ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಗಡಿಭಾಗದಲ್ಲಿ ಭೂಮಿಯಡಿಯಿಂದ ಮತ್ತೆ ಕೇಳಿಬರುತ್ತಿದೆ ನದಿ ಹರಿಯುವ ಶಬ್ದ!

|
Google Oneindia Kannada News

Recommended Video

Kodagu Floods : ಕೊಡಗಿನ ಗಡಿ ಭಾಗದಲ್ಲಿ ಭೂಮಿಯಡಿಯಿಂದ ಕೇಳಿಬರುತ್ತಿದೆ ನದಿ ಹರಿಯುವ ನಿಗೂಢ ಶಬ್ದ

ಮಂಗಳೂರು, ಆಗಸ್ಟ್.28: ಕೊಡಗು ಜಿಲ್ಲೆಯ ಗಡಿ ಭಾಗದ ಕೆಲ ಪ್ರದೇಶ ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಳೂಕಿನ ಗಡಿಭಾಗದ ಕೆಲ ಪ್ರದೇಶಗಳಲ್ಲಿ ಭೂಮಿಯಡಿಯಿಂದ ರಭಸವಾಗಿ ನೀರು ಹರಿಯುತ್ತಿರುವ ನಿಗೂಢ ಶಬ್ದ ಕೇಳಿ ಬರುತ್ತಿದೆ.

ಕೊಡಗು ಜಿಲ್ಲೆಯ ಗಡಿಭಾಗದ ಭಾಗಮಂಡಲ ಸಮೀಪದ ಕರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭೂಮಿಯಡಿಯಿಂದ ಇಂತಹ ಶಬ್ದ ಕೇಳಿಬರುತ್ತಿದ್ದು, ಸ್ಥಳೀಯ ಜನರನ್ನು ಅತಂಕಿತರನ್ನಾಗಿಸಿದೆ.

ಮಳೆ ಬಂದದ್ದು ಓಕೆ, ಭೂ ಕುಸಿತವಾಗಿದ್ದು ಏಕೆ ? ಇಲ್ಲಿದೆ ನಿಜವಾದ ಕಾರಣ...ಮಳೆ ಬಂದದ್ದು ಓಕೆ, ಭೂ ಕುಸಿತವಾಗಿದ್ದು ಏಕೆ ? ಇಲ್ಲಿದೆ ನಿಜವಾದ ಕಾರಣ...

ಭೂಮಿ ಅಡಿಯಿಂದ ಶಬ್ದ ಕೇಳಿಬರುತ್ತಿರುವ ಪ್ರದೇಶದ ಅಕ್ಕ ಪಕ್ಕದಲೆಲ್ಲೂ ನದಿ, ತೊರೆ, ಹಳ್ಳಗಳಿಲ್ಲ. ಆದರೂ ತೊರೆಯೊಂದು ತುಂಬಿ ಹರಿಯುವಂತಹ ಶಬ್ದ ಭೂಮಿಯ ಅಳದಿಂದ ಕೇಳಿ ಬರುತ್ತಿದೆ ಎನ್ನಲಾಗಿದೆ. ಭೂಮಿಯಲ್ಲಿ ಇಂಗಿರುವ ಭಾರೀ ಪ್ರಮಾಣದ ಮಳೆ ನೀರು ನದಿಯಾಗಿ ಈ ಭಾಗದಲ್ಲಿ ಭೂಮಿಯ ಒಳ ಪದರದಲ್ಲಿ ಹರಿಯುತ್ತಿದೆ.

ಮಡಿಕೇರಿ ತಾಲೂಕಿನ ಕರಿಕೆ ಭಾಗ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಡತ್ತಿಕಾನ ನಿವಾಸಿಯಾದ ಕೇಶವ ನಾಯ್ಕರವರ ಮನೆ ಬಳಿ ಈ ಸದ್ದು ಕೇಳಿ ಬರುತ್ತಿದೆ. ಇದು ಆ ಭಾಗದ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

 ಗಾಳಿಬೀಡು, ವಣಚ್ಚಲ್ ಬೆಟ್ಟದಲ್ಲಿ ಭಾರೀ ಬಿರುಕು, ಭೂಮಿ ಕುಸಿತ ಗಾಳಿಬೀಡು, ವಣಚ್ಚಲ್ ಬೆಟ್ಟದಲ್ಲಿ ಭಾರೀ ಬಿರುಕು, ಭೂಮಿ ಕುಸಿತ

ಕರಿಕೆ ಭಾಗದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ಭೂಮಿ ಅಡಿಯಲ್ಲಿ ನದಿ ಹರಿಯುತ್ತಿರುವ ಸದ್ದು ಮುಂದೆ ಘಟಿಸಬಹುದಾದ ದುರಂತದ ಮುನ್ಸೂಚನೆಯೇ ಎಂಬ ಅನುಮಾನ ಈಗ ಸ್ಥಳೀಯರನ್ನು ಕಾಡತೊಡಗಿದೆ.

ಆಗಸ್ಟ್ 16 ಮತ್ತು 17 ರಂದು ಕೊಡಗಿನ ಗಡಿಭಾಗ ಜೋಡುಪಾಲ, ಮದೆನಾಡಿನಲ್ಲಿ ಜಲಸ್ಫೋಟ ಸೇರಿದಂತೆ ಭಾರೀ ಭೂ ಕುಸಿತ ಸಂಭವಿಸುವ ಮೊದಲು ಇದೇ ರೀತಿ ಶಬ್ದ ಕೇಳಿಬಂದಿತ್ತು.

 ರೈಲು ಓಡಿದ ಸದ್ದು

ರೈಲು ಓಡಿದ ಸದ್ದು

ಜೋಡುಪಾಲದ ನಿವಾಸಿ ಶಿಶಿರ ಈ ಹಿಂದೆ ನೀಡಿದ್ದ ಮಾಹಿತಿಯ ಪ್ರಕಾರ ದುರಂತ ಸಂಭವಿಸುವ ಮೊದಲು ಆ ಭಾಗದ ಭೂಮಿಯಡಿ ನೀರು ಹರಿಯುವ, ರೈಲು ಓಡಿದ ಭಾರೀ ಸದ್ದು ಕೇಳಿಬಂದಿತ್ತು.

ಪಶ್ಚಿಮ ಘಟ್ಟದ ಕೆಲಭಾಗದಲ್ಲಿ ಭೂ ಕುಸಿತಗೊಂಡು ಏಕಾಏಕಿ ದೊಡ್ಡ ಪ್ರಮಾಣದಲ್ಲಿ ನೀರು ನದಿಯಂತೆ ಹರಿದಿರುವುದು ಕಂಡುಬಂದಿತ್ತು. ಆ ನೀರು ಭೂ ಗರ್ಭವನ್ನು ಸೀಳಿಕೊಂಡು ಬಂದಿರಬೇಕು ಎಂದು ಕೆಲವರು ವಿಮರ್ಶಿಸಿದ್ದರು. ಈ ಭಾಗದ ಅಧ್ಯಯನಕ್ಕೆ ಬಂದಿದ್ದ ವಿಜ್ಞಾನಿಗಳ ತಂಡ ಕೂಡ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

 ಸಣ್ಣ ತೊರೆ ದೊಡ್ಡ ನದಿಯಾಯ್ತು

ಸಣ್ಣ ತೊರೆ ದೊಡ್ಡ ನದಿಯಾಯ್ತು

ದುರಂತ ಸಂಭವಿಸುವ ಕೆಲ ನಿಮಿಷದ ಹಿಂದಿನವರೆಗೂ ಸಣ್ಣ ತೊರೆಯಿದ್ದ ಜಾಗ ಕೆಲವೇ ನಿಮಿಷದ ಅಂತರದಲ್ಲಿ ದೊಡ್ಡ ನದಿಯ ರೂಪ ಪಡೆದು ಬಾರಿ ಅನಾಹುತವನ್ನೇ ಸೃಷ್ಟಿಸಿತ್ತು. ಬಂಡೆ ಕಲ್ಲುಗಳು ಹಾಗೂ ದೊಡ್ಡ ಗಾತ್ರದ ಮರಗಳು, ಕೃತಕವಾಗಿ ಸೃಷ್ಟಿಯಾದ ಈ ನದಿಯಲ್ಲಿ ಹರಿದು ಬಂದು ಪ್ರಾಣ ಹಾನಿ ಸಂಭವಿಸಿತ್ತು.

ಎದುರಾಗುತ್ತಿದೆ ಪಶ್ಚಿಮ ಘಟ್ಟದ ತಪ್ಪಲು ಕುಸಿಯುವ ಭೀತಿ!ಎದುರಾಗುತ್ತಿದೆ ಪಶ್ಚಿಮ ಘಟ್ಟದ ತಪ್ಪಲು ಕುಸಿಯುವ ಭೀತಿ!

 ಬಿರುಕುಬಿಟ್ಟ ಭೂಮಿ

ಬಿರುಕುಬಿಟ್ಟ ಭೂಮಿ

ಅದಲ್ಲದೇ ಎದುರಿಗೆ ಸಿಕ್ಕಿದ್ದ ಮನೆ ಮತ್ತು ಕೃಷಿ ಭೂಮಿಯನ್ನು ಕೊಚ್ಚಿಕೊಂಡು ಹೋಗಿತ್ತು. ಇದೀಗ ಜೋಡುಪಾಲ, ಮದೆನಾಡು, ಗಾಳಿ ಬೀಡು ,ಮಣ್ಣಂಗೇರಿ ,ಕಾಟಿಕೇರಿ ಮುಂತಾದ ಪ್ರದೇಶದಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

 ನೀರು ಹರಿಯುವ ಶಬ್ದ

ನೀರು ಹರಿಯುವ ಶಬ್ದ

ಇದೀಗ ಕರಿಕೆಯಲ್ಲೂ ಭೂಮಿಯ ಅಡಿಯಿಂದ ನೀರು ಹರಿಯುತ್ತಿರುವ ಶಬ್ದ ನಿರಂತರವಾಗಿ ಕೇಳಿ ಬರುತಿದ್ದು, ಅನಾಹುತ ಸೃಷ್ಟಿಸಬಹುದೇ ಎಂಬ ಅನುಮಾನ ಜನರನ್ನು ಕಾಡಲಾರಂಭಿಸಿದೆ. ಭೂ ಕುಸಿತ ಉಂಟಾಗಬಹುದೇ ಎಂಬ ಭಯ ಅಕ್ಕಪಕ್ಕದ ಊರಿನವರದು. ಸ್ಥಳಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

English summary
Mysterious sound of flowing water inside earth near Karike of Kodagu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X