ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ನಕ್ಸಲರು ಪ್ರತ್ಯಕ್ಷ : ಅಕ್ಕಿ ಮೂಟೆ, ಮೊಬೈಲ್ ಕಳವು

|
Google Oneindia Kannada News

ಮಡಿಕೇರಿ, ಏಪ್ರಿಲ್ 25 : ಕರ್ನಾಟಕದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಸಕ್ರಿಯವಾಗಿರುವ ಅನುಮಾನ ಉಂಟಾಗಿದೆ. ಕೊಡಗು ಜಿಲ್ಲೆಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟದ ತಪ್ಪಲಿನಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಅಕ್ಕಿಮೂಟೆ ಮತ್ತು ಮೊಬೈಲ್ ಅನ್ನು ದೋಚಿ ಅವರು ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಛತ್ತೀಸ್ ಗಢ:ಬಿಜೆಪಿ ಶಾಸಕನ ಕೊಲೆಗೈದ ಇಬ್ಬರು ನಕ್ಸಲರ ಹತ್ಯೆಛತ್ತೀಸ್ ಗಢ:ಬಿಜೆಪಿ ಶಾಸಕನ ಕೊಲೆಗೈದ ಇಬ್ಬರು ನಕ್ಸಲರ ಹತ್ಯೆ

ಕೊಡಗು ಜಿಲ್ಲೆಯಲ್ಲಿನ ಅತಿ ಎತ್ತರದ ಬೆಟ್ಟ ಪ್ರದೇಶ ತಡಿಯಂಡಮೋಳ್. ಬೆಟ್ಟದ ತಪ್ಪಲಿನ ಯುವಕಪಾಡಿ ಗ್ರಾಮದಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ಇಬ್ಬರು ನಕ್ಸಲರು ಗ್ರಾಮದ ಎರಡು ಮನೆಗಳಿಗೆ ಬಂದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Naxal movement suspected in Madikeri

ಸುಮಾರು 30 ವರ್ಷ ಪ್ರಾಯದ ಒಬ್ಬ ಪುರುಷ, ಒಬ್ಬ ಮಹಿಳೆ ಕುಟ್ಟಪ್ಪ ಎಂಬುವವರ ಮನೆಗೆ ನುಗ್ಗಿ ಅಕ್ಕಿಯನ್ನು ಹೊತ್ತುಕೊಂಡು ಹೋಗಿದ್ದಾರೆ. ಅರುಣ ಎಂಬುವವರ ಮನೆಗೆ ನುಗ್ಗಿದ ಅವರು ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.

ನಿಜಾನಾ ಇದು?! 1 ಕ್ಷೇತ್ರ, 7 ಅಭ್ಯರ್ಥಿಗಳು, 80,000 ಭದ್ರತಾ ಸಿಬ್ಬಂದಿ!ನಿಜಾನಾ ಇದು?! 1 ಕ್ಷೇತ್ರ, 7 ಅಭ್ಯರ್ಥಿಗಳು, 80,000 ಭದ್ರತಾ ಸಿಬ್ಬಂದಿ!

ಕೊಡಗು ಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆ ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮಕ್ಕೆ ಬಂದಿದ್ದ ನಕ್ಸಲರು ತಮ್ಮ ಬಗ್ಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಮಧ್ಯ ಭಾರತದಲ್ಲಿರುವ ನಕ್ಸಲರು ರಕ್ಷಣಾ ಪಡೆಗಳ ಕಾರ್ಯಾಚರಣೆಯಿಂದಾಗಿ ಬೆದರಿ ದಕ್ಷಿಣ ಭಾರತದತ್ತ ಮುಖ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಕೇರಳ ಮೂಲಕ ನಕ್ಸಲರು ಕೊಡಗು ಪ್ರವೇಶಿಸಿರಬಹುದು ಎಂದು ಅಂದಾಜಿಸಲಾಗಿದೆ.

English summary
Naxal movement suspected in Tadiandamol village in Kodagu. Tadiandamol is the highest mountain of Kodagu district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X