ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಗಾಲ : ಕೊಡಗು ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡ ನಿಯೋಜನೆ

|
Google Oneindia Kannada News

ಮಡಿಕೇರಿ, ಮೇ 03 : ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗುವ ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೇ ತಿಂಗಳ ಅಂತ್ಯಕ್ಕೆ ಎನ್‌ಡಿಆರ್‌ಎಫ್ ಪಡೆಯನ್ನು ಜಿಲ್ಲೆಯಲ್ಲಿ ನಿಯೋಜನೆ ಮಾಡಲಾಗುತ್ತದೆ.

ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರಾಜ್‌ ಕುಮಾರ್ ಖತ್ರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮಳೆಗಾಲ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಯಿತು.

ಮತ್ತೆ ಬಂತು ಮಳೆಗಾಲ : ಕೊಡಗು ನಿರಾಶ್ರಿತರಿಗೆ ಮನೆ ಸಿಗುವುದೇ?ಮತ್ತೆ ಬಂತು ಮಳೆಗಾಲ : ಕೊಡಗು ನಿರಾಶ್ರಿತರಿಗೆ ಮನೆ ಸಿಗುವುದೇ?

ಮಳೆಗಾಲ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ತುರ್ತು ನಿರ್ವಹಣಾ ಕೇಂದ್ರ ಆರಂಭಿಸಲಾಗಿದೆ. ನೆರವು ಬೇಕಾದ ಜನರು 1077 ನಂಬರ್‌ಗೆ ಕರೆ ಮಾಡಬಹುದು. ಸಹಾಯವಾಣಿ ದಿನದ 24 ಗಂಟೆಯೂಸ ಕಾರ್ಯ ನಿರ್ವಹಣೆ ಮಾಡಲಿದೆ.

ಕೊಡಗಿನವರನ್ನು ಕಾಡುತ್ತಿದೆ ಹತ್ತಾರು ಸಮಸ್ಯೆಗಳುಕೊಡಗಿನವರನ್ನು ಕಾಡುತ್ತಿದೆ ಹತ್ತಾರು ಸಮಸ್ಯೆಗಳು

Kodagu

ಕೈಗೊಂಡ ಪ್ರಮುಖ ಕ್ರಮಗಳು ಇಲ್ಲಿವೆ....

ಚಿತ್ರಗಳು : ಕೊಡಗು ಸಂತ್ರಸ್ತರಿಗೆ ಕಟ್ಟುತ್ತಿರುವ ಮನೆಗಳು ಹೇಗಿವೆ?ಚಿತ್ರಗಳು : ಕೊಡಗು ಸಂತ್ರಸ್ತರಿಗೆ ಕಟ್ಟುತ್ತಿರುವ ಮನೆಗಳು ಹೇಗಿವೆ?

* ಮಳೆಗಾಲದಲ್ಲಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ 15 ನಿಮಿಷಕ್ಕೊಮ್ಮೆ ಜಿಲ್ಲಾಡಳಿತಕ್ಕೆ ಮುನ್ಸೂಚನೆ ನೀಡಲಿದೆ. ವರುಣ ಮಿತ್ರ ಸಹಾಯವಾಣಿಯಿಂದ ರೈತರು ಜಿಲ್ಲೆಯ ಹವಾಮಾನ ಪರಿಸ್ಥಿತಿ ಮಾಹಿತಿ ಪಡೆಯಬಹುದು.

* ಅಗ್ನಿಶಾಮಕದಳ, ಗೃಹ ರಕ್ಷಕ ದಳ, ರಾಜ್ಯ ವಿಪತ್ತು ಸ್ಪಂದನಾ ಪಡೆಗೆ ಪರಿಸ್ಥಿತಿ ಎದುರಿಸಲು ಸಿದ್ಧವಾಗಿರುವಂತೆ ಸೂಚನೆ ನೀಡಲಾಗಿದೆ.

* ಮೇ ತಿಂಗಳ ಅಂತ್ಯಕ್ಕೆ ಎನ್‌ಡಿಆರ್‌ಎಫ್‌ನ 1 ತಂಡ ಕೊಡಗು ಜಿಲ್ಲೆಗೆ ಬರಲಿದೆ. ಮಳೆಗಾಲ ಮುಗಿಯುವ ತನಕ ತಂಡ ಜಿಲ್ಲೆಯಲ್ಲಿಯೇ ಇರಲಿದೆ.

* ಹೆದ್ದಾರಿಗಳಲ್ಲಿ ಭೂಸಿತ ಉಂಟಾದರೆ ಮಣ್ಣು ತೆರವು ಮಾಡಲು 20 ಜೆಸಿಬಿ ಬಳಕೆ ಮಾಡಿಕೊಳ್ಳಲು ತೀರ್ಮಾನ

* ದುರಂತ ನಡೆದರೆ ಸಂತ್ರಸ್ತರಿಗೆ ನೆರವಾಗಲು ಪರಿಹಾರ ಕೇಂದ್ರಗಳನ್ನು ಗುರುತಿಸಲಾಗಿದೆ.

English summary
NDRF team will deployed in Kodagu ahead of the monsoon session. Kodagu district administration takes various steps before monsoon after last year heavy rain fall and landslide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X