ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೇಡಿಯೋ ಕಾಲರ್ ಅಳವಡಿಕೆಯಿಂದ ಕಡಿಮೆಯಾದ ಕಾಡಾನೆ ಹಾವಳಿ

By Coovercolly Indresh
|
Google Oneindia Kannada News

ಮಡಿಕೇರಿ, ಜುಲೈ 19: ಕಾಡಿನ ಅಂಚಿನಲ್ಲಿರುವ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಸಾಮಾನ್ಯವೇ ಆಗಿ ಬಿಟ್ಟಿದೆ. ಈ ಆನೆಗಳು ರಾತ್ರಿಯ ಸಮಯದಲ್ಲಿ ಕೃಷಿ ಭೂಮಿಗೆ ದಾಳಿ ನಡೆಸಿ ಒಂದೇ ರಾತ್ರಿಯಲ್ಲಿ ಲಕ್ಷಾಂತರ ರೂಪಾಯಿ ಬೆಳೆಯನ್ನು ನಾಶ ಮಾಡುತ್ತವೆ.

ಅರಣ್ಯ ಇಲಾಖೆಯು ಕಾಡುಗಳ ಅಂಚಿನಲ್ಲಿ ಆನೆ ನಿರೋಧಕ ಕಂದಕವನ್ನು ತೆಗೆದಿದ್ದರೂ ಕೂಡ ಆನೆಗಳು ಅದನ್ನು ದಾಟಿ ಗ್ರಾಮಗಳಿಗೆ ನುಗ್ಗುತ್ತಿವೆ. ಗ್ರಾಮಸ್ಥರ ಒತ್ತಡದಿಂದ ಇಲಾಖೆ ಅನೇಕ ಬಾರಿ ಕಾಡಾನೆಗಳನ್ನು ಸ್ಥಳಾಂತರಿಸಿತು, ಆದರೆ ಸ್ಥಳಾಂತರ ಶಾಶ್ವತ ಪರಿಹಾರವಲ್ಲ. ದಿನದಿಂದ ದಿನಕ್ಕೆ ಅರಣ್ಯ ಕುಗ್ಗುತ್ತಿರುವುದರಿಂದ ಆನೆಗಳ ಜನಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಕಾಡುಗಳಲ್ಲಿ ಮೇವಿನ ಕೊರತೆ ಉಂಟಾಗಿದೆ. ಇದರಿಂದಾಗಿಯೇ ಮಾನವ ಆನೆ ಸಂಘರ್ಷ ಹೆಚ್ಚಾಗುತ್ತಿದೆ.

ಮಡಿಕೇರಿ ವಿಶೇಷ; ಕಾಡಾನೆ ಮರಿ ತಾಯಿಯಿಂದ ದೂರ; ಶಿಬಿರದಲ್ಲಿ ಚಿನ್ನಾಟ! ಮಡಿಕೇರಿ ವಿಶೇಷ; ಕಾಡಾನೆ ಮರಿ ತಾಯಿಯಿಂದ ದೂರ; ಶಿಬಿರದಲ್ಲಿ ಚಿನ್ನಾಟ!

ಕೊಡಗು ಹಾಗೂ ಹಾಸನ ಜಿಲ್ಲೆಗಳ ಕಾಫಿ ತೋಟಗಳಿಗೆ ಕಾಡಾನೆಗಳು ನುಗ್ಗಿ ಬೆಳೆ ನಾಶಪಡಿಸುತ್ತಿದ್ದವಲ್ಲದೆ, ಕಾಡಂಚಿನ ಗ್ರಾಮಗಳ ಮೇಲೂ ದಾಳಿ ನಡೆಸುತ್ತಿದ್ದವು. ಕೃಷಿ ಭೂಮಿಗಳ ಮೇಲೆ ದಾಳಿ ಮಾಡಿ, ಬೆಳೆದ ಬೆಳೆಗಳಿಗಳನ್ನು ನಾಶಪಡಿಸುತ್ತದ್ದವು.

 ಕಾಡಾನೆಗಳ ಚಲನವಲನ ತಿಳಿಯಲು ರೇಡಿಯೋ ಕಾಲರ್

ಕಾಡಾನೆಗಳ ಚಲನವಲನ ತಿಳಿಯಲು ರೇಡಿಯೋ ಕಾಲರ್

ಅರಣ್ಯ ಇಲಾಖೆಯು ಕಾಡಾನೆಗಳ ಚಲನವಲನಗಳನ್ನು ತಿಳಿಯಲು ರೇಡಿಯೋ ಕಾಲರ್‌ಗಳನ್ನು ಅಳವಡಿಸುತ್ತಿದೆ. ಕೊಡಗು ಮತ್ತು ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯನ್ನು ಕಡಿಮೆ ಮಾಡುವಲ್ಲಿ ಈ ವಿಧಾನವು ಯಶಸ್ವಿಯಾಗಿದೆ. ಅರಣ್ಯ ಇಲಾಖೆಯು ಡೆಹ್ರಾಡೂನ್ ವನ್ಯಜೀವಿ ಸಂಸ್ಥೆ (ಡಬ್ಲ್ಯುಐಐ) ಮತ್ತು ಜರ್ಮನಿಯ ಡಾಯ್ಚ ಗೆಸೆಲ್ಸ್ಚಾಫ್ಟ್ ಫಾರ್ ಇಂಟರ್ನ್ಯಾಷನಲ್ ಜುಸಮೆನಾರ್ಬೈಟ್ (ಜಿಐಜೆಡ್ ) ಜರ್ಮನಿಯ ಸಹಯೋಗದೊಂದಿಗೆ ರೇಡಿಯೋ ಕಾಲರ್ ಅಳವಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತು.

 ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿ

ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿ

2018 ರಲ್ಲಿ GIZ ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿಯೊಂದಿಗೆ ಉತ್ತರಾಖಂಡ್, ಕರ್ನಾಟಕ ಮತ್ತು ಪಶ್ಚಿಮ ಬಂಗಾಳದೊಂದಿಗೆ ರೇಡಿಯೋ ಕಾಲರ್ ಅಳವಡಿಸುವ ಯೋಜನೆಯನ್ನು ಜಾರಿಗೆ ತಂದಿತು. ಅದರ ಅಡಿಯಲ್ಲಿ ಇದು ಪ್ರಾಣಿಗಳನ್ನು ‘ಸಂಘರ್ಷ' ಪ್ರಭೇದಗಳೆಂದು ಗುರುತಿಸಿತು ಮತ್ತು ಮಾನವ ಮತ್ತು ವಿಭಿನ್ನ ಪ್ರಾಣಿಗಳ ನಡುವಿನ ಸಂಘರ್ಷವನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ತರಲು ನಿರ್ಧರಿಸಿತು.

 13 ಆನೆಗಳಿಗೆ ರೇಡಿಯೋ ಕಾಲರ್

13 ಆನೆಗಳಿಗೆ ರೇಡಿಯೋ ಕಾಲರ್

ಈ ವರದಿಗಾರನೊಂದಿಗೆ ಮಾತನಾಡಿದ ಡಬ್ಲ್ಯುಐಐ ತಜ್ಞ ಡಾ. ಸನತ್ ಮುಳಿಯ, "ಈವರೆಗೆ ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ 13 ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ. ಈ ರೇಡಿಯೋ ಕಾಲರ್‌ಗಳ ಅವಧಿ ಮೂರು ವರ್ಷವಾಗಿದ್ದು, ನಂತರ ಬದಲಿಸಬೇಕಾಗುತ್ತದೆ. ಇವು 24x7 ಆನೆಗಳಿರುವ ಸ್ಥಳದ ಮಾಹಿತಿಯನ್ನು ಒದಗಿಸುತ್ತದೆ,'' ಎಂದು ಅವರು ಹೇಳಿದರು.
"ಆದ್ದರಿಂದ ಇಲಾಖೆ ಮತ್ತು ಗ್ರಾಮಸ್ಥರು ಒಟ್ಟಾಗಿ ಈ ಆನೆಗಳನ್ನು ಓಡಿಸಬಹುದು ಮತ್ತು ಗ್ರಾಮಸ್ಥರು ಸಹ ಪೂರ್ವಭಾವಿ ಮಾಹಿತಿ ಪಡೆಯಬಹುದು. ರಾಜ್ಯದ ಇತರ ಭಾಗಗಳಲ್ಲಿ ಸಹ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುವುದು,'' ಎಂದು ಸನತ್ ಮುಳಿಯ ಹೇಳಿದರು.

Recommended Video

Prithvi Shaw ಆಟ ಹೀಗೆ ಇದ್ದರೆ ಸಾಕು ಎಂದ ಮಾಜಿ ಕ್ರಿಕೆಟಿಗ | Oneindia Kannada
 ಪಟಾಕಿ ಸಿಡಿಸಿ ಕಾಡಾನೆಗಳು ಅರಣ್ಯಕ್ಕೆ ಅಟ್ಟುತ್ತಿದ್ದಾರೆ

ಪಟಾಕಿ ಸಿಡಿಸಿ ಕಾಡಾನೆಗಳು ಅರಣ್ಯಕ್ಕೆ ಅಟ್ಟುತ್ತಿದ್ದಾರೆ

ಈ ಕುರಿತು ಮಾತನಾಡಿದ ನಾಗರಹೊಳೆ ವನ್ಯಜೀವಿ ಅಭಯಾರಣ್ಯದ ಗಡಿಯಲ್ಲಿರುವ ಶ್ರೀಮಂಗಲದ ರೈತ ಬೆಳ್ಳಿಯಪ್ಪ, "ರೇಡಿಯೊ ಕಾಲರ್ ಅಳವಡಿಕೆಯಿಂದಾಗಿ ಆನೆಗಳು ಇರುವ ಸ್ಥಳ ಮುಂಚಿತವಾಗಿಯೇ ತಿಳಿಯುತ್ತಿದೆ. ಇದನ್ನು ಅರಣ್ಯ ಇಲಾಖೆ ವಾಟ್ಸಪ್ ಮೂಲಕ ನಮಗೆ ತಿಳಿಸುತ್ತಿದ್ದು, ಅರಣ್ಯ ಇಲಾಖೆಯು ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಗಳು ಕೂಡ ಸಂಜೆ 8 ರಿಂದ 9 ಗಂಟೆಗೆ ಬಂದು ಪಟಾಕಿ ಸಿಡಿಸಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುತ್ತಿದ್ದಾರೆ. ನಾವು ವರ್ಷ ಪೂರ್ತಿ ಬೆಳೆದ ಬೆಳೆ ಉಳಿಸಲು ಈ ನೂತನ ವಿಧಾನ ಹೆಚ್ಚು ಸಹಾಯಕವಾಗಿದೆ,'' ಎಂದರು.

English summary
The Forest Department is installing radio collars in Kodagu and Hassan district to check the movement of forest Elephants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X