ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತ್ನಿಯನ್ನು ಮನೆಗೆ ಕರೆತರಲು ಐಪಿಎಸ್ ವೇಷ ತೊಟ್ಟ; ಮುಂದೇನಾಯ್ತು?

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ನವೆಂಬರ್ 11: ತಾನು ಐಪಿಎಸ್ ಅಧಿಕಾರಿ ಎಂದು ನಂಬಿಸಿ ಯುವತಿಯೊಬ್ಬಳನ್ನು ಮದುವೆಯಾಗಿ ವಂಚಿಸಿದವ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಅಷ್ಟೇ ಅಲ್ಲ, ಈ ವಂಚನೆ ತಿಳಿದೇ ಮನೆ ಬಿಟ್ಟು ಹೋಗಿದ್ದ ಆ ಯುವತಿಯನ್ನು ಮತ್ತೆ ಕರೆತರಲು ತಾನು ಐಪಿಎಸ್ ಅಧಿಕಾರಿ ಎಂಬಂತೆ ವೇಷ ತೊಟ್ಟು ಹೋಗಿ ಸಿಕ್ಕಿಬಿದ್ದಿದ್ದಾನೆ.

ಕೇರಳದ ಉರಕ್ಕಂನಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮಿಥುನ್ ಎಂಬಾತ 2017ರಲ್ಲಿ ಮಡಿಕೇರಿ ತಾಲೂಕು ನಾಪೋಕ್ಲು ಸಮೀಪದ ನಾಲಡಿ ಗ್ರಾಮದಲ್ಲಿ ಯುವತಿಯೊಬ್ಬಳನ್ನು ಮದುವೆ ಆಗಿದ್ದ. ನಂತರ ಈತನ ಉದ್ಯೋಗದ ಬಗ್ಗೆ ತಿಳಿದ ಯುವತಿ 2018ರಲ್ಲಿ ತ್ರಿಶುರ್ ನ ಮನ್ನೋತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತವರು ಮನೆ ಸೇರಿದ್ದಳು.

ಐವರು ಹೆಂಡಿರ ಖರ್ಚು ನಿಭಾಯಿಸಲು ಐವತ್ತಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ ಐವರು ಹೆಂಡಿರ ಖರ್ಚು ನಿಭಾಯಿಸಲು ಐವತ್ತಕ್ಕೂ ಹೆಚ್ಚು ಮಹಿಳೆಯರಿಗೆ ವಂಚನೆ

ಹೇಗಾದರೂ ಮಾಡಿ ಪತ್ನಿಯನ್ನು ಮನೆಗೆ ಕರೆ ತರುವ ಯೋಜನೆ ರೂಪಿಸಿದ ಈತ ತನ್ನ ಮೂವರು ಗೆಳೆಯರಾದ ಅಬು ತಾಹಿರ್, ವಿನೋದ್‌ ಹಾಗೂ ಮನೋಜ್‌ ಎಂಬುವವರ ಜತೆ ಸೇರಿ ವಾಹನವೊಂದಕ್ಕೆ ಮುಂದೆ ಹಾಗೂ ಹಿಂದೆ ಪೊಲೀಸ್‌ ಸ್ಟಿಕ್ಕರ್ ಅಂಟಿಸಿ, ಮುಂದೆ ಸ್ಟಾರ್‌ ಬೋರ್ಡ್‌ ಹಾಗೂ ಬಾವುಟ ಹಾಕಿಕೊಂಡು ಮೇಲಕ್ಕೆ ಪೈಲಟ್‌ ಲ್ಯಾಂಪ್ ಕೂಡ ಹಾಕಿಕೊಂಡು ಮೂರು ದಿನಗಳ ಹಿಂದೆ ಕೊಡಗಿನ ನಾಲಡಿ ಗ್ರಾಮಕ್ಕೆ ಬಂದಿದ್ದ.

Person Dressed As IPS Officer To Bring Back His Wife Home In Madikeri

ಆದರೆ ಈ ವಾಹನವನ್ನು ಯುವತಿಯ ಸಂಬಂಧಿಕರ ಮನೆ ಸಮೀಪ ನಿಲ್ಲಿಸಿಕೊಂಡಿದ್ದಾಗ ಗ್ರಾಮಸ್ಥರಿಗೆ ಅನುಮಾನ ಬಂದಿದೆ. ಕೂಡಲೇ ನಾಪೋಕ್ಲು ಪೋಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ವಾಹನದಲ್ಲಿ ಐಪಿಎಸ್ ಅಧಿಕಾರಿಯ ಯೂನಿಫಾರ್ಮ್, ಶೂಗಳು, ಬೆಲ್ಟ್‌, ಕ್ಯಾಪ್‌ ಎಲ್ಲ ಸಿಕ್ಕಿವೆ. ಠಾಣೆಗೆ ಕರೆತಂದು ಬಾಯಿ ಬಿಡಿಸಿದಾಗ ಯುವತಿಯ ಕುಟುಂಬಸ್ಥರನ್ನು ತಾನು ಐಪಿಎಸ್ ಅಧಿಕಾರಿ ಎಂದು ನಂಬಿಸಲು ಈ ರೀತಿ ವೇಷ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ. ಈಗ ನಾಲ್ವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

English summary
Person dressed as ips officer to bring back his wife in madikeri. Four people have been arrested in relation to fraud case,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X