ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಕೇರ್ ಸೆಂಟರ್ ಬೇಡ; ಆದಿವಾಸಿಗಳಿಂದ ರಸ್ತೆ ಬಂದ್

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಏಪ್ರಿಲ್ 28; ಕೊಡಗಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಕುಶಾಲನಗರ ಬಳಿಯ ಬಸವನಹಳ್ಳಿಯಲ್ಲಿರುವ ಮೊರಾರ್ಜಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆಯಲು ಜಿಲ್ಲಾಡಳಿತ ಮುಂದಾಗಿದ್ದು ಇದಕ್ಕೆ ಸ್ಥಳೀಯ ಆದಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ರಸ್ತೆಗಳನ್ನು ಬಂದ್ ಮಾಡಿ ಕಾವಲು ಕಾಯುತ್ತಿದ್ದಾರೆ.

ಬಸವನಹಳ್ಳಿಯಲ್ಲಿ ಆದಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಎಲ್ಲರೂ ಕೂಲಿ ಕೆಲಸವನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಕೊರೊನಾ ಪ್ರಕರಣ ಹೆಚ್ಚಾದ ಕಾರಣ ಕೆಲಸವಿಲ್ಲದೆ, ಜೀವನ ನಡೆಸುವ ಪರಿಸ್ಥಿತಿ ಇಲ್ಲಿನವರದ್ದಾಗಿದೆ.

ಕರ್ನಾಟಕ; 39047 ಹೊಸ ಕೋವಿಡ್ ಪ್ರಕರಣ ಪತ್ತೆ ಕರ್ನಾಟಕ; 39047 ಹೊಸ ಕೋವಿಡ್ ಪ್ರಕರಣ ಪತ್ತೆ

ಈ ನಡುವೆ ಸನಿಹದ ಮೊರಾರ್ಜಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆದರೆ ಕೊರೊನಾ ಅನತಿ ದೂರದಲ್ಲಿರುವ ನಮಗೂ ಹರಡಬಹುದು ಎಂಬ ಭಯ ಆದಿವಾಸಿಗಳದ್ದಾಗಿದೆ. ಹೀಗಾಗಿ ಅವರು ಜಿಲ್ಲಾಡಳಿತದ ತೀರ್ಮಾನವನ್ನು ಕೈ ಬಿಡುವಂತೆ ಆಗ್ರಹಿದ್ದಾರೆ.

ಕೊಡಗು: ಬಾಗಿಲು ಮುಚ್ಚಿ ಪ್ರವಚನ ನೀಡುತ್ತಿದ್ದ ಮಸೀದಿ ವಿರುದ್ಧ ಕೇಸ್ ದಾಖಲುಕೊಡಗು: ಬಾಗಿಲು ಮುಚ್ಚಿ ಪ್ರವಚನ ನೀಡುತ್ತಿದ್ದ ಮಸೀದಿ ವಿರುದ್ಧ ಕೇಸ್ ದಾಖಲು

Opposed To Open COVID Care Center Tribals Closed Road

ಈ ಹಿಂದೆ ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದಾಗ ಸರ್ಕಾರ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅನತಿ ದೂರದಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಅವರಿಗೆ ನೆಲೆವೂರಲು ವ್ಯವಸ್ಥೆ ಮಾಡಿಕೊಟ್ಟಿದೆ. ಇಲ್ಲಿ ಈಗ ಸುಮಾರು ಮೂರು ಸಾವಿರಕ್ಕಿಂತಲೂ ಅಧಿಕ ಮಂದಿ ಆದಿವಾಸಿಗಳು ವಾಸಿಸುತ್ತಿದ್ದಾರೆ.

ಗರ್ಭಿಣಿಯರಿಗೆ ಕೋವಿಡ್ ಬಂದರೆ ಭಯ ಬೇಡ, ವೈದ್ಯರು ನೀಡಿರುವ ಸಲಹೆ ಪಾಲಿಸಿಗರ್ಭಿಣಿಯರಿಗೆ ಕೋವಿಡ್ ಬಂದರೆ ಭಯ ಬೇಡ, ವೈದ್ಯರು ನೀಡಿರುವ ಸಲಹೆ ಪಾಲಿಸಿ

ಕಳೆದ ವರ್ಷವೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆದು ಹೊರ ಜಿಲ್ಲೆ ಮತ್ತು ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದವರಿಗೆ ಇಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಬಾರಿ ಕೊರೊನಾ ತೀವ್ರತೆ ಹೆಚ್ಚುತ್ತಿರುವುದರಿಂದ ಆದಿವಾಸಿಗಳಿಗೂ ಭಯ ಆರಂಭವಾಗಿದೆ.

ನಮಗೂ ಮಾರಕ ಕೊರೊನಾ ರೋಗ ಹರಡಬಹುದೆಂಬ ಭೀತಿಯಲ್ಲಿರುವ ಆದಿವಾಸಿಗಳು ಈಗಾಗಲೇ ಕೂಲಿಗೂ ತೆರಳದೆ ಮನೆಯಲ್ಲಿದ್ದು ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ. ಆದ್ದರಿಂದ ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್ ಸೆಂಟರ್ ತೆರೆದರೆ ಪಕ್ಕದಲ್ಲೇ ವಾಸಿಸಬೇಕಾಗಿರುವುದರಿಂದ ನಮಗೆ ಭಯವಾಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

Recommended Video

APMCಗೆ ಭೇಟಿ ನೀಡಿ ತರಕಾರಿ ಮಾರಾಟಗಾರರ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ ರವಿ | Oneindia Kannada

ಹೀಗಾಗಿಯೇ ಅವರು ಯಾವ ಅಧಿಕಾರಿಗಳು ಮತ್ತು ಸಾರ್ವಜನಿಕರು ಒಳಗೆ ಪ್ರವೇಶ ಮಾಡದಂತೆ ರಸ್ತೆಗಳನ್ನು ಬಂದ್ ಮಾಡಿ ಕಾವಲು ಕಾಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಯಾವ ರೀತಿಯ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

English summary
Tribal people opposed to open COVID care center in Basavanahalli, Kushalnagar and closed the road for the Kodagu district administration officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X