ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ಬೆಳೆಗಾರರೇ ಅಪರಿಚಿತ ಕಾರ್ಮಿಕರತ್ತ ಎಚ್ಚರವಿರಲಿ!

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಫೆಬ್ರವರಿ 27; ಕೊಡಗಿನಲ್ಲಿ ಕೂಲಿ ಕಾರ್ಮಿಕರ ಸಮಸ್ಯೆಯಾಗಿರುವುದರಿಂದ ತಮ್ಮ ಕೆಲಸ ಮಾಡಿಸುವ ಸಲುವಾಗಿ ಗುರುತು ಪರಿಚಯವಿಲ್ಲದ ಹೊರಗಿನ ವ್ಯಕ್ತಿಗಳನ್ನು ತಮ್ಮ ತೋಟಗಳಲ್ಲಿಟ್ಟುಕೊಂಡು ಕೆಲಸ ಮಾಡುತ್ತಿರುವ ಕಾರಣ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ.

ಈಗಾಗಲೇ ಜಿಲ್ಲಾಡಳಿತ ತಮ್ಮ ತೋಟಗಳಲ್ಲಿ ಕೂಲಿ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಸಂಪೂರ್ಣ ವಿವರಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಿಗೆ ನೀಡಬೇಕೆಂದು ಸೂಚನೆ ನೀಡಿದ್ದರೂ ಅದು ಕಟ್ಟು ನಿಟ್ಟಾಗಿ ಜಾರಿಯಾಗಿಲ್ಲ. ಜಿಲ್ಲೆಯಲ್ಲಿ ಸಾವಿರಾರು ಮಂದಿ ಹೊರ ರಾಜ್ಯಗಳ ಅದರಲ್ಲೂ ಅಸ್ಸಾಂ ಮೂಲದವರು ಹೆಚ್ಚಾಗಿದ್ದು, ಇಲ್ಲಿನ ತೋಟಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

ಕೊಡಗು; ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಚಾಲನೆ ಕೊಡಗು; ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಚಾಲನೆ

ಇದುವರೆಗೆ ಜಿಲ್ಲೆಯಲ್ಲಿ ನಡೆದ ಅಪರಾಧ ಚಟುವಟಿಕೆಗಳಲ್ಲಿ ಇವರು ಭಾಗಿಯಾಗಿರುವ ನಿದರ್ಶನಗಳಿವೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮೂಲದ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಮೇಲಿಂದ ಮೇಲೆ ತೋಟದ ಮಾಲೀಕರಿಗೆ ಉತ್ತರ ಭಾರತದ ಕಾರ್ಮಿಕರನ್ನು ತಮ್ಮ ತೋಟಗಳಲ್ಲಿ ಕೆಲಸಕ್ಕೆ ಸೇರಿಸುವ ಮುನ್ನ ಅವರ ಫೋಟೋ, ದಾಖಲೆಗಳನ್ನು ನೀಡುವಂತೆ ಸೂಚಿಸುತ್ತಲೇ ಬರಲಾಗುತ್ತಿದೆ. ಕೆಲವು ಮಾಲೀಕರು ಆ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಬೆಂಗಳೂರಿಂದ ಕೊಡಗು, ಕಬಿನಿಗೆ ಹೆಲಿಕಾಪ್ಟರ್‌ ಸೇವೆ; ದರ ಎಷ್ಟು? ಬೆಂಗಳೂರಿಂದ ಕೊಡಗು, ಕಬಿನಿಗೆ ಹೆಲಿಕಾಪ್ಟರ್‌ ಸೇವೆ; ದರ ಎಷ್ಟು?

Robbery Case Estate Owners Should Be Alert

ಸಾಮಾನ್ಯವಾಗಿ ಕೊಡಗಿನಲ್ಲಿ ಒಂಟಿ ಮನೆಗಳು ಹೆಚ್ಚಿದ್ದು, ಇತ್ತೀಚೆಗಿನ ವರ್ಷಗಳಲ್ಲಿ ಮಕ್ಕಳು ಕೆಲಸದ ನಿಮಿತ್ತ ಹೊರಗೆ ನೆಲೆಸಿದ ಕಾರಣ ಮನೆಯಲ್ಲಿ ವೃದ್ದರು ತೋಟ ನೋಡಿಕೊಂಡಿದ್ದಾರೆ. ಇಂತಹ ಮನೆಗಳನ್ನೇ ಟಾರ್ಗೆಟ್ ಮಾಡುವ ಆರೋಪಿಗಳು ಸಮಯ ನೋಡಿ ಮನೆಗೆ ನುಗ್ಗಿ ಮನೆಯಲ್ಲಿದ್ದವರನ್ನು ಬೆದರಿಸಿ ಅಥವಾ ಕೊಲೆ ಮಾಡಿ ಹಣ ಚಿನ್ನಾಭರಣ ದೋಚಿದ ಪ್ರಕರಣಗಳು ನಡೆದಿವೆ.

ಮಡಿಕೇರಿ ವಿಶೇಷ; ಕಾಡಾನೆ ಮರಿ ತಾಯಿಯಿಂದ ದೂರ; ಶಿಬಿರದಲ್ಲಿ ಚಿನ್ನಾಟ! ಮಡಿಕೇರಿ ವಿಶೇಷ; ಕಾಡಾನೆ ಮರಿ ತಾಯಿಯಿಂದ ದೂರ; ಶಿಬಿರದಲ್ಲಿ ಚಿನ್ನಾಟ!

ಐವರು ನೇಪಾಳಿಗಳಿಂದ ಕೃತ್ಯ; ಇದೀಗ ಇಂತಹದ್ದೇ ಪ್ರಕರಣ ಮಡಿಕೇರಿ ತಾಲೂಕಿನ ನಾಪೋಕ್ಲು ಬಳಿಯ ಮೂಟೇರಿ ಗ್ರಾಮದಲ್ಲಿ ನಡೆದಿದ್ದು ಅಲ್ಲಿನ ಎರಡು ಮನೆಗಳನ್ನು ಟಾರ್ಗೆಟ್ ಮಾಡಿದ ನೇಪಾಳ ಮೂಲದ ದಿಲ್ ಬಹದ್ದೂರು ರಾಹುಲ್ (51), ಈಶ್ವರ್ ಥಾಪಾ (48), ಪ್ರೇಮ್ ಬಹದೂರ್ ಖಡ್ಕಾ (30), ಸುದೀಪ್ ಜೆತಾರ (20) ಹಾಗೂ ಕಮಲ ಸಿಂಗ್ (32) ಎಂಬುವರು ಮನೆಯಲ್ಲಿದ್ದ ಇಬ್ಬರು ವೃದ್ಧ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಮಾರಕಾಸ್ತ್ರಗಳಿಂದ ಕೊಲೆ ಮಾಡುವ ಬೆದರಿಕೆಯೊಡ್ಡಿ ಅವರ ಬಳಿಯಿಂದ ನಗದು ಮತ್ತು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದರು.

ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೂಡಲೇ ಎಸ್ಪಿ ಎಂ.ಎ.ಅಯ್ಯಪ್ಪ ಮಾರ್ಗದರ್ಶನದಲ್ಲಿ ಮಡಿಕೇರಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಗಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ತನಿಖಾ ತಂಡ ಎರಡು ತನಿಖಾ ತಂಡ ರಚಿಸಲಾಗಿತ್ತು.

ಈ ತನಿಖಾ ತಂಡದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕಕ ಅನೂಪ್ ಮಾದಪ್ಪ, ಡಿಸಿಆರ್‍ಬಿ ಪೊಲೀಸ್ ನಿರೀಕ್ಷಕ ಐ.ಪಿ.ಮೇದಪ್ಪ, ನಾಪೋಕ್ಲು ಠಾಣಾ ಉಪನಿರೀಕ್ಷಕ ಎಂ.ಕೆ.ಸದಾಶಿವ, ಡಿಸಿಆರ್‍ಬಿ ಸಿಬ್ಬಂದಿಗಳಾದ ಬಿ.ಎಲ್.ಯೊಗೇಶ್ ಕುಮಾರ್, ನಿರಂಜನ್, ವೆಂಕಟೇಶ್, ಅನಿಲ್ ಕುಮಾರ್, ಸುರೇಶ್, ವಸಂತ, ಶರತ್ ರೈ, ಶಶಿಕುಮಾರ್ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತದ ಸಿಬ್ಬಂದಿ ಕಾಳಿಯಪ್ಪ, ಪ್ರೇಮ್ ಕುಮಾರ್, ಶೋಭಾ, ನಾಪೋಕ್ಲು ಪೊಲೀಸ್ ಠಾಣೆಯ ಎಎಸ್‍ಐ ಗೋಪಾಲಕೃಷ್ಣ, ಸಿಬ್ಬಂದಿಗಳಾದ ಸಾಜನ್, ನವೀನ್, ಮಧುಸೂಧನ್, ಮಹದೇವ ನಾಯಕ್, ಪಂಚಲಿಂಗಪ್ಪ ಸುತ್ತಿಗೇರಿ, ರೇಖಾ ಡಿ., ರೇಷ್ಮ, ಭಾಗಮಂಡಲ ಪೊಲೀಸ್ ಠಾಣೆಯ ಇಬ್ರಾಹಿಂ, ನಂಜುಂಡ, ಮಡಿಕೇರಿ ಸಂಚಾರಿ ಠಾಣೆಯ ವಿನೋದ್, ಸಿ.ಡಿ.ಆರ್ ವಿಭಾಗದ ರಾಜೇಶ್, ಗಿರೀಶ್ ಹಾಗೂ ಪ್ರವೀಣ್ ಕುಮಾರ್ ಮೊದಲಾದವರು ಇದ್ದರು.

ಕಾರ್ಯಾಚರಣೆಗೆ ಇಳಿದ ತನಿಖಾ ತಂಡಕ್ಕೆ ಸಿಕ್ಕ ಒಂದಷ್ಟು ಸುಳಿವಿನ ಮೇರೆಗೆ ತನಿಖಾ ತಂಡವು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ 99 ಗ್ರಾಂ ಚಿನ್ನಾಭರಣಗಳು ಮತ್ತು ರೂ. 42,500 ನಗದು ಸೇರಿದಂತೆ ಒಟ್ಟು ರೂ.5,42,500 ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತಂತೆ ಮಾತನಾಡಿರುವ ಎಸ್ಪಿ ಎಂ.ಎ.ಅಯ್ಯಪ್ಪ, "ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಯೋವೃದ್ಧರು ವಾಸವಿರುವ ಮತ್ತು ಒಂಟಿ ಮನೆಗಳ ಮೇಲೆ ದಾಳಿ ನಡೆಯುತ್ತಿದ್ದು, ಈ ದಾಳಿಗಳ ಪೈಕಿ ಹೆಚ್ಚಿನ ಪ್ರಕರಣಗಳಲ್ಲಿ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಬಂದ ಕೂಲಿ ಕೆಲಸಗಾರರು ಭಾಗಿಯಾಗಿರುವುದು ಕಂಡು ಬಂದಿರುವುದರಿಂದ ಜಿಲ್ಲೆಯ ಜನ ಕೂಲಿ ಕೆಲಸಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ಗುರುತಿನ ಚೀಟಿ ಪಡೆಯುವಂತೆ" ಮನವಿ ಮಾಡಿದ್ದಾರೆ.

Recommended Video

ಉಕ್ರೇನ್ ಸ್ಥಿತಿ ಏನು? ಶೀಘ್ರದಲ್ಲೇ ಭಾರತಕ್ಕೆ ಮರಳಲಿದ್ದಾರೆ 470 ಮಂದಿ | Oneindia Kannada

English summary
Robbery case Kodagu coffe estate owners should be alert on workers who come for coffee plantation work form other states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X