ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಹಿನ್ನೆಲೆ ಮಂಜಿನ ನಗರಿಯ ನಾಲ್ಕು ಶಕ್ತಿ ದೇವತೆಗಳಿಗೆ ಪೂಜೆ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಕೊಡಗು, ಅಕ್ಟೋಬರ್ 16: ಅದ್ಧೂರಿಯಾದ ಆಚರಣೆಯಿಂದ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಪಡೆದುಕೊಳ್ಳುತ್ತಿದ್ದ ಮಡಿಕೇರಿ ದಸರಾ ಹಬ್ಬವನ್ನು ಈ ಬಾರಿ ಕೊರೊನಾ ಕಾರಣದಿಂದಾಗಿ ಸರಳವಾಗಿ ಆಚರಿಸಲಾಗುತ್ತಿದೆ.

ಅಷ್ಟೇ ಅಲ್ಲ, ಅಕ್ಟೋಬರ್ 17 ಮತ್ತು 26ರಂದು ಜಿಲ್ಲೆಯ ಎಲ್ಲಾ ಪ್ರವಾಸಿ ಕೇಂದ್ರಗಳನ್ನೂ ಮುಚ್ಚಲು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ವಿಜೃಂಭಣೆಯಿಂದ ಸಾಗುವ ಮಡಿಕೇರಿ ದಸರಾ ನೋಡಲೆಂದೇ ಹೊರ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು. ದಸರಾ ಆರಂಭದ ಮುನ್ನವೇ ಜಿಲ್ಲೆಯಲ್ಲಿ ಪ್ರವಾಸಿಗರು ಕಾಣಿಸಿಕೊಳ್ಳುತ್ತಿದ್ದರು.

ಮಂಜಿನ ನಗರಿಯ ದಸರಾ ಕರಗ ಉತ್ಸವ ಈ ಬಾರಿ 2 ದಿನಕ್ಕೆ ಸೀಮಿತಮಂಜಿನ ನಗರಿಯ ದಸರಾ ಕರಗ ಉತ್ಸವ ಈ ಬಾರಿ 2 ದಿನಕ್ಕೆ ಸೀಮಿತ

ಆದರೆ ಮಂಜಿನ ನಗರಿ ಈ ಬಾರಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ಹೋಟೆಲ್‌, ರೆಸಾರ್ಟ್‌, ಹೋಂ ಸ್ಟೇಗಳು ಖಾಲಿ ಹೊಡೆಯುತ್ತಿವೆ.

Madikeri: Pooja Offered To 4 Godess Of Karaga On Behalf Of Dasara

ಮಂಜಿನ ನಗರಿಯ ದಸರಾ ಮಹೋತ್ಸವಕ್ಕೆ ಇಂದು ವಾಡಿಕೆಯಂತೆ ನಗರ ದಸರಾ ಸಮಿತಿಯಿಂದ ಈ ಬಾರಿಯು ದಸರಾ ಉತ್ಸವ ನಿರ್ವಿಘ್ನವಾಗಿ ನೆರವೇರಲೆಂದು ಕೋರಿಕೊಂಡು ಶಾಸಕರಾದ ಸುನೀಲ್ ಸುಬ್ರಮಣಿ ಹಾಗೂ ಕಾರ್ಯಾಧ್ಯಕ್ಷ ರಾಬಿನ್ ದೇವಯ್ಯ ಅವರ ಮುಂದಾಳತ್ವದಲ್ಲಿ ನಗರದ ಕುಂದೂರುಮೂಟ್ಟೆ ಚೌಟಿ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿ, ದಂಡಿನ ಮಾರಿಯಮ್ಮ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

Recommended Video

ಮತ್ತೊಂದು ಬ್ರಹ್ಮಾಸ್ತ್ರ ರೆಡಿ ಮಾಡ್ತಿದೆ India..! | India Hypersonic Cruise Missile | Oneindia Kannada

ಈ ನಾಲ್ಕು ಶಕ್ತಿ ದೇವತೆಗಳಿಂದ ಕರಗವೂ ಹೊರಡಲು ಅಣಿಯಾಗುತ್ತಿದೆ.

English summary
Pooja offered to 4 godess of karaga on behalf of Dasara celebration in madikeri. This time, dasara is being celebrated in simple way due to coronavirus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X