ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಭೂಕುಸಿತಕ್ಕೆ ಭೂಕಂಪ ಕಾರಣವಲ್ಲ: ಭೂ ವಿಜ್ಞಾನ ಕೇಂದ್ರ ಸ್ಪಷ್ಟನೆ

By Nayana
|
Google Oneindia Kannada News

Recommended Video

ಕೊಡಗು ಭೂಕುಸಿತಕ್ಕೆ ಕಾರಣ ಏನು..? | Oneindia Kannada

ಬೆಂಗಳೂರು, ಆಗಸ್ಟ್ 24:ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭೂಕಂಪ ಭೂ ಕುಸಿತಕ್ಕೆ ಕಾರಣವಲ್ಲ ಎಂದು ರಾಷ್ಟ್ರೀಯ ಭೂ ವಿಜ್ಞಾನ ಕೇಂದ್ರ ಸ್ಪಷ್ಟಪಡಿಸಿದೆ.

ಜುಲೈ 9ರಂದು ಮಧ್ಯಾಹ್ನ 12.52 ರ ಸುಮಾರಿಗೆ ದಕ್ಷಿಣ ಕನ್ನಡ, ಕೊಡಗು ಗಡಿ ಪ್ರದೇಶದಲ್ಲಿ 3.4 ಮ್ಯಾಗ್ನಿಟ್ಯೂಡ್ ನಷ್ಟು ಭೂಕಂಪ ಸಂಭವಿಸಿತ್ತು. ಈ ಕುರಿತು ಭೂವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ವಿನೀತ್ ಗೆಲ್ಹೋಟ್ ಸ್ಪಷ್ಟಪಡಿಸಿದ್ದಾರೆ.

ಕೊಡಗಿನಲ್ಲಿ ಭೂಕಂಪ: ವದಂತಿಗೆ ಕಿವಿಗೊಡದಂತೆ ಡಿಸಿ ಮನವಿ ಕೊಡಗಿನಲ್ಲಿ ಭೂಕಂಪ: ವದಂತಿಗೆ ಕಿವಿಗೊಡದಂತೆ ಡಿಸಿ ಮನವಿ

ಭೂಕುಸಿತಕ್ಕೆ ಕಳೆದ ತಿಂಗಳು ನಡೆದ ಭೂಕಂಪವೇ ಕಾರಣ. ಹವಾಮಾನ ಇಲಾಖೆ ಭೂಕಂಪ ಕುರಿತು ಮಾಹಿತಿ ನೀಡಿದ್ದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಕುರಿತು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರಕ್ಕೆ ಕರೆ ಮಾಡಿದ್ದ ಕಂದಾಯ ಇಲಾಖೆ ವಿಪತ್ತು ನಿರ್ವಹಣೆ ಆಯುಕ್ತ ಗಂಗಾರಾಮ್ ಬಡೇರಿಯಾ, ಮಾಹಿತಿ ಕೇಳಿದ್ದರು.

NCS clarifies landslides because heavy rain, not because earthquake

ಯಾವುದೇ ಪ್ರದೇಶದಲ್ಲಿ ಭೂಕುಸಿತವಾದ ವರದಿಯಾಗಿಲ್ಲ. ಭಾರಿ ಮಳೆ, ಅರಣ್ಯ ನಾಶ ಹಾಗೂ ಗುಡ್ಡಗಳ ಅತಿಕ್ರಮಣ ಸಹ್ಯಾದ್ರಿ ಪ್ರದೇಶದಲ್ಲಿ ಭೂಕುಸಿತಕ್ಕೆ ಪ್ರಮುಖ ಕಾರಣ. ಭೂಕಂಪಕ್ಕೂ ಭೂಕುಸಿತಕ್ಕೂ ಸಂಬಂಧ ಕಲ್ಪಿಸುವುದು ಕೇವಲ ಊಹೆಯಷ್ಟೇ ಎಂದು ಉಲ್ಲೇಖಿಸಿದ್ದಾರೆ.

ಕೊಡಗಿನ ದುರಂತದ ಬಗ್ಗೆ ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ವಿಜ್ಞಾನಿಗಳುಕೊಡಗಿನ ದುರಂತದ ಬಗ್ಗೆ ಅಘಾತಕಾರಿ ಮಾಹಿತಿ ಬಿಚ್ಚಿಟ್ಟ ವಿಜ್ಞಾನಿಗಳು

ಭೂಕಂಪ ಸಂಭವಿಸಿ ಒಂದೂವರೆ ತಿಂಗಳುಗಳು ಕಳೆದ ಮೇಲೆ ಭೂಕುಸಿತ ಉಂಟಾಗಿದೆ ಇದಕ್ಕೂ ಭೂಕಂಪಕ್ಕೂ ಯಾವುದೇ ಸಂಬಂಧವಿಲ್ಲ. ಅತಿಯಾದ ಮಳೆಯಿಂದಾಗಿ ಭೂಕುಸಿತ ಸಂಭವಿಸಿದೆ, ಜಿಯೋಲಾಜಿಕಲ್ ಸರ್ವೇ ಆಫ್‌ ಇಂಡಿಯಾಗೆ ಹೆಚ್ಚಿನ ಮಾಹಿತಿಗಾಗಿ ಕೋರಲಾಗಿದೆ ಶೀಘ್ರ ವರದಿ ಕೈಸೇರಲಿದೆ.

English summary
National Center for Seismology has clarified that landslides in Kodagu district was not because of earthquake and it was only reason for heavy rain in the region, the center said in a letter written to Karnataka government on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X