ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಜಿಲ್ಲೆಗೆ ಕಾಲಿಟ್ಟ ಕೊರೊನಾ: ಕರ್ನಾಟಕದಲ್ಲಿ ಒಟ್ಟು 15 ಕೇಸ್

|
Google Oneindia Kannada News

ಕೊಡಗು, ಮಾರ್ಚ್ 19: ಕರ್ನಾಟಕದಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕೊಡಗಿಗೆ ಕೊರೊನಾ ಕಾಲಿಟ್ಟಿದ್ದು, ಜಿಲ್ಲೆಯ ಮೊದಲ ಪ್ರಕರಣ ಇದಾಗಿದೆ.

ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ. ''ಇಂದು ಕೊಡಗಿನಲ್ಲಿ ಮೊದಲ #COVID19 ಸೋಂಕು ದೃಢಪಟ್ಟಿದ್ದು, ಈ ವ್ಯಕ್ತಿಯು ಸೌದಿ ಅರೇಬಿಯಾ ಪ್ರವಾಸದಿಂದ ಹಿಂದಿರುಗಿದ್ದರು. ಇವರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಿಗಾವಹಿಸಲಾಗಿದೆ. ಇದು ಕರ್ನಾಟಕದ 15ನೇ #COVID19 ಪ್ರಕರಣವಾಗಿದೆ.'' ಎಂದು ಬರೆದುಕೊಂಡಿದ್ದಾರೆ.

11 ವರ್ಷಗಳ ನಂತರ ಬಂದ್ ಆದ ಮಂತ್ರಾಲಯ: ರಾಯರ ದರ್ಶನ ಇಲ್ಲ11 ವರ್ಷಗಳ ನಂತರ ಬಂದ್ ಆದ ಮಂತ್ರಾಲಯ: ರಾಯರ ದರ್ಶನ ಇಲ್ಲ

A Person From Kodagu Test Positive For Novel Coronavirus

ಕೊಡಗಿನ ವ್ಯಕ್ತಿ ಸೌದಿ ಅರೇಬಿಯಾ ಪ್ರವಾಸದಿಂದ ಬಂದಿದ್ದರು. ಈ ವ್ಯಕ್ತಿಗೆ ಈಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಆ ವ್ಯಕ್ತಿಯನ್ನು ಚಿಕಿತ್ಸೆಗೆ ಒಳಪಡಿಲಾಗಿದೆ. ಶ್ರೀರಾಮಲು ಈ ಬಗ್ಗೆ ಖಚಿತಪಡಿಸಿದ್ದಾರೆ.

ನಿನ್ನೆಯ ಪ್ರಾರಂಭದಲ್ಲಿ ಕರ್ನಾಟಕದಲ್ಲಿ 12 ಕೊರೊನಾ ಪ್ರಕರಣಗಳು ಇತ್ತು. ನಿನ್ನೆ ಎರಡು ಕೊರೊನಾ ಪ್ರಕರಣಗಳು ಸೇರಿಕೊಂಡವು. ಅಲ್ಲಿಗೆ 14 ಪ್ರಕರಣಗಳು ಆಗಿತ್ತು. ಇಂದು ಮತ್ತೊಂದು ಕೊರೊನಾ ಪ್ರಕರಣ ಸೇರಿಕೊಂಡಿದೆ.

ಕೊರೊನಾ ಭೀತಿ ಬೇಡ; ನಿರಾತಂಕವಾಗಿ ಐಸ್‌ ಕ್ರೀ ಸವಿಯಿರಿಕೊರೊನಾ ಭೀತಿ ಬೇಡ; ನಿರಾತಂಕವಾಗಿ ಐಸ್‌ ಕ್ರೀ ಸವಿಯಿರಿ

ಕರ್ನಾಟಕದಲ್ಲಿ ಈವರೆಗೆ ಒಟ್ಟು 15 ಜನರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಕಲಬುರ್ಗಿಯ ಒಬ್ಬ ವೃದ್ಧ ಮರಣ ಹೊಂದಿದ್ದಾರೆ. ದೇಶದಲ್ಲಿ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಅತಿ ಹೆಚ್ಚು ಸೋಂಕು ತಗುಲಿದೆ. ಮಹಾರಾಷ್ಟ್ರ 42 ಹಾಗೂ ಕೇರಳ 25 ಜನರಿಗೆ ಸೋಂಕು ಇರುವುದು ದೃಢವಾಗಿದೆ.

English summary
Coronavirus in karnataka: A person from kodagu tested positive for novel coronavirus infection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X