ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಸೋಂಕಿತನ ಜೊತೆ ಬಸ್‌ನಲ್ಲಿ ಪ್ರಯಾಣಿಸಿದವರು ಎಚ್ಚೆತ್ತುಕೊಳ್ಳಿ

|
Google Oneindia Kannada News

ಕೊಡಗು, ಮಾರ್ಚ್ 19: ಕರ್ನಾಟಕದಲ್ಲಿ 15ನೇ ಕೊರೊನಾ ಕೇಸ್ ಪತ್ತೆಯಾಗಿದೆ. ದುಬೈನಿಂದ ಭಾರತಕ್ಕೆ ಬಂದಿದ್ದ 76 ವರ್ಷದ ವೃದ್ದನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೀಗ, ಈ ವ್ಯಕ್ತಿಯ ಜೊತೆ ಯಾರೆಲ್ಲಾ ಸಂಪರ್ಕದಲ್ಲಿದ್ದರು ಎನ್ನುವುದನ್ನು ಸರ್ಕಾರ ಮತ್ತು ವೈದ್ಯರು ಪತ್ತೆ ಹೆಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.

ಸೋಂಕಿತ ವ್ಯಕ್ತಿಯನ್ನು ಐಸೋಲೇಶನ್ ವಾರ್ಡ್‌ನಲ್ಲಿ ಇರಿಸಲಾಗಿದ್ದು, ಅವರ ಮೇಲೆ ನಿಗಾವಹಿಸಲಾಗಿದೆ ಎಂದು ಖುದ್ದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದರು. ಇದೀಗ, ಸೌದಿ ಅರೇಬಿಯಾದಿಂದ ಆತನ ಜೊತೆ ವಿಮಾನದಲ್ಲಿ ಹಾಗೂ ಬೆಂಗಳೂರಿಗೆ ಬಂದ ಮೇಲೆ ಬಸ್‌ನಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕರ ಬಗ್ಗೆ ಆತಂಕ ಸೃಷ್ಟಿಯಾಗಿದೆ.

ಕೊಡಗು ಜಿಲ್ಲೆಗೆ ಕಾಲಿಟ್ಟ ಕೊರೊನಾ: ಕರ್ನಾಟಕದಲ್ಲಿ ಒಟ್ಟು 15 ಕೇಸ್ಕೊಡಗು ಜಿಲ್ಲೆಗೆ ಕಾಲಿಟ್ಟ ಕೊರೊನಾ: ಕರ್ನಾಟಕದಲ್ಲಿ ಒಟ್ಟು 15 ಕೇಸ್

ಹೀಗಾಗಿ, ಸೋಂಕಿತ ಪ್ರಯಾಣಿಸಿದ ವಿಮಾನ ಮತ್ತು ಬಸ್‌ ಕುರಿತಂತೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಅನುಸಾರ ಯಾರೆಲ್ಲಾ ಈ ವಿಮಾನದಲ್ಲಿ ಹಾಗೂ ಬಸ್‌ನಲ್ಲಿ ಪ್ರಯಾಣ ಮಾಡಿದ್ದರೋ ಅವರೆಲ್ಲರೂ ಕೂಡಲೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಎಂದು ಕೊಡಗು ಜಿಲ್ಲಾಧಿಕಾರಿ ಮತ್ತು ಸಂಸದ ಪ್ರತಾಪ್ ಸಿಂಹ ವಿನಂತಿಸಿಕೊಂಡಿದ್ದಾರೆ. ಮಾಹಿತಿ ಮುಂದೆ ಓದಿ...

ಇಂಡಿಗೋ ವಿಮಾನ 6E96

ಇಂಡಿಗೋ ವಿಮಾನ 6E96

6E96 ಸಂಖ್ಯೆಯ ಇಂಡಿಗೋ ವಿಮಾನದಲ್ಲಿ ಸೋಂಕಿತ ವ್ಯಕ್ತಿ ದುಬೈನಿಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದರು. ಈ ವಿಮಾನ ಮಾರ್ಚ್ 15ರ ಸಂಜೆ 4.15ಕ್ಕೆ ಬೆಂಗಳೂರು ಬಂದು ತಲುಪಿತ್ತು. ಈ ವಿಮಾನದಲ್ಲಿ ಬಂದಿದ್ದ ಎಲ್ಲರೂ ಒಮ್ಮೆ ಕೊರೊನಾ ಪರೀಕ್ಷೆಗೆ ಒಳಪಡಿ ಎಂದು ಸರ್ಕಾರ ವಿನಂತಿಸಿಕೊಂಡಿದೆ.

ಕೆಎಸ್‌ಆರ್‌ಟಿಸಿ ಬಸ್

ಕೆಎಸ್‌ಆರ್‌ಟಿಸಿ ಬಸ್

KA19-F-3170 ಸಂಖ್ಯೆಯ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ನಲ್ಲಿ ಬೆಂಗಳೂರಿನಿಂದ ಮಡಿಕೇರಿಗೆ ಸೋಂಕಿತ ವ್ಯಕ್ತಿ ಪ್ರಯಾಣ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ರಾತ್ರಿ 11:33ಕ್ಕೆ ಈ ಬಸ್‌ ಬೆಂಗಳೂರಿನ ಸ್ಯಾಟ್‌ಲೈಟ್‌ ಬಸ್‌ ನಿಲ್ದಾಣದಿಂದ ಪ್ರಯಾಣ ಆರಂಭಿಸಿದೆ. ವಿರಾಜಪೇಟೆ, ಮರ್ನಾಡ್ ಮಾರ್ಗವಾಗಿ ಈ ಬಸ್ ಸಾಗಿದೆ. ಈ ಬಸ್‌ನಲ್ಲಿ ಪ್ರಯಾಣ ಮಾಡಿದವರು ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಎಂದು ತಿಳಿಸಲಾಗಿದೆ.

ಕೊಡಗಿನಲ್ಲಿ ಸೆಕ್ಷನ್ 144 ಜಾರಿ ಮಾಡಿದ ಡಿಸಿಕೊಡಗಿನಲ್ಲಿ ಸೆಕ್ಷನ್ 144 ಜಾರಿ ಮಾಡಿದ ಡಿಸಿ

ಕೊಡಗಿನಲ್ಲಿ ಸೆಕ್ಷನ್ 144 ಜಾರಿ

ಕೊಡಗಿನಲ್ಲಿ ಸೆಕ್ಷನ್ 144 ಜಾರಿ

ಕೊಡಗಿನಲ್ಲಿ ಮೊದಲ ಕೊರೊನಾ ಕೇಸ್ ಪತ್ತೆಯಾದ ಕಾರಣ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ, ರೆಸ್ಟೋರೆಂಟ್‌ಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ. ಸದ್ಯಕ್ಕೆ, ಜಾತ್ರೆ, ಸಮಾರಂಭ, ಪಾರ್ಟಿ ಏನು ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.

ಕರ್ನಾಟಕದಲ್ಲಿ 15ನೇ ಸೋಂಕು

ಕರ್ನಾಟಕದಲ್ಲಿ 15ನೇ ಸೋಂಕು

ಇದುವರೆಗೂ ಕರ್ನಾಟಕದಲ್ಲಿ ಒಟ್ಟು 15 ಜನರಲ್ಲಿ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 11, ಕಲುಬುರ್ಗಿಯಲ್ಲಿ 3, ಮಡಿಕೇರಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಭಾರತದಲ್ಲಿ ಒಟ್ಟು 197 ಕೇಸ್ ವರದಿಯಾಗಿದೆ. ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಹಾಗು ಪಂಜಾಬ್‌ನಲ್ಲಿ ತಲಾ ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.

English summary
District Administration Kodagu requested, those who were on IndiGo flight 6E96 on 15th March, KSRTC Bus No. KA19F3170 from Bengaluru to Madikeri, should report to the nearest Govt hospital, as a positive case of COVID19 had used these facilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X