ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಪ್ರವಾಸಿ ಉತ್ಸವ: ಜನಮನ ಸೆಳೆದ ಓಪನ್ ಸ್ಟ್ರೀಟ್ ಫೆಸ್ಟಿವಲ್

|
Google Oneindia Kannada News

ಮಡಿಕೇರಿ, ಜನವರಿ 14: ನಗರದಲ್ಲಿ ನಡೆಯುತ್ತಿರುವ ಕೊಡಗು ಪ್ರವಾಸಿ ಉತ್ಸವ ಜನಮನ ಸೆಳೆಯುತ್ತಿದ್ದು, ಕೊರೆಯುವ ಚಳಿಯಲ್ಲಿಯೂ ಮನಕ್ಕೆ ಮುದ ನೀಡುತ್ತಿದೆ. ಪ್ರವಾಸಿಗರು ಸೇರಿದಂತೆ ಸ್ಥಳೀಯ ಜನತೆ ಸಡಗರ ಸಂಭ್ರಮದಿಂದ ಪಾಲ್ಗೊಂಡು ಯಶಸ್ಸುಗೊಳಿಸುತ್ತಿದ್ದಾರೆ.

ಉತ್ಸವದ ಕೊನೆಯ ದಿನವಾದ ಓಪನ್ ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಜನ ಕುಣಿದು ಕುಪ್ಪಳಿಸಿ ಸಂಭ್ರಮಪಟ್ಟರು. ಜಿಲ್ಲಾಡಳಿತ ಸಹಕಾರದಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರಥಮ ಬಾರಿಗೆ ನಡೆದ ಕೊಡಗು ಪ್ರವಾಸಿ ಉತ್ಸವ ದಸರಾವನ್ನು ಮೆಲುಕು ಹಾಕುವಂತೆ ಮಾಡಿತು.

ಮೂರು ದಿನಗಳ ಕಾಲವೂ ವಿಭಿನ್ನ ಹಾಗೂ ವಿಶಿಷ್ಟ ಕಾರ್ಯಕ್ರಮಗಳು ನಡೆದು ಸುಂದರ ನೆನಪುಗಳನ್ನು ಅಚ್ಚಳಿಯದೆ ಉಳಿಯುವಂತೆ ಮಾಡಿತು. ಮೊದಲ ದಿನ ರಾಜಾಸೀಟಿನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸೋದ್ಯಮ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವುದರೊಂದಿಗೆ ಆರಂಭವಾದ ಕೊಡಗು ಪ್ರವಾಸಿ ಉತ್ಸವ ಹಬ್ಬದ ವಾತಾವರಣ ನಿರ್ಮಾಣ ಮಾಡಿದ್ದಂತು ಸತ್ಯ.

ಮಡಿಕೇರಿಯಲ್ಲಿ ಕಣ್ಮನ ಸೆಳೆಯುತ್ತಿರುವ ಕೊಡಗು ಪ್ರವಾಸಿ ಉತ್ಸವಮಡಿಕೇರಿಯಲ್ಲಿ ಕಣ್ಮನ ಸೆಳೆಯುತ್ತಿರುವ ಕೊಡಗು ಪ್ರವಾಸಿ ಉತ್ಸವ

ಗಾಂಧಿ ಮೈದಾನದಲ್ಲಿ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಮಳಿಗೆ, ಪ್ರಾಚ್ಯವಸ್ತು ಮಾಹಿತಿಯ ವಸ್ತು ಪ್ರದರ್ಶನ ಮಳಿಗೆ ಸೇರಿದಂತೆ ಹಲವು ಮಳಿಗೆಗಳು ಗಮನ ಸೆಳೆದವು. ಗಾಂಧಿ ಮೈದಾನದಲ್ಲಿ ಸುಮಾರು 30ಕ್ಕೂ ಹೆಚ್ಚು ಮಳಿಗೆ ನಿರ್ಮಾಣಗೊಂಡಿದ್ದು ವಿಶೇಷವೇ ಸರಿ. ಹಾಗೆಯೇ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

 ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ಸಾರ್ವಜನಿಕರಿಂದ ಉತ್ತಮ ಸ್ಪಂದನೆ

ಪ್ರಕೃತಿ ವಿಕೋಪಕ್ಕೆ ಸಿಲುಕಿ ನಲುಗಿದ್ದ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಮತ್ತಷ್ಟು ಚೇತರಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಏರ್ಪಡಿಸಲಾಗಿದ್ದ ಕೊಡಗು ಪ್ರವಾಸಿ ಉತ್ಸವ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ಮೂರನೇ ಹಾಗೂ ಕೊನೆ ದಿನವಾದ ಭಾನುವಾರ ನಗರದ ರಾಜಾಸೀಟು ರಸ್ತೆ ಮಾರ್ಗ ಓಪನ್ ಸ್ಟ್ರೀಟ್ ಫೆಸ್ಟಿವಲ್ ಹೊಸತನವನ್ನು ಹುಟ್ಟು ಹಾಕಿತು. ಬೆಳಗ್ಗೆ ಯೋಗ ಶಿಬಿರದಿಂದ ಆರಂಭವಾದ ಚಟುವಟಿಕೆಗಳು ಸಂಜೆಯ ವರೆಗೂ ವಿವಿಧ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

 ಇಂದಿನಿಂದ 3 ದಿನಗಳ ಕಾಲ ಕೊಡಗು ಪ್ರವಾಸಿ ಉತ್ಸವ: ಈ ಬಾರಿಯ ವಿಶೇಷತೆಗಳೇನು ಗೊತ್ತೇ? ಇಂದಿನಿಂದ 3 ದಿನಗಳ ಕಾಲ ಕೊಡಗು ಪ್ರವಾಸಿ ಉತ್ಸವ: ಈ ಬಾರಿಯ ವಿಶೇಷತೆಗಳೇನು ಗೊತ್ತೇ?

 ಕೂರ್ಗ್ ತಂಡದಿಂದ ನೃತ್ಯ ಪ್ರದರ್ಶನ

ಕೂರ್ಗ್ ತಂಡದಿಂದ ನೃತ್ಯ ಪ್ರದರ್ಶನ

ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಮಂದಿ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು, ಸಂದೀಪ್ ಅವರ ನೇತೃತ್ವದಲ್ಲಿ ಜುಂಬ ನೃತ್ಯ, ಹೋಂಸ್ಟೇ ಅಸೋಶಿಯೇಷನ್, ಕಿಂಗ್ಸ್ ಆಫ್, ಕೂರ್ಗ್ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಟ್ರಾಪರ್ ಸ್ಟೋನ್ ತಂಡದಿಂದ ಬ್ಯಾಂಡ್, ವಿಕ್ರಮ್ ಜಾದೂಗಾರ್ ಅವರಿಂದ ಜಾದೂ ಪ್ರದರ್ಶನ, ದಿವಾಕರ ಮತ್ತು ತಂಡದವರಿಂದ ವಾಲಗ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಗಳು ಓಪನ್ ಸ್ಟ್ರೀಟ್ ಫೆಸ್ಟಿವಲ್‌ನಲ್ಲಿ ಆಕರ್ಷಣಿಯವಾಗಿತ್ತು.

 ಪ್ರತಿಯೊಬ್ಬರು ನೋಡಲೇಬೇಕಾದ ಕೊಡಗಿನ ಟಾಪ್‌ 20 ಪ್ರವಾಸಿ ತಾಣಗಳು ಪ್ರತಿಯೊಬ್ಬರು ನೋಡಲೇಬೇಕಾದ ಕೊಡಗಿನ ಟಾಪ್‌ 20 ಪ್ರವಾಸಿ ತಾಣಗಳು

 35ಕ್ಕೂ ಹೆಚ್ಚು ಮಳಿಗೆ ನಿರ್ಮಾಣ

35ಕ್ಕೂ ಹೆಚ್ಚು ಮಳಿಗೆ ನಿರ್ಮಾಣ

ಓಪನ್ ಸ್ಟ್ರೀಟ್ ಫೆಸ್ಟಿವಲ್ ಪ್ರಯುಕ್ತ ನಗರದ ರಾಜಾಸೀಟು ರಸ್ತೆ ಮಾರ್ಗದ ಉದ್ದಕ್ಕೂ 35 ಕ್ಕೂ ಹೆಚ್ಚು ಮಳಿಗೆ ನಿರ್ಮಿಸಲಾಗಿತ್ತು. ಮಕ್ಕಳ ಆಟದ ವಸ್ತುಗಳಿಂದ ಸೀರೆ, ಬಟ್ಟೆ, ಟೀ ಷರ್ಟ್ ಸೇರಿದಂತೆ ಹಲವು ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು.

 ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿ

ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿ

ಹಾಗೆಯೇ ದೋಸೆ, ಇಡ್ಲಿ, ತರಕಾರಿ ಪಲಾವ್, ರೈಸ್ ಬಾತ್, ಪಾನಿಪೂರಿ, ಮಸಾಲೆ ಪೂರಿ, ಐಸ್‌ಕ್ರೀಮ್ ಹೀಗೆ ನಾನಾ ರೀತಿಯ ತಿಂಡಿ ತಿನಿಸುಗಳ ಆಹಾರ ಮಳಿಗೆ ತೆರೆಯಲಾಗಿತ್ತು. ಜೊತೆಗೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ಮಾರ್ಗದಲ್ಲಿ ಇಡಲಾಗಿದ್ದ ನಾಡಿನ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ವಸ್ತು ಪ್ರದರ್ಶನದ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂದಿತು. ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ಅವರು ಓಪನ್ ಸ್ಟ್ರೀಟ್ ಫೆಸ್ಟಿವಲ್‌ಗೆ ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ಒಟ್ಟಾರೆ ಕೊಡಗು ಪ್ರವಾಸಿ ಉತ್ಸವ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವುದಂತು ನಿಜ.

English summary
Kodagu Tourism Festival in Madikeri is attracting people. Especially Open Street Festival also received much response.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X