ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ಅಧಿಕಾರಿಗಳ ಮುಂದೆ ಹಾಜರಾದ ರಶ್ಮಿಕಾ ಮಂದಣ್ಣ

|
Google Oneindia Kannada News

ಕೊಡಗು, ಜನವರಿ 16 : ನಟಿ ರಶ್ಮಿಕಾ ಮಂದಣ್ಣ ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೀಲನೆ ಮುಂದುವರೆದಿದೆ. ಚೆನ್ನೈನಿಂದ ರಶ್ಮಿಕಾ ಮಂದಣ್ಣ ವಿರಾಜಪೇಟೆಗೆ ಆಗಮಿಸಿದ್ದು, ಅಧಿಕಾರಿಗಳ ಮುಂದೆ ಹಾಜರಾದರು.

ಗುರುವಾರ ರಾತ್ರಿ ವಿರಾಜಪೇಟೆಯ ನಿವಾಸಕ್ಕೆ ರಶ್ಮಿಕಾ ಮಂದಣ್ಣ ಆಗಮಿಸಿದರು. ಆದಾಯ ತೆರಿಗೆ ಇಲಾಖೆಯ 10 ಅಧಿಕಾರಿಗಳ ತಂಡ ಅವರ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಗ್ರಹಿಸಿದ ದಾಖಲೆಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ಐಟಿ ದಾಳಿ; ರಶ್ಮಿಕಾ ಮಂದಣ್ಣ ಕುಟುಂಬದ ಒಟ್ಟು ಆಸ್ತಿ ವಿವರಐಟಿ ದಾಳಿ; ರಶ್ಮಿಕಾ ಮಂದಣ್ಣ ಕುಟುಂಬದ ಒಟ್ಟು ಆಸ್ತಿ ವಿವರ

ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ಐಟಿ ದಾಳಿ ನಡೆದಿತ್ತು. ತಡರಾತ್ರಿಯಾದರೂ ಪರಿಶೀಲನೆ ಕಾರ್ಯ ಮುಂದುವರೆದಿದ್ದು, ರಾತ್ರಿ ಊಟವನ್ನು ಮನೆಗೆ ತರಿಸಿಕೊಂಡು ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ಅಸಲಿ ರಹಸ್ಯ ಏನು? ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ ಅಸಲಿ ರಹಸ್ಯ ಏನು?

Rashmika Mandanna Appears Before IT Officials

ಚೆನ್ನೈನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ರಶ್ಮಿಕಾ ಮಂದಣ್ಣ ಅವರಿಗೆ ಅಧಿಕಾರಿಗಳ ಮುಂದೆ ಹಾಜರಾಗಲು ಸೂಚನೆ ನೀಡಲಾಗಿತ್ತು. ಅವರು ಚೆನ್ನೈನಿಂದ ಹೊರಟು ರಾತ್ರಿ ವಿರಾಜಪೇಟೆಯ ನಿವಾಸಕ್ಕೆ ಆಗಮಿಸಿದರು.

ತಿರುಪತಿ ತಿಮ್ಮಪ್ಪನಿಗೆ 1 ಕೋಟಿ ದಾನ ಕೊಟ್ಟ ಐಟಿ ಕಂಪನಿ ಮಾಲೀಕ ತಿರುಪತಿ ತಿಮ್ಮಪ್ಪನಿಗೆ 1 ಕೋಟಿ ದಾನ ಕೊಟ್ಟ ಐಟಿ ಕಂಪನಿ ಮಾಲೀಕ

ಒಂದು ಬಾರಿ ನಟಿ ರಶ್ಮಿಕಾ ಮಂದಣ್ಣ ತಂದೆಯ ವಿಚಾರಣೆಯನ್ನು ಅಧಿಕಾರಿಗಳು ಮುಗಿಸಿದ್ದಾರೆ. ಅವರು ನೀಡಿರುವ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈಗ ಅಧಿಕಾರಿಗಳು ರಶ್ಮಿಕಾ ವಿಚಾರಣೆ ನಡೆಸುತ್ತಿದ್ದು, ತಡರಾತ್ರಿ ತನಕ ಮುಂದುವರೆಯುವ ಸಾಧ್ಯತೆ ಇದೆ.

English summary
Kannada actress Rashmika Mandanna appeared before income tax officials in Virajpet residence. 10 officials from the income tax department conducted a raid at residence on Thursday morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X