ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು, ಕೇರಳಲ್ಲಿ ಮತ್ತೆ ಮಹಾ ಪ್ರವಾಹದ ಅಲರ್ಟ್

|
Google Oneindia Kannada News

ಕೊಡಗು, ಜುಲೈ 17: ಕಳೆದ ವರ್ಷ ಇದೇ ಸಂದರ್ಭದಲ್ಲಿ ಕೊಡಗು ಪ್ರವಾಹದಲ್ಲಿ ಮುಳುಗಿತ್ತು. ಇದೀಗ ಕೊಡಗಿನಲ್ಲಿ ಮತ್ತೆ ಮಹಾ ಮಳೆ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ಐದು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆಲ್ ಇಂಡಿಯಾ ವೆದರ್ ಬುಲೆಟಿನ್ ವರದಿ ಪ್ರಕಾರ ಜುಲೈ 21ರಿಂದ ಕೇವಲ ಕೊಡಗು ಮಾತ್ರವಲ್ಲ ಕರ್ನಾಟಕಾದ್ಯಂತ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ.

ಕೊಡಗು ; ಭಾರಿ ಮಳೆ ಮುನ್ಸೂಚನೆ, ಜು. 18 ರಿಂದ 22 ಆರೆಂಜ್ ಅಲರ್ಟ್ ಕೊಡಗು ; ಭಾರಿ ಮಳೆ ಮುನ್ಸೂಚನೆ, ಜು. 18 ರಿಂದ 22 ಆರೆಂಜ್ ಅಲರ್ಟ್

ಕೇರಳದ ಇಡುಕ್ಕಿ, ಮಲಪ್ಪುರಂ, ವಯನಾಡು, ಕಣ್ಣೂರು, ಎರ್ನಾಕುಲಮ್ ಹಾಗೂ ತ್ರಿಸುರದಲ್ಲಿ ಜುಲೈ 20ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

Next 5 days Yellow alert received in Kodagu

24 ಗಂಟೆಗಳಲ್ಲಿ 204 ಮಿ.ಮೀ ಮಳೆಯನ್ನು ನಿರೀಕ್ಷೆ ಮಾಡಲಾಗಿದೆ. ವಿಪತ್ತು ನಿರ್ವಹಣಾ ತಂಡವು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಇಡುಕ್ಕಿಯಲ್ಲಿ ಜುಲೈ 18,19,20, ಮಲಪ್ಪುರಂ-18,19,20, ಕಣ್ಣೂರು, ವಯನಾಡಿನಲ್ಲಿ ಜುಲೈ 20 ಹಾಗೂ ಎರ್ನಾಕುಲಮ್‌ನಲ್ಲಿ ಜುಲೈ 20ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಕಳೆದ ವರ್ಷ ನೂರು ವರ್ಷದಲ್ಲಿ ಅನುಭವಿಸದ ಯಾತನೆ , ನೋಡದ ನೀರನ್ನು ನೋಡಿದಂತಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿತ್ತು, ರಸ್ತೆಗಳೆಲ್ಲಾ ನದಿಗಳಂತಾಗಿತ್ತು, ಭೂಕುಸಿತ ಉಂಟಾಗಿತ್ತು, ಮನೆಗಳು ನೆಲಕ್ಕುರುಳಿದ್ದವು. ಒಂದು ವರ್ಷದ ಬಳಿಕ ಈಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮತ್ತದೇ ಸ್ಥಿತಿ ನಿರ್ಮಾಣವಾದರೆ ಈ ಶಾಕ್‌ನಿಂದ ಹೊರಬರಲು ಕಷ್ಟವಾಗಬಹುದು.

ಅಷ್ಟೆಲ್ಲಾ ಪ್ರವಾಹದಲ್ಲಿ ಮುಳುಗಿದ್ದರೂ ಕೆಲವೇ ದಿನಗಳಲ್ಲಿ ಕುಡಿಯಲು ಕೂಡ ನೀರಿಲ್ಲದೆ ಎಲ್ಲವೂ ಇಂಗು ಹೋಗಿ ಬರಡು ಭೂಮಿಯಂತಾಗಿತ್ತು.

English summary
Next 5 days Yellow alert received in Kodagu, Red alert in Kerala, not only Kodagu but the entire Karnataka will receive heavy rainfall till July 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X