ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ; ಜಿಲ್ಲಾಸ್ಪತ್ರೆ ಬೆಡ್ ಸಂಖ್ಯೆ 250ಕ್ಕೆ ಏರಿಕೆ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಏಪ್ರಿಲ್ 26; ಸೋಮವಾರದಿಂದ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ 100 ಅಧಿಕ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇದುವರೆಗೆ 150 ಹಾಸಿಗೆಗಳಿದ್ದು ಇನ್ನು ಮುಂದೆ 250 ಹಾಸಿಗೆ ವ್ಯವಸ್ಥೆ ಇರಲಿದೆ.

ಇದರಿಂದಾಗಿ ಕೋವಿಡ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಅನುಕೂಲವಾಗಲಿದೆ. ಈ ಎಲ್ಲಾ ಹಾಸಿಗೆಗಳಿಗೆ ಅಮ್ಲಜನಕ ಸರಬರಾಜಿನ ಪಾಯಿಂಟ್‌ಗಳನ್ನು ರಚಿಸಲಾಗಿದ್ದು, ಸರಬರಾಜು ಕಲ್ಪಿಸಲಾ ಗುತ್ತದೆ ಎಂದು ವೈದ್ಯಕೀಯ ವಿಜ್ಞಾನಗಳ ಶಿಕ್ಷಣ ಸಂಸ್ಥೆಯ ಅಕಾಡಮಿಕ್ ಡೀನ್ ಹಾಗೂ ಆಡಳಿತ ನಿರ್ದೇಶಕ ಡಾ. ಕಳ್ಳಿಚಂಡ ಕಾರ್ಯಪ್ಪ ಹೇಳಿದ್ದಾರೆ.

ಮಡಿಕೇರಿ; ಕೋವಿಡ್‌ ವರದಿ ತಂದು ವಿವಾಹವಾದ ಕೇರಳದ ವರ! ಮಡಿಕೇರಿ; ಕೋವಿಡ್‌ ವರದಿ ತಂದು ವಿವಾಹವಾದ ಕೇರಳದ ವರ!

ಇದುವರೆಗೂ 150 ಹಾಸಿಗೆಗಳ ಈ ಘಟಕದಲ್ಲಿ ದ್ರವ ರೂಪದ ಆಮ್ಲಜನಕ ಅನಿಲ ರೂಪದಲ್ಲಿ ಪರಿವರ್ತಿತವಾಗಿ ಈಗಾಗಲೇ ಅಳವಡಿಸಿರುವ ಪೈಪ್‌ಗಳ ಮೂಲಕ ನೇರವಾಗಿ ರೋಗಿಗಳು ಮಲಗಿರುವ ಹಾಸಿಗೆಗಳ ಸನಿಹ ಕಲ್ಪಿಸಿರುವ ಪಾಯಿಂಟ್‌ಗಳಿಗೆ ಸರಬರಾಜು ಆಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಹೆಚ್ಚಿನ ಅನುಕೂಲವಾಗಿದೆ.

ಪುಟ್ಟ ಜಿಲ್ಲೆ ಕೊಡಗಿನಲ್ಲಿ ದಾಖಲೆ ಬರೆದ ಕೋವಿಡ್‌ ಪ್ರಕರಣಗಳ ಸಂಖ್ಯೆ ಪುಟ್ಟ ಜಿಲ್ಲೆ ಕೊಡಗಿನಲ್ಲಿ ದಾಖಲೆ ಬರೆದ ಕೋವಿಡ್‌ ಪ್ರಕರಣಗಳ ಸಂಖ್ಯೆ

Now 250 Bed Facility Available In Madikeri District Hospital

ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆ ಅಧಿನದಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯವಿದ್ದರೂ ಸಿಬ್ಬಂದಿ ಕೊರತೆ ಮಾತ್ರ ತೀವ್ರವಾಗಿ ಕಾಡುತ್ತಿದೆ. ಡೀನ್ ಕಾರ್ಯಪ್ಪ ಅವರ ಪ್ರಕಾರ ಸುಮಾರು 25 ಮಂದಿ ನರ್ಸ್‌ ಹಾಗೂ 25 ಮಂದಿ ಡಿ ಗ್ರೂಪ್ ಸಿಬ್ಬಂದಿಯ ಅವಶ್ಯಕತೆಯಿದೆ.

ಕೋವಿಡ್; ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಕೋವಿಡ್; ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ

ಈ ಬಗ್ಗೆ ಸರಕಾರಕ್ಕೆ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ಈಗಾಗಲೇ ತರಲಾಗಿದೆ. ಸಿಬ್ಬಂದಿ ಕೊರತೆಯಿಂದಾಗಿ ಇರುವಂತಹ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕೋವಿಡ್ ಸಂಕಟದ ನಡುವೆ ಈ ಸಿಬ್ಬಂದಿ ಶ್ರಮಮೀರಿ ಕೆಲಸ ಮಾಡುತ್ತಿದ್ದಾರೆ.

ಸರಕಾರ ಸಿಬ್ಬಂದಿ ಕೊರತೆ ನೀಗಿಸಿದರೆ ಈ ಆಸ್ಪತ್ರೆ ಸುವ್ಯವಸ್ಥಿವಾಗಿ ನಡೆಯಲು ಸಾಧ್ಯವಿದೆ. ಏಕೆಂದರೆ, ಕೊಡಗಿನಲ್ಲಿ ಕೋವಿಡ್ ನಿರ್ವಹಣೆ ಮಾಡುವಂತ ಬೇರೆ ಆಸ್ಪತ್ರೆಗಳಿಲ್ಲ. ರಾಜ್ಯದ ಇತರ ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಅನುಕೂಲವಿದ್ದು ಕೋವಿಡ್ ಚಿಕಿತ್ಸೆಯನ್ನೂ ಖಾಸಗಿ ಆಸ್ಪತ್ರೆಗಳು ನಡೆಸುತ್ತಿವೆ.

ಆದರೆ, ಕೊಡಗಿನಲ್ಲಿ ಮಾತ್ರ ಖಾಸಗಿ ವಲಯದ ಆಸ್ಪತ್ರೆಗಳಿಲ್ಲ. ಇದರಿಂದಾಗಿ ಜಿಲ್ಲೆಯ ಜನತೆ ಸರಕಾರಿ ಸಾರ್ವಜನಿಕ ಆಸ್ಪತ್ರೆಯನ್ನೇ ಪೂರ್ಣವಾಗಿ ಅವಲಂಬಿಸಬೇಕಾಗಿದೆ.

Recommended Video

ಕೊರೋನ ತಡಿಯೋಕೆ 14 ದಿನಗಳ ಕಾಲ Lock Down! | Oneindia Kannada

English summary
250 bed available in Madikeri district hospital, Kodagu from April 26, 2021. Till hospital has 150 bed. Increase in the number of bed will help COVID patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X