ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ:ಸಂತ್ರಸ್ತರಿಗಾಗಿ ಎರಡೆಕರೆ ಜಮೀನು ದಾನ ಮಾಡಿದ ಪೂಣಚ್ಚ ಮಾತು ಕೇಳಿ!

|
Google Oneindia Kannada News

Recommended Video

Kodagu Floods | ಕೊಡಗು ಪ್ರವಾಹ ಸಂತ್ರಸ್ತರಿಗೆ 2 ಎಕರೆ ಜಮೀನು ದಾನ ಮಾಡಿದ ದಂಪತಿ | Oneindia Kannada

ಮಡಿಕೇರಿ, ಆಗಸ್ಟ್ 29: 'ನಮಗೆ ಮಕ್ಕಳಿಲ್ಲ. ಇರುವ ಮೂರು ಎಕರೆ ಜಮೀನಿನಲ್ಲಿ ನಮ್ಮ ಬದುಕಿಗೆ ಒಂದು ಎಕರೆ ಸಾಕು. ಅದಕ್ಕೆಂದೇ ಉಳಿದ ಎರಡು ಎಕರೆ ಜಮೀನನ್ನು ಕೊಡಗು ಪ್ರವಾಹ ಸಂತ್ರಸ್ತರಿಗೆ ಹೃದಯಪೂರ್ವಕವಾಗಿ ನೀಡಲು ಇಷ್ಟಪಡುತ್ತೇನೆ...' ಇದು ಪೂಣಚ್ಚ ಎಂಬುವವರ ಮಾತು! ಅವರ ಈ ಆದರಷದ ನುಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಕೊಡಗು ಪ್ರವಾಹದ ನಂತರ ನಡೆದ ಎಷ್ಟೋ ಮಾನವೀಯ ಘಟನೆಗಳ, ಮನಮಿಡಿವ ಕತೆಗಳ ಪಟ್ಟಿಗೆ ಇದು ಹೊಸ ಸೇರ್ಪಡೆ!

ಕಳೆದ ಕೆಲದಿನಗಳ ಕಾಲ ಕೊಡಗಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹಕ್ಕೆ ಸಾವರಾರು ಜನ ಮನೆ ಕಳೆದುಕೊಂಡಿದ್ದಾರೆ. ಈ ಎಲ್ಲಾ ನಿರಾಶ್ರಿತರಿಗೆ ರಾಜ್ಯದ ಹಲವು ಭಾಗಗಳಿಂದ ನೆರವು ಹರಿದುಬರುತ್ತಿದೆ. ಆದರೆ ಇದ್ದ ಮೂರು ಎಕರೆ ಜಮೀನಿನಲ್ಲಿ ಕೇವಲ ಒಂದು ಎಕರೆಯಷ್ಟನ್ನೇ ತಮ್ಮ ಬದುಕಿಗಾಗಿ ಉಳಿಸಿಕೊಂದು, ಎರಡು ಎಕರೆಯನ್ನು ದಾನ ನೀಡುತ್ತಿರುವ ಪೂಣಚ್ಚ ಅವರ ನಡೆ ಆದರ್ಶ ಎನ್ನಿಸಿದೆ. ಜಮೀನು ದಾನ ಮಾಡುವ ಅವರ ನಡೆಗೆ ಅವರ ಪತ್ನಿಯದೂ ಸಂಪೂರ್ಣ ಬೆಂಬಲ, ಪ್ರೋತ್ಸಾಹವಿದೆ.

Poonacha a Kodagu man donates his 2 acre land for flood relief

ಅಷ್ಟೇ ಅಲ್ಲ, 'ತಂದೆ-ತಾಯಿಯನ್ನು ಕಳೆದುಕೊಂಡ ಯಾವುದಾದರೂ ಮಗು ಇದ್ದರೆ ದಯವಿಟ್ಟು ನಮಗೆ ನೀಡಿ. ನಾವು ಆ ಮಗುವನ್ನು ಪ್ರೀತಿಯಿಂದ ಸಾಕಿ, ಪ್ರಜ್ಞಾವಂತ ಪ್ರಜೆಯನ್ನಾಗಿ ರೂಪಿಸುತ್ತೇವೆ' ಎನ್ನುತ್ತಾರೆ ಪೂಣಚ್ಚ.

ಮಳೆಯಿಂದ ಹಾನಿ: ತುರ್ತು ಪರಿಹಾರಕ್ಕೆ 200 ಕೋಟಿ ಬಿಡುಗಡೆ ಮಳೆಯಿಂದ ಹಾನಿ: ತುರ್ತು ಪರಿಹಾರಕ್ಕೆ 200 ಕೋಟಿ ಬಿಡುಗಡೆ

ಅಂಗೈ ಅಗಲ ಜಾಗಕ್ಕೇ ಸಾವಿರಾರು ರೂಪಾಯಿ ತೆರಬೇಕಾದ ಈ ಕಾಲದಲ್ಲಿ ಎಕರೆಗಟ್ಟಲೆ ಜಾಗವನ್ನು ದಾನವಾಗಿ ನೀಡುವುದು ಎಂದರೆ ಕಡಿಮೆಯೇ? ಈ ವಿಷಯದಲ್ಲಿ ಪೂಣಚ್ಚ ನಿಜಕ್ಕೂ ಗ್ರೇಟ್!

English summary
Karnataka Flood relief: Poonacha of Kodagu owns three acres of land out of which he is donating two acres to flood-affected families.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X