ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತೀಯ ಸೇನೆ ಯುದ್ಧ ವಿಮಾನದ ಪೈಲಟ್ ಆಗಿ ಕೊಡಗಿನ ಪುಣ್ಯ ಆಯ್ಕೆ

|
Google Oneindia Kannada News

ಮಡಿಕೇರಿ, ಜೂನ್ 30: ಮಡಿಕೇರಿಯ ಪುಣ್ಯ ನಂಜಪ್ಪ ಭಾರತೀಯ ಸೇನೆ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಸದ್ಯ, ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡ ಖುಷಿಯಲ್ಲಿ ಅವರು ಇದ್ದಾರೆ.

ಪುಣ್ಯ ಮಡಿಕೇರಿಯ ನಂಜಪ್ಪ ಹಾಗೂ ಅನು ದಂಪತಿಯ ಒಬ್ಬರೆ ಮಗಳಾಗಿದ್ದಾರೆ. 9ನೇ ತರಗತಿಯಲ್ಲಿ ತಾನು ಪೈಲಟ್ ಆಗಬೇಕು ಎಂದು ಕನಸು ಕಂಡಿದ್ದ ಹುಡುಗಿ, ಈಗ ಅದನ್ನು ಸಾಧಿಸಿದ್ದಾರೆ. ಒಮ್ಮೆ ಮೈಸೂರು ದಸರಾಗೆ ಹೋದ ಸಮಯದಲ್ಲಿ ಅಲ್ಲಿ ಹಾರುವ ಹೆಲಿಕಾಪ್ಟರ್‌ಗಳನ್ನು ನೋಡಿದ ಪುಣ್ಯ ಪೈಲಟ್ ಆಗುವ ಗುರಿ ಇಟ್ಟುಕೊಂಡರು.

ಕೊಡಗಿನ ಈ ಯುವತಿ ಫಿಲಿಪ್ಪೀನ್ಸ್ ನಲ್ಲಿ ಪೈಲಟ್ ಆದ ಕಥೆಕೊಡಗಿನ ಈ ಯುವತಿ ಫಿಲಿಪ್ಪೀನ್ಸ್ ನಲ್ಲಿ ಪೈಲಟ್ ಆದ ಕಥೆ

ಪೈಲಟ್‌ ಆಗುವ ಗುರಿಯೊಂದಿಗೆ ಹೈದರಾಬಾದ್‌ನಲ್ಲಿ ಒಂದು ವರ್ಷದ ಸೇನಾ ತರಬೇತಿಯನ್ನು ಪುಣ್ಯ ಮುಗಿಸಿದ್ದಾರೆ. ಆ ನಂತರ 2019 ರಲ್ಲಿ ಟ್ರೈನಿ ಪೈಲಟ್ ಆಗಿ ಭಾರತೀಯ ವಾಯುಪಡೆಗೆ ಆಯ್ಕೆ ಆಗಿದ್ದರು. ಇದೀಗ ಭಾರತೀಯ ಸೇನೆ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಪುಣ್ಯ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ.

Punya Nanjappa First Girl From Kodagu To Soar High In The Sky As A Fighter Pilot

ಇಂಜಿನಿಯರಿಂಗ್ ಓದಿ ಎಲ್ಲರಂತೆ ಒಂದು ಕಂಪನಿ ಸೇರಿದೆ, ಭಾರತೀಯ ಸೇನೆಗೆ ಸೇರಿ ಪುಣ್ಯ ಎಲ್ಲರ ಗಮನ ಸೆಳೆದಿದ್ದಾರೆ. ಕೊಡಗು ಜಿಲ್ಲೆಗೆ ದೊಡ್ಡ ಮಟ್ಟದ ಸೇನೆ ಪರಂಪರೆ ಇದ್ದೂ, ಪುಣ್ಯ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ.

English summary
Punya Nanjappa first girl from the kodagu to soar high in the sky as a fighter pilot. he has been selected as a pilot in Indian air fighter plane.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X