ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಬೈಲ್ ಕರೆನ್ಸಿಗೆ ಬರುತ್ತಿದ್ದ ಮಹಿಳೆಯರಿಗೆ ಅಶ್ಲೀಲ ಮೆಸೇಜ್‌; ಜನರಿಂದ ಥಳಿತ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 17: ಮೊಬೈಲ್‌ ಕರೆನ್ಸಿ ಹಾಕಿಸಲು ಬರುವ ಯುವತಿಯರ ಮತ್ತು ವಿವಾಹಿತ ಮಹಿಳೆಯರ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಗಳನ್ನು ಕಳಿಸುತ್ತಿದ್ದವನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಖಾಸಗಿ ಬಸ್‌ ನಿಲ್ದಾಣದ ಬಳಿ ಮೊಬೈಲ್‌ ಅಂಗಡಿ ಹೊಂದಿರುವ ಮೊಹಮದ್ ಮುದಾಸಿರ್ ಎಂಬಾತ ಮಹಿಳೆಯರಿಗೆ ಹೀಗೆ ಮೊಬೈಲ್ ನಲ್ಲಿ ಮೆಸೇಜ್ ಕಳುಹಿಸಿ ಕಿರುಕುಳ ನೀಡುವುದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿದ್ದ. ಹದಿನೈದು ದಿನಗಳ ಹಿಂದೆ ವಿವಾಹಿತ ಮಹಿಳೆಯೊಬ್ಬರ ಮೊಬೈಲ್‌ ನಂಬರ್‌ ತಿಳಿದುಕೊಂಡಿದ್ದ ಈತ ರಾತ್ರಿ ಹೊತ್ತಿನಲ್ಲಿ ಅಶ್ಲೀಲ ಮೆಸೇಜ್‌ ಕಳಿಸಿ ಮಾನಸಿಕ ಹಿಂಸೆ ನೀಡಿದ್ದ.

ಕಾಲೇಜು ಹುಡುಗಿಯರ ಫೋಟೋಗಳು ಇವರ ಕೈಗೆ ಸಿಕ್ರೆ ಅಷ್ಟೇ ಕಥೆ! ಕಾಲೇಜು ಹುಡುಗಿಯರ ಫೋಟೋಗಳು ಇವರ ಕೈಗೆ ಸಿಕ್ರೆ ಅಷ್ಟೇ ಕಥೆ!

ಮಹಿಳೆಯು ಮಡಿಕೇರಿ ನಗರ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ಕಾರ್ಯಕರ್ತರ ಸೂಚನೆಯಂತೆ ಮಹಿಳೆಯ ಮೊಬೈಲ್‌ ನಿಂದ ಬುಧವಾರ ಬೆಳಿಗ್ಗೆ ಹಳೆ ಆರ್‌ ಟಿಒ ಕಚೇರಿಯ ಬಳಿ ಬರುವಂತೆ ಮೆಸೇಜ್‌ ಕಳಿಸಲಾಯಿತು. ಖುಷಿಯಿಂದ ಬಂದ ಕಾಮುಕನಿಗೆ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದರು. ಈತನ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

Madikeri: People Beaten Man For Sending Obscene Messages To Women

Recommended Video

BSY ಪುತ್ರನಿಗೆ ರಾಜ್ಯ ರಾಜಕೀಯದಲ್ಲಿ ಏನು ಕೆಲಸ | Vijayendra | Oneindia Kannada

ಈತನು ಫೇಸ್‌ ಬುಕ್‌ ನಿಂದಲೂ ಮಹಿಳೆಯರಿಗೆ ಅಸಭ್ಯ ಮೆಸೇಜ್‌ ಕಳಿಸುತಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

English summary
People beaten man for sending obscene messages to women in madikeri,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X