ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಮಾರ್ಗಸೂಚಿಯೊಂದಿಗೆ ದುಬಾರೆ ರಿವರ್ ರಾಫ್ಟಿಂಗ್ ನಡೆಸಲು ಅನುಮತಿ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ನವೆಂಬರ್ 27: ದುಬಾರೆಯಲ್ಲಿ ಈ ಬಾರಿಯೂ ರಿವರ್ ರಾಫ್ಟಿಂಗ್ ಕ್ರೀಡೆಯನ್ನು ಮುಂದುವರೆಸಲು ನಿರ್ಧರಿಸಲಾಗಿದೆ.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ರಿವರ್ ರಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ರಿವರ್ ರಾಫ್ಟಿಂಗ್ ನಡೆಸಲು ಅವಕಾಶ ನೀಡಲಾಗಿದೆ.

ಕೊಡಗಿನ ಫೇಮಸ್ ರಿವರ್ ರಾಫ್ಟಿಂಗ್ ಈ ಬಾರಿ ನಡೆಯುತ್ತಾ?ಕೊಡಗಿನ ಫೇಮಸ್ ರಿವರ್ ರಾಫ್ಟಿಂಗ್ ಈ ಬಾರಿ ನಡೆಯುತ್ತಾ?

ಸಭೆಯಲ್ಲಿ ಕೆಲವು ನಿಯಮಗಳನ್ನು ವಿಧಿಸುವ ಮೂಲಕ ರಿವರ್ ರಾಫ್ಟಿಂಗ್ ಮುಂದುವರೆಸಲು ತೀರ್ಮಾನಿಸಲಾಗಿದೆ. ಒಂದು ಬೋಟ್ ನಲ್ಲಿ 6 ಮಂದಿ ಮಾತ್ರ ತೆರಳಬೇಕು ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

 Madikeri: Permission For River Rafting Following Covid Rules

ಕಳೆದ ಬಾರಿಯಂತೆ ಈ ಬಾರಿಯೂ ರಿವರ್ ರಾಫ್ಟಿಂಗ್ ಮುಂದುವರೆಸಲಾಗುವುದು. ಬೋಟ್ ಸುಸ್ಥಿತಿ ಸಂಬಂಧ ಪ್ರಮಾಣ ಪತ್ರ, ಪರವಾನಗಿ ಪತ್ರ ಹಾಗೂ ವಿಮಾ ಪ್ರಮಾಣ ಪತ್ರ ಪಡೆದಿರಬೇಕು ಎಂದು ನಿರ್ದೇಶನ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಈಶ್ವರ ಕುಮಾರ ಖಂಡು, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ರಿವರ್ ರಾಫ್ಟಿಂಗ್ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

 Madikeri: Permission For River Rafting Following Covid Rules

ಜಿ.ಪಂ.ಯೋಜನಾ ನಿರ್ದೇಶಕ ಶ್ರೀಕಂಠ ಮೂರ್ತಿ, ಡಿವೈಎಸ್ ‍ಪಿ ದಿನೇಶ್ ಕುಮಾರ್, ಅಗ್ನಿ ಶಾಮಕ ಇಲಾಖೆ ಅಧಿಕಾರಿ ಪಿ.ಚಂದನ್, ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಅಧಿಕಾರಿ ಚೇತನ್, ನಂಜರಾಯಪಟ್ಟಣ ಗ್ರಾ.ಪಂ. ಪಿಡಿಒ ಕಲ್ಪ, ರಿವರ್ ರಾಫ್ಟಿಂಗ್ ಪ್ರತಿನಿಧಿಗಳು ಇದ್ದರು.

English summary
It is decided to continue river rafting sport this time in Dubare. The River Rafting Management and Supervisory Committee meeting held on Friday regard this
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X