ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚಳ; ಸೂಚನೆಗಳು

|
Google Oneindia Kannada News

ಮಡಿಕೇರಿ, ಜುಲೈ 12 : ಕೊಡಗು ಜಿಲ್ಲೆಯಲ್ಲಿ ಕೋವಿಡ್ - 19 ಪ್ರಕರಣಗಳು ಹೆಚ್ಚುತ್ತಿವೆ. ಭಾನುವಾರ ಮಧ್ಯಾಹ್ನದ ತನಕ 13 ಹೊಸ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 169ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ಜನರಿಗೆ ಹಲವು ಸೂಚನೆಗಳನ್ನು ನೀಡಿದೆ. ಜಿಲ್ಲೆಗೆ ಆಗಮಿಸುವ ಜನರಿಗೆ ಕ್ವಾರಂಟೈನ್, ಪರೀಕ್ಷೆಗಳನ್ನು ನಡೆಸುವ ಕುರಿತು ಮಾಹಿತಿ ನೀಡಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಹೊಸ ತಾಲೂಕು; ಅಧಿಕೃತ ಆದೇಶ ಕೊಡಗು ಜಿಲ್ಲೆಯಲ್ಲಿ ಹೊಸ ತಾಲೂಕು; ಅಧಿಕೃತ ಆದೇಶ

ಜಿಲ್ಲೆಯಲ್ಲಿನ ಹೊರ ಪ್ರಕರಣ, ದೃಢಪಟ್ಟ ಪ್ರಕರಣಗಳಲ್ಲಿನ ಹಿನ್ನಲೆಯನ್ನು ನೋಡಿದಾಗ ವಿದೇಶ/ ಹೊರ ರಾಜ್ಯ / ಹೊರ ಜಿಲ್ಲೆಗಳಿಂದ ಪ್ರಯಾಣ ಮಾಡಿರುವುದು ಇರುವುದು ಕಂಡುಬಂದಿರುತ್ತದೆ. ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸೂಚನೆಗಳನ್ನು ನೀಡಿದೆ.

ಹೊರಗಿನಿಂದ ಜಿಲ್ಲೆಗೆ ಬರುವವರಿಗೆ ಎಚ್ಚರಿಕೆ ಕೊಟ್ಟಿರುವ ಕೊಡಗು ಡಿಸಿಹೊರಗಿನಿಂದ ಜಿಲ್ಲೆಗೆ ಬರುವವರಿಗೆ ಎಚ್ಚರಿಕೆ ಕೊಟ್ಟಿರುವ ಕೊಡಗು ಡಿಸಿ

ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಾದಲ್ಲಿ ಹಲವು ಮಂದಿ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕ ಹಿತಾಸಕ್ತಿಯಿಂದ ಕೊಡಗು ಜಿಲ್ಲೆಯಲ್ಲಿ ಸಂಪರ್ಕ ತಡೆ ನಿಯಮಗಳನ್ನು ರೂಪಿಸಿ ಜಾರಿಗೆ ತರಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ.

ಕೊಡಗು; ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಿ ಕೊಡಗು; ವಿವಿಧ ಹುದ್ದೆಗಳು ಖಾಲಿ ಇವೆ, ಅರ್ಜಿ ಹಾಕಿ

ಕ್ವಾರಂಟೈನ್ ನಿಯಮಗಳು

ಕ್ವಾರಂಟೈನ್ ನಿಯಮಗಳು

* ವಿದೇಶದಿಂದ ಆಗಮಿಸಿದವರು ಕಡ್ಡಾಯವಾಗಿ 7 ದಿನಗಳ ಕ್ವಾರಂಟೈನ್ ಮತ್ತು ನಂತರದ 7 ದಿನಗಳು ಗೃಹ ಕ್ವಾರಂಮಟೈನ್‌ನಲ್ಲಿ ಇರತಕ್ಕದ್ದು.

* ಹೊರ ರಾಜ್ಯದಿಂದ ಆಗಮಿಸಿದವರು ಕಡ್ಡಾಯವಾಗಿ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರಬೇಕು.

ಹೊರ ಜಿಲ್ಲೆಯಿಂದ ಬಂದರೂ ಕ್ವಾರಂಟೈನ್

ಹೊರ ಜಿಲ್ಲೆಯಿಂದ ಬಂದರೂ ಕ್ವಾರಂಟೈನ್

* ಕರ್ನಾಟಕದ ಹೊರ ಜಿಲ್ಲೆಗಳಿಂದ ಕೊಡಗು ಜಿಲ್ಲೆಗೆ ಆಗಮಿಸಿದವರು ಸಹ ಕಡ್ಡಾಯವಾಗಿ 7 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲಿರಬೇಕು.

* ಈ ರೀತಿಯಾಗಿ ಸಂಪರ್ಕ ತಡೆಯಲ್ಲಿ ಇರುವವರಿಗೆ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಸ್ಥಳೀಯ ಕಾರ್ಯ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವರದಿ ಮಾಡಿಕೊಳ್ಳಬೇಕು.

ನಿಗಾವಹಿಸುವುದು

ನಿಗಾವಹಿಸುವುದು

ಸ್ಥಳೀಯ ಕಾರ್ಯವ್ಯಾಪ್ತಿಯ ಗ್ರಾಮ ಪಂಚಾಯತ್/ ಪಟ್ಟಣ ಪಂಚಾಯತ್/ ನಗರ ಸಭೆ/ ಆರೋಗ್ಯ ಇಲಾಖೆ/ ಪೊಲೀಸ್ ಇಲಾಖೆ ಮತ್ತು ಈಗಾಗಲೇ ಜನಪ್ರತಿನಿಧಿಗಳನ್ನು ಒಳಗೊಂಡಂತೆ ರಚಿತವಾಗಿರುವ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ/ ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಸಮಿತಿಯು ಮೇಲಿನ ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುವುದು ಮತ್ತು ನಿಗಾವಹಿಸಬೇಕು ಎಂದು ಸೂಚಿಸಲಾಗಿದೆ.

ಮುಂದಿನ ತೀರ್ಮಾನ ಕೈಗೊಳ್ಳಬೇಕು

ಮುಂದಿನ ತೀರ್ಮಾನ ಕೈಗೊಳ್ಳಬೇಕು

ತುರ್ತು/ ಅನಿವಾರ್ಯ/ ವೈದ್ಯಕೀಯ ಹಿನ್ನಲೆಯಲ್ಲಿ ಯಾರಾದರೂ ಜಿಲ್ಲೆಗೆ ಆಗಮಿಸಿದಲ್ಲಿ ಈ ಬಗ್ಗೆ ಜನಪ್ರತಿನಿಧಿಗಳನ್ನು ಒಳಗೊಂಡ ಗ್ರಾಮ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ/ ನಗರ ಸ್ಥಳೀಯ ಸಂಸ್ಥೆಯ ವಾರ್ಡ್ ಸಮಿತಿಯು ಪರಿಶೀಲಿಸಿ ಮುಂದಿನ ತೀರ್ಮಾನವನ್ನು ಕೈಗೊಳ್ಳಬೇಕು.

ಜಿಲ್ಲೆಯ ವಿವರ
* ಸೋಂಕಿತ ಪ್ರಕರಣಗಳು : 169
* ಆಸ್ಪತ್ರೆಯಿಂದ ಬಿಡುಗಡೆಗೊಂಡ ಪ್ರಕರಣಗಳು : 62
* ಸಕ್ರಿಯ ಪ್ರಕರಣಗಳು : 105
* ಮೃತ ಪಟ್ಟ ಪ್ರಕರಣಗಳು : 02
* ಕಂಡೈನ್ಮೆಂಟ್ ಝೋನ್ : 68

English summary
169 Coronavirus cases found in Kodagu district. Here are the directions from the district administration to the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X