ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಘು ವಾಹನ, ಬಸ್‌ಗಳ ಸಂಚಾರಕ್ಕೆ ಸಂಪಾಜೆ ಘಾಟ್ ಮುಕ್ತ

|
Google Oneindia Kannada News

ಮಡಿಕೇರಿ, ನವೆಂಬರ್ 19 : ಸಂಪಾಜೆ ಘಾಟ್ ಮಾರ್ಗವಾಗಿ ಎಲ್ಲಾ ಮಾದರಿಯ ಬಸ್, ಲಘು ವಾಹನಗಳ ಸಂಚಾರಕ್ಕೆ ಕೊಡಗು ಜಿಲ್ಲಾಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಮಳೆ, ಭೂ ಕುಸಿತದ ಕಾರಣದಿಂದಾಗಿ ಸಂಪಾಜೆ ಘಾಟ್ ರಸ್ತೆಗೆ ಹಾನಿಯಾಗಿತ್ತು.

ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ, ತಾಳತ್‌ಮನೆ, ಸಂಪಾಜೆ ಮಾರ್ಗವಾಗಿ ಮಂಗಳೂರಿಗೆ ಎಲ್ಲಾ ಮಾದರಿಯ ಬಸ್ ಸಂಚಾರಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದ್ದಾರೆ.

ಸಂಪಾಜೆ ಘಾಟ್ ರಸ್ತೆ ಎಲ್ಲಾ ವಾಹನ ಸಂಚಾರಕ್ಕೆ ಸಿದ್ಧಸಂಪಾಜೆ ಘಾಟ್ ರಸ್ತೆ ಎಲ್ಲಾ ವಾಹನ ಸಂಚಾರಕ್ಕೆ ಸಿದ್ಧ

ಸರಕು ಸಾಗಣೆ ವಾಹನ ಹೊರತುಪಡಿಸಿ ಅಡುಗೆ ಅನಿಲ, ಇಂಧನ, ಹಾಲು ಪೂರೈಕೆ, ಸರ್ಕಾರಿ ಕೆಲಸಕ್ಕೆ ಬಳಸುವ ವಾಹನ, ಶಾಲಾ-ಕಾಲೇಜು ವಾಹನ, ಕಾರು, ಜೀಪು, ಬೈಕ್, ವ್ಯಾನ್, ಮ್ಯಾಕ್ಸಿಕ್ಯಾಬ್, ಟೆಂಪೋ, ಸಾಮಾನ್ಯ ಬಸ್, ಐರಾವತ, ಖಾಸಗಿ ಲಕ್ಷುರಿ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಚಿತ್ರಗಳು : ಮಡಿಕೇರಿ-ಮಂಗಳೂರು ರಸ್ತೆ ದುರಸ್ಥಿಚಿತ್ರಗಳು : ಮಡಿಕೇರಿ-ಮಂಗಳೂರು ರಸ್ತೆ ದುರಸ್ಥಿ

ತಾತ್ಕಾಲಿಕವಾಗಿ ರಸ್ತೆ ದುರಸ್ತಿಯಾದ ನಂತರ ಮಡಿಕೇರಿಯಿಂದ ಜೋಡುಪಾಲದ ತನಕ ಮಿನಿ ಬಸ್‌ ಮಾತ್ರ ಸಂಚಾರ ನಡೆಸುತ್ತಿದ್ದವು. ಅಲ್ಲಿಂದ ಬೇರೆ ಬಸ್‌ಗಳಲ್ಲಿ ಪ್ರಯಾಣಿಕರು ಸಂಪಾಜೆ, ಸುಳ್ಯ, ಪುತ್ತೂರು ಹಾಗೂ ಮಂಗಳೂರಿಗೆ ತೆರಳಬೇಕಿತ್ತು....

ಚಿತ್ರಗಳು : ಕೊಡಗಿನಲ್ಲಿ ಕೇಂದ್ರ ಅಧ್ಯಯನ ತಂಡದಿಂದ ನಷ್ಟ ಅಂದಾಜುಚಿತ್ರಗಳು : ಕೊಡಗಿನಲ್ಲಿ ಕೇಂದ್ರ ಅಧ್ಯಯನ ತಂಡದಿಂದ ನಷ್ಟ ಅಂದಾಜು

ಭಾನುವಾರದಿಂದ ಸಂಚಾರ ಆರಂಭ

ಭಾನುವಾರದಿಂದ ಸಂಚಾರ ಆರಂಭ

ಭಾನುವಾರದಿಂದ ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ, ತಾಳತ್‌ಮನೆ, ಸಂಪಾಜೆ ಮಾರ್ಗವಾಗಿ ಮಂಗಳೂರಿಗೆ ತೆರಳಲು ಎಲ್ಲಾ ಮಾದರಿಯ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಆದೇಶ ನೀಡಿದ್ದಾರೆ. ಆಗಸ್ಟ್‌ ತಿಂಗಳಿನಲ್ಲಿ ಉಂಟಾಗಿದ್ದ ಭೂ ಕುಸಿತದ ಬಳಿಕ ಮಾರ್ಗದಲ್ಲಿ ಒಂದು ತಿಂಗಳು ವಾಹನ ಸಂಚಾರ ಬಂದ್ ಆಗಿತ್ತು.

14 ಕಿ.ಮೀ. ತಾತ್ಕಾಲಿಕ ರಸ್ತೆ

14 ಕಿ.ಮೀ. ತಾತ್ಕಾಲಿಕ ರಸ್ತೆ

ಕರ್ನಾಟಕ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗ ರಾಷ್ಟ್ರೀಯ ಹೆದ್ದಾರಿ 275ರಲ್ಲಿ 14 ಕಿ.ಮೀ. ತಾತ್ಕಾಲಿಕ ರಸ್ತೆಯನ್ನು ನಿರ್ಮಾಣ ಮಾಡಿದೆ. ಕೊಡಗು ಜಿಲ್ಲಾಡಳಿತ ರಸ್ತೆಯಲ್ಲಿ ವಾಹನ ಸಂಚಾರ ಆರಂಭಿಸಲು ಅವಕಾಶ ನೀಡಬಹುದು ಎಂದು ಅಧಿಕಾರಿಗಳು ಶಿಫಾರಸು ಮಾಡಿದ್ದರು.

ಭೂ ಕುಸಿತದಿಂದ ಹಾನಿ

ಭೂ ಕುಸಿತದಿಂದ ಹಾನಿ

ಆಗಸ್ಟ್‌ನಲ್ಲಿ ಸುರಿದ ಮಳೆ, ಭೂ ಕುಸಿತದಿಂದ ಸಂಪಾಜೆ ಘಾಟ್‌ನ 14 ಕಿ.ಮೀ. ರಸ್ತೆಗೆ ಭಾರಿ ಹಾನಿಯಾಗಿತ್ತು. 10 ಕೋಟಿ ರೂ. ವೆಚ್ಚದಲ್ಲಿ ತಾತ್ಕಾಲಿಕವಾಗಿ ರಸ್ತೆಯನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಶಾಶ್ವತ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರದ ಅನುದಾನವನ್ನು ಕೇಳಲಾಗುತ್ತದೆ.

ಪ್ರಮುಖ ಹೆದ್ದಾರಿಯಾಗಿದೆ

ಪ್ರಮುಖ ಹೆದ್ದಾರಿಯಾಗಿದೆ

ಕರಾವಳಿ ಜಿಲ್ಲೆಗಳು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಈ ರಾಷ್ಟ್ರೀಯ ಹೆದ್ದಾರಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆ, ಭೂ ಕುಸಿತದಿಂದಾಗಿ ಹಾನಿಗೊಂಡಿತ್ತು. ಮೂರು ತಿಂಗಳಿನಿಂದ ರಸ್ತೆ ಬಂದ್ ಆಗಿತ್ತು.

English summary
Kodagu Deputy Commissioner P.I.Sreevidya cleared the Sampaje Ghat road for light motor vehicle. Karnataka Public Works Department complete the temporary road work of 14 km in Sampaje Ghat. Road damaged after heavy rain and landslide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X