ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಷ್ಟ್ರಪತಿಗಳ ಕೊಡಗು ಭೇಟಿ; ಬಿಗಿ ಬಂದೋಬಸ್ತ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಫೆಬ್ರವರಿ 4; ರಾಷ್ಟ್ರಪತಿ ರಾನಾಥ ಕೋವಿಂದ್ ಫೆಬ್ರವರಿ 6 ರಂದು ಕೊಡಗು ಜಿಲ್ಲೆಗೆ ಬರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮಡಿಕೇರಿ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತದೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ರಾಷ್ಟ್ರಪತಿಗಳು ಆಗಮಿಸುತ್ತಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿಗಳ ಪತ್ನಿ ಹಾಗೂ ಪುತ್ರಿಯೂ ಸಹ ಆಗಮಿಸುವ ನಿರೀಕ್ಷೆ ಇದೆ.

ರಾಷ್ಟ್ರಪತಿ ಸಂಚರಿಸುವ ಮಾರ್ಗದ ಅಂಗಡಿ ಮುಚ್ಚುವುದಕ್ಕೆ ವ್ಯಾಪಕ ವಿರೋಧರಾಷ್ಟ್ರಪತಿ ಸಂಚರಿಸುವ ಮಾರ್ಗದ ಅಂಗಡಿ ಮುಚ್ಚುವುದಕ್ಕೆ ವ್ಯಾಪಕ ವಿರೋಧ

ಮಡಿಕೇರಿ, ಚೇರಂಗಾಲ, ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಉದ್ಧೇಶವಿದೆ. ಚೇರಂಗಾಲ, ಭಾಗಮಂಡಲದಲ್ಲಿ ರಾಷ್ಟ್ರಪತಿಗಳು ಇಳಿಯುವ ಸಾಧ್ಯತೆ ರದ್ಧಾಗುವ ನಿರೀಕ್ಷೆ ಇದ್ದು, ಮಡಿಕೇರಿ ಮತ್ತು ತಲಕಾವೇರಿಯಲ್ಲಿ ಮಾತ್ರ ಹೆಲಿಕಾಪ್ಟರ್ ಇಳಿಯಲಿದೆ ಎಂಬ ಮಾಹಿತಿ ಇದೆ.

ಫೆ.6ರಂದು ಮಡಿಕೇರಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ಫೆ.6ರಂದು ಮಡಿಕೇರಿಗೆ ಭೇಟಿ ನೀಡಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್

Ramnath Kovind Visit High Security

ರಾಷ್ಟ್ರಪತಿಗಳ ವಾಸ್ತವ್ಯಕ್ಕೆ ತಾಜ್ ಹಾಗೂ ಕ್ಲಬ್ ಮಹೀಂದ್ರಾದಲ್ಲೂ ಕೊಠಡಿ ಕಾಯ್ದಿರಿಸಲಾಗಿದೆ. ಎರಡು ಅಥವಾ ಮೂರು ಹೆಲಿಕಾಪ್ಟರ್‌ಗಳಲ್ಲಿ ರಾಷ್ಟ್ರಪತಿಗಳ ಕುಟುಂಬವರ್ಗ, ರಾಷ್ಟ್ರಪತಿ ಭವನದ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು, ಸೇನಾ ಮುಖ್ಯಸ್ಥರು ಆಗಮಿಸಲಿದ್ದಾರೆ.

ಕೊಡಗು ಜಿಲ್ಲಾಧಿಕಾರಿಯಾಗಿ ಚಾರುಲತ ಸೋಮಲ್ ಅಧಿಕಾರ ಸ್ವೀಕಾರಕೊಡಗು ಜಿಲ್ಲಾಧಿಕಾರಿಯಾಗಿ ಚಾರುಲತ ಸೋಮಲ್ ಅಧಿಕಾರ ಸ್ವೀಕಾರ

50 ಕಾರುಗಳ ವ್ಯವಸ್ಥೆ; ರಾಷ್ಟ್ರಪತಿಗಳು ತಲಕಾವೇರಿಯಲ್ಲಿ ಮೆಟ್ಟಿಲು ಏರಲು ಕಷ್ಟಸಾಧ್ಯವಾಗುವ ಹಿನ್ನಲೆಯಲ್ಲಿ ತಾಜ್ ಅಥವಾ ಕ್ಲಬ್ ಮಹೀಂದ್ರಾದಿಂದ ಬ್ಯಾಟರಿ ಚಾಲಿತ ವಾಹನದಲ್ಲಿ ಕಾವೇರಿ ತೀರ್ಥ ಕುಂಡಿಕೆ ಬಳಿ ತೆರಳಲು ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ.

ರಾಷ್ಟ್ರಪತಿ ಭವನ ಮತ್ತು ದೆಹಲಿಯಿಂದ ಅಧಿಕಾರಿ ವರ್ಗ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಇದಕ್ಕಾಗಿ ಅಂದಾಜು 50 ಕಾರುಗಳ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ದೂರದರ್ಶನ ಮತ್ತು ವಾರ್ತಾಧಿಕಾರಿ ಚಿನ್ನಸ್ವಾಮಿಗೆ‌ ಮಾತ್ರಾ ವರದಿ ಮಾಡಲು ಅವಕಾಶವಿದೆ.

ರಾಷ್ಟ್ರಪತಿ ಭವನದಿಂದಲೇ ಕಟ್ಟುನಿಟ್ಟಿನ ಆದೇಶ ಬಂದಿದ್ದೂ ಕೊಡಗು ಜಿಲ್ಲಾಧಿಕಾರಿಗಳೂ ಒಳಗೊಂಡಂತೆ ಎಲ್ಲರೂ‌ ಆದೇಶವನ್ನು ಪಾಲನೆ‌ ಮಾಡಬೇಕಾಗಿದೆ. ಕೊಡಗು ಹಾಗೂ ಕೇರಳಗಡಿಯಲ್ಲಿ ನಕ್ಸಲ್ ಚಟುವಟಿಕೆ, ಇತ್ತೀಚೆಗೆ ತೀವ್ರಗೊಂಡಿರುವ ರೈತ ಚಳುವಳಿಯಿಂದಾಗಿ ಇಂತಹ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ.

ಮಡಿಕೇರಿ ನಗರ ಸಭೆ, ವೀರಾಜಪೇಟೆ ಪಟ್ಟಣ ಪಂಚಾಯಿತಿ, ಕುಶಾಲನಗರ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಹಾಗೂ ಜಿಲ್ಲೆಯ ಎಲ್ಲಾ ಪ್ರಮುಖ ಅಧಿಕಾರಿಗಳನ್ನು‌ ಮಡಿಕೇರಿಯಿಂದ ತಲಕಾವೇರಿವರೆಗಿನ ಪೂರ್ವಭಾವಿ ಸಿದ್ಧತೆಗಾಗಿ ನಿಯೋಜಿಸಲಾಗಿದೆ.

ತಲಕಾವೇರಿಯಲ್ಲಿ ರಾಷ್ಟ್ರಪತಿಗಳ ಪತ್ನಿ, ಪುತ್ರಿ ಹಾಗೂ ದೆಹಲಿಯ ಅಧಿಕಾರಿಗಳು, ಭದ್ರತಾ ತಂಡ ತೀರ್ಥೋದ್ಭವ ಕುಂಡಿಕೆವರೆಗೆ ಕಾಲುನಡಿಗೆಯಲ್ಲಿಯೇ ತೆರಳಲಿದ್ದಾರೆ. ಕೊಡಗಿನಲ್ಲಿ ಹಿಂದೆಂದೂ ಕಾಣದ ಭದ್ರತಾ ವ್ಯವಸ್ಥೆ ಮಾಡಲಾಗಿದೆ.

Recommended Video

ಏರೋ ಇಂಡಿಯಾ 2021 ಕಾರ್ಯಕ್ರಮಕ್ಕೆ ಇಂದು ತೆರೆ | Oneindia Kannada

ರಾಷ್ಟ್ರಪತಿಗಳು ಸಂಚರಿಸುವ ಹಾದಿ ಸಂಪೂರ್ಣ ಬಂದ್ ಆಗಲಿದೆ. ಕೊಡಗು ಜಿಲ್ಲೆಯ ಇತಿಹಾಸದಲ್ಲಿಯೇ ಇಂತಹಾ ಬಿಗಿ ಬಂದೋಬಸ್ತ್ ಹಿಂದೆಂದೂ ಆಗಿರಲಿಲ್ಲ. ರಾಷ್ಟ್ರಪತಿಗಳು ಬಂದು ಹೋಗುವವರೆಗೂ ಈಗಿರುವ ವ್ಯವಸ್ಥೆಯಲ್ಲಿ, ಮಾರ್ಗದಲ್ಲಿ ಅಲ್ಲಲ್ಲಿ ಬದಲಾವಣೆಗಳು ಆಗುತ್ತಲೇ ಇರುತ್ತವೆ.

English summary
High security in Kodagu for president Ramnath Kovind visit. Ramnath Kovind will Madikeri on February 6, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X