದಾನೆ.

ಉತ್ತರ ಕನ್ನಡ; ಅಂಕೋಲಾದಲ್ಲಿ 30ಕ್ಕೂ ಅಧಿಕ ನಕಲಿ ವೈದ್ಯರ ಪತ್ತೆ ಉತ್ತರ ಕನ್ನಡ; ಅಂಕೋಲಾದಲ್ಲಿ 30ಕ್ಕೂ ಅಧಿಕ ನಕಲಿ ವೈದ್ಯರ ಪತ್ತೆ

ಇದುವರೆಗೂ ಹಲವಾರು ಜನರಿಗೆ ನಕಲಿ ವರದಿ ತಯಾರಿಸಿಕೊಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆದರೆ ಎಷ್ಟು ಜನರಿಗೆ ಈ ರೀತಿ ನಕಲಿ ವರದಿ ನೀಡಿದ್ದಾನೆ ಎಂದು ಖಚಿತವಾಗಿ ತಿಳಿದು ಬಂದಿಲ್ಲ.

ಅಬ್ದುಲ್ ಅಜೀವ್ ವಿರುದ್ದ ಕುಟ್ಟ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಜಿಲ್ಲೆಯಲ್ಲಿ ನಕಲಿ ವರದಿ ತಯಾರಿಕೆ ಕುರಿತು ಆರೋಪಿಯನ್ನು ಬಂಧಿಸಿದ ಮೊದಲ ಪ್ರಕರಣ ಇದಾಗಿದೆ.

   Ramesh jaarkiholi ಲೈಂಗಿಕ ಪ್ರಕರಣಕ್ಕೆ ಹೊಸ ಟ್ವಿಸ್ಟ್! | Ramesh Jarkiholi | Oneindia Kannada
   English summary
   Madikeri police arrested journalist for selling fake Covid negative certificate for the people who travel to Kerala.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X