ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ದುರಂತದ ಬಗ್ಗೆ ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ವಿಜ್ಞಾನಿಗಳು

|
Google Oneindia Kannada News

Recommended Video

ಕೊಡಗಿನ ದುರಂತದ ಬಗ್ಗೆ ಆಘಾತಕಾರಿ ಮಾಹಿತಿ ಕೊಟ್ಟ ವಿಜ್ಞಾನಿಗಳು | Oneindia Kannada

ಕೊಡಗು, ಆಗಸ್ಟ್ 23 : ಭಾರೀ ಭೂ ಕುಸಿತ ಸೇರಿದಂತೆ ಮಹಾಮಳೆಗೆ ತತ್ತರಿಸಿದ ಕೂಡಗು ಜಿಲ್ಲೆ ಆಘಾತದಿಂದ ನಿಧಾನವಾಗಿ ಹೊರಬರುತ್ತಿದೆ. ದುರಂತಗಳಿಂದ ನಲುಗಿ ಹೋಗಿರುವ ಕೆಚ್ಚೆದೆಯ ಕೊಡವರು ಸುಧಾರಿಸಿಕೊಳ್ಳುತ್ತಿದ್ದಾರೆ.

ಈ ನಡುವೆ ಕೊಡಗಿನಾದ್ಯಂತ ಹಾಗು ಪಶ್ಚಿಮ ಘಟ್ಟದಲ್ಲಿ ಸಂಭವಿಸಿರುವ ಭಾರೀ ಭೂ ಕುಸಿತದ ಪರಿಶೀಲನೆ ಹಾಗು ಅಧ್ಯಯನಕ್ಕೆ ಭೂ ವಿಜ್ಞಾನಿಗಳು ಮುಂಗಾಗಿದ್ದಾರೆ. ಭಾರತೀಯ ಭೂ ಸರ್ವೇಕ್ಷಣಾಲಯದ ವಿಜ್ಞಾನಿಗಳು ದುರಂತ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿ ಆಘಾತಕಾರಿ ಮಾಹಿತಿ ಹೊರ ಹಾಕಿದ್ದಾರೆ.

ಕೇರಳ, ಕೊಡಗು ಪ್ರವಾಹಕ್ಕೆ 'ಸೋಮಾಲಿ ಜೆಟ್‌' ಕಾರಣ: ಸ್ಫೋಟಕ ಮಾಹಿತಿಕೇರಳ, ಕೊಡಗು ಪ್ರವಾಹಕ್ಕೆ 'ಸೋಮಾಲಿ ಜೆಟ್‌' ಕಾರಣ: ಸ್ಫೋಟಕ ಮಾಹಿತಿ

ಜಲಪ್ರಳಯ, ಭಾರೀ ಭೂ ಕುಸಿತ ಸಂಭವಿಸಿದ ಕೆಲ ಗ್ರಾಮಗಳಲ್ಲಿ ಮತ್ತೆ ವಾಸ ಅತ್ಯಂತ ಅಪಾಯಕಾರಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಭೀಕರ ಭೂ ಕುಸಿತದೊಂದಿಗೆ ಜಲಪ್ರಳಯಕ್ಕೆ ಸಾಕ್ಷಿಯಾದ ಕೊಡಗಿನ ಗಡಿಗ್ರಾಮಗಳಿಗೆ ಭಾರತೀಯ ಸರ್ವೇಕ್ಷಣಾಲಯ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಗಡಿಭಾಗದ ಗ್ರಾಮಗಳಾದ ಜೋಡುಪಾಲ, ಅರೇಕಲ್ಲು, ಮದೆನಾಡು ಪ್ರದೇಶಗಳಿಗೆ ಭೇಟಿ ನೀಡಿದ ಡಾ. ಶ್ರೀನಿವಾಸ ರೆಡ್ಡಿ, ಡಾ . ಪ್ರಕಾಶ್ ಹಾಗೂ ಡಾ. ಮಾರುತಿ ಅವರನ್ನೊಳಗೊಂಡ ವಿಜ್ಞಾನಿಗಳ ತಂಡ ಆಘಾತಕಾರಿ ಮಾಹಿತಿ ಹೊರಹಾಕಿದೆ.

ಪಶ್ಚಿಮ ಘಟ್ಟದಲ್ಲಿ ನಿಗೂಢ ಸ್ಫೋಟಗಳು, ಕಾದಿದೆಯಾ ಗಂಡಾಂತರ?ಪಶ್ಚಿಮ ಘಟ್ಟದಲ್ಲಿ ನಿಗೂಢ ಸ್ಫೋಟಗಳು, ಕಾದಿದೆಯಾ ಗಂಡಾಂತರ?

ಬೆಟ್ಟ ಪ್ರದೇಶಗಳಲ್ಲಿ ಇಂಗಿದ ಮಳೆ ನೀರು, ಮಣ್ಣು ಸಡಿಲಗೊಂಡಿರುವುದರಿಂದ ಭೂ ಪದರದಿಂದ ಜಲ ಸ್ಫೋಟವಾಗಿ ಹೊರ ಬಂದಿದೆ ಎಂದು ಅವರು ಆಭಿಪ್ರಾಯಪಟ್ಟಿದ್ದಾರೆ. ದುರಂತ ಸಂಭವಿಸಿದ ಜೋಡುಪಾಲ, ಮದೆನಾಡು ಹಾಗು ಅರೆಕಲ್ಲ್ ಸ್ಥಳಗಳಲ್ಲಿ ಜನರ ವಾಸ ಅಪಾಯಕಾರಿ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಮುಂದೆ ಓದಿ...

 ಮತ್ತೆ ದುರಂತ ಸಂಭವ

ಮತ್ತೆ ದುರಂತ ಸಂಭವ

ಜೋಡುಪಾಲ ಹಾಗು ಅರೆಕಲ್ಲು ಪ್ರದೇಶದಲ್ಲಿ ಆಗಿರುವ ಭೂ ಕುಸಿತ ಭೀಕರತೆಯಿಂದ ಕೂಡಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಈ ಭಾಗದಲ್ಲಿ ನಿರಂತರ ಮಳೆ ಸುರಿದರೆ ದುರಂತ ಸಂಭವಿಸಲಿದೆ. ಇಲ್ಲಿ ನಡೆದಿರುವ ಘಟನೆಗಳ ಬಗ್ಗೆ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ನೀಡಲಿದ್ದೇವೆ.

ಘಟನೆಗಳು ನಡೆದ ಸ್ಥಳಕ್ಕೆ ಭೇಟಿ ನೀಡಿ ಪ್ರಥಮ ವರದಿ ಸಿದ್ಧಪಡಿಸಲಾಗುವುದು. ಈ ಘಟನೆಗಳ ಬಗ್ಗೆ ಸಮಗ್ರ ಅಧ್ಯಯನಕ್ಕೆ ವಿಜ್ಞಾನಿಗಳ ತಂಡ ಶೀಘ್ರವಾಗಿ ಬರಲಿದ್ದು, ವಿವರವಾದ ಸಮಗ್ರ ಅಧ್ಯಯನ ನಡೆಸಿ ವಿಸ್ತೃತ ವರದಿ ಸರಕಾರಕ್ಕೆ ಸಲ್ಲಿಸಲಾಗುವವುದು ಎಂದು ಡಾ. ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.

 ಮಣ್ಣಿನ ಕುಸಿತಕ್ಕೆ ಕಾರಣ

ಮಣ್ಣಿನ ಕುಸಿತಕ್ಕೆ ಕಾರಣ

ಈ ವಿಕೋಪ ಮಾನವ ಸೃಷ್ಟಿಯೆಂದು ಅಭಿಪ್ರಾಯಪಟ್ಟಿರುವ ವಿಜ್ಞಾನಿಗಳು ವಿಕೋಪಗಳು ನಡೆದಾಗ ಅದರ ಹಾನಿಗಳಿಗೆ ಮನುಷ್ಯನ ಹಸ್ತಕ್ಷೇಪ ಕಾರಣವಾಗಿರುತ್ತದೆ. ಪ್ರಕೃತಿ ವಿಕೋಪಗಳನ್ನು ತಡೆಯಲು ಸಾಧ್ಯವಿಲ್ಲ. ಆದರೆ ಅದರ ತೀವ್ರತೆಯನ್ನು ತಡೆಯಬಹುದು.

ನಮ್ಮಿಂದಾದ ತಪ್ಪುಗಳು ಪುನರಾವರ್ತನೆಗೊಳ್ಳದಂತೆ ನೋಡಿಕೊಳ್ಳುವುದು ಮುಖ್ಯ. ಭೂ ಕುಸಿತವಾದ ಪ್ರದೇಶಗಳಲ್ಲಿ ಜನವಸತಿ ಮಾಡೋಕೆ ಸಾಧ್ಯವಿಲ್ಲ. ಈ ಭಾಗದಲ್ಲಿ ತೀವ್ರ ಮಳೆಯಿಂದಾಗಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಭೂಮಿಯ ಕೆಳಗೆ ನೀರಿನ ಮಟ್ಟ ಏರಿರೋದ್ರಿಂದ ಮಣ್ಣು ಕುಸಿತವಾಗಿದೆ.

ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ

 ಜನರೇ ಎಚ್ಚೆತ್ತುಕೊಳ್ಳಿ

ಜನರೇ ಎಚ್ಚೆತ್ತುಕೊಳ್ಳಿ

ಶೀಘ್ರವಾಗಿ ಮತ್ತೆ ವಿಜ್ಞಾನಿಗಳ ತಂಡ ಜೋಡುಪಾಲ,ಅರೆಕಲ್ಲು, ಮಣ್ಣಂಗೇರಿ, ಮದೆನಾಡು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಸಂಪೂರ್ಣ ಅಧ್ಯಯನಕ್ಕಾಗಿ ಎರಡು ತಿಂಗಳು ಬೇಕಾಗಿರೋದ್ರಿಂದ ಇದೀಗ ಸ್ಥಳೀಯರ ಮಾಹಿತಿ ಪಡೆದುಕೊಂಡು ವಿಜ್ಞಾನಿಗಳ ತಂಡ ವರದಿ ತಯಾರಿಸುತ್ತಿದೆ.

ಮಾನವ ನಿರ್ಮಿತ ಅಪರಾಧಗಳಿಂದ ಭಾರೀ ದೊಡ್ಡ ಪಾಕೃತಿಕ ವಿಕೋಪವಾಗಿದ್ದು, ಜನ ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ಅಪಾಯವಾಗುವ ಸೂಚನೆಯನ್ನು ವಿಜ್ಞಾನಿಗಳು ನೀಡಿದ್ದಾರೆ.

 ಗಾಯದ ಮೇಲೆ ಬರೆ

ಗಾಯದ ಮೇಲೆ ಬರೆ

ದುರಂತ ಸ್ಥಳಗಳಿಗೆ ಭೇಟಿ ನೀಡಿದ ವಿಜ್ಞಾನಿಗಳ ತಂಡದ ಅಭಿಪ್ರಾಯ ಸಂತ್ರಸ್ತರ ನಿದ್ದೆಗೆಡಿಸಿದೆ. ಮತ್ತೆ ಸೂರು ಕಟ್ಟುವ ಆಸೆ ಹೊಂದಿದ್ದ ಸಂತ್ರಸ್ತರಿಗೆ ವಿಜ್ಞಾನಿಗಳ ವರದಿ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರಕೃತಿಯೇ ಮುನಿದು ನಿಂತರೆ ಬದುಕುವುದಾದರೂ ಹೇಗೆ?ಪ್ರಕೃತಿಯೇ ಮುನಿದು ನಿಂತರೆ ಬದುಕುವುದಾದರೂ ಹೇಗೆ?

English summary
A Team of scientists visited Jodupala, Madenadu, Arekallu to study about land slide and give report to government. They collected some specimen and information from native people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X