ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರೀಕ್ಷೆ ಮುಗಿಯುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಕ್ವಾರಂಟೈನ್

|
Google Oneindia Kannada News

ಮಡಿಕೇರಿ, ಮೇ 26 : ಕರ್ನಾಟಕದಲ್ಲಿ ಎಸ್‌. ಎಸ್. ಎಲ್. ಸಿ ಮತ್ತು ಒಂದು ಭಾಷೆಯ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ದಿನಾಂಕ ನಿಗದಿಯಾಗಿದೆ. ಪಕ್ಕದ ರಾಜ್ಯ ಕೇರಳದಲ್ಲಿ ಮಂಗಳವಾರದಿಂದ ಪರೀಕ್ಷೆಗಳು ಆರಂಭವಾಗಿವೆ.

Recommended Video

ಕೊರೊನ ಬಗ್ಗೆ ಭಯಂಕರ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ..! | Bramanda Guruji | Corona Prediction

ಕೇರಳದ ವಯನಾಡ್ ಜಿಲ್ಲೆಯಲ್ಲಿ ಎಸ್. ಎಸ್. ಎಲ್‌. ಸಿ ಮತ್ತು ಪಿಯುಸಿ ವ್ಯಾಸಂಗ ಮಾಡುತ್ತಿರುವ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ವಯನಾಡ್ ಜಿಲ್ಲಾಡಳಿತದ ಸಹಕಾರದೊಂದಿಗೆ ವ್ಯವಸ್ಥೆ ಮಾಡಲಾಗಿದೆ.

ಎಸ್. ಎಸ್. ಎಲ್‌. ಸಿ ಪರೀಕ್ಷೆ ರದ್ದು ಮಾಡಿ; ಸಚಿವರಿಗೆ ಸಿದ್ದರಾಮಯ್ಯ ಪತ್ರ ಎಸ್. ಎಸ್. ಎಲ್‌. ಸಿ ಪರೀಕ್ಷೆ ರದ್ದು ಮಾಡಿ; ಸಚಿವರಿಗೆ ಸಿದ್ದರಾಮಯ್ಯ ಪತ್ರ

'ಪರೀಕ್ಷೆ ಬರೆಯಲು ಹೋಗುವ ವಿದ್ಯಾರ್ಥಿಗಳಿಗೆ ಸುಗಮ ಸಂಚಾರದ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು, ಕುಟ್ಟ ಇವರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ' ಎಂದು ಕೊಡಗು ಜಿಲ್ಲಾಡಳಿತ ಹೇಳಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

 Quarantine For Students After Over Of All Exams

ವಿದ್ಯಾರ್ಥಿಗಳು ಯಾವುದೇ ತೊಂದತೆ ಇಲ್ಲದಂತೆ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡಲಾಗಿದೆ. ಪರೀಕ್ಷೆಗಳು ಮುಗಿದ ನಂತರ ಸದರಿ ವಿದ್ಯಾರ್ಥಿಗಳನ್ನು 14 ದಿನಗಳವರೆಗೆ ಕಟ್ಟುನಿಟ್ಟಿನ ಸಂಪರ್ಕ ತಡೆಯಲ್ಲಿ ಇರಿಸಲಾಗುತ್ತದೆ ಎಂದು ಕೊಡಗು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

'ಈ ವರ್ಷ ಎಸ್ಎಸ್‌ಎಲ್‌ಸಿ ಪರೀಕ್ಷೆ ಬೇಡ' ಎಂದ ಶಿಕ್ಷಣ ತಜ್ಞರು!'ಈ ವರ್ಷ ಎಸ್ಎಸ್‌ಎಲ್‌ಸಿ ಪರೀಕ್ಷೆ ಬೇಡ' ಎಂದ ಶಿಕ್ಷಣ ತಜ್ಞರು!

ತಮಿಳುನಾಡು ಮತ್ತು ಕರ್ನಾಟಕದಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಗಳು ಬಾಕಿ ಇದೆ. ಕೊರೊನಾ ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ ಕಾರಣ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಜೂನ್ 25ರಿಂದ ಜುಲೈ 4ರ ತನಕ ಕರ್ನಾಟಕದಲ್ಲಿ ಎಸ್. ಎಸ್. ಎಲ್‌. ಸಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

English summary
Kodagu district administration made necessary arrangements for the student to go and write exam in Wayanad, Kerala. After all exam complete students should go for quarantine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X