ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ, ಜಲ ಪ್ರಳಯದ ಆತಂಕಕ್ಕೆ ಸಿಲುಕಿದ ಜನರು!

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮೇ 26: ಕೊಡಗಿನಲ್ಲಿ ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ. ಕಳೆದ ವರ್ಷ ಉತ್ತರ ಕೊಡಗಿನಲ್ಲಿ (ಮಡಿಕೇರಿ ಭಾಗ) ಭೂಮಿ ಕಂಪಿಸಿದ ಅನುಭವವಾಗಿತ್ತು. ಜತೆಗೆ ನಿಗೂಢ ಶಬ್ದ ಕಿವಿಗೆ ಬಡಿದಿತ್ತು. ಅದಾದ ಬಳಿಕ ಆ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಏನಾಯಿತು ಎಂಬುದು ಎಲ್ಲರ ಮುಂದಿದೆ.

ಈ ಬಾರಿ ಮತ್ತೆ ಭೂಮಿ ಕಂಪಿಸಿದ್ದು, ಅದು ಉತ್ತರ ಕೊಡಗಿನಿಂದ ದಕ್ಷಿಣ ಕೊಡಗಿನತ್ತ ವರ್ಗಾವಣೆಗೊಂಡಿದೆ. ಇದು ಭಯಕ್ಕೆ ಕಾರಣವಾಗಿದೆ. ಕಳೆದ ವರ್ಷ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿ, ಜಲಪ್ರಳಯವಾಗಿ ಭಾರೀ ಅನಾಹುತ ಸಂಭವಿಸಿತ್ತು. ಆದರೆ ದಕ್ಷಿಣ ಕೊಡಗಿನಲ್ಲಿ ಪ್ರವಾಹ ಬಂದಿತ್ತಾದರೂ ಭೂಕುಸಿತದಂತಹ ಪ್ರಕರಣ ನಡೆದಿರಲಿಲ್ಲ.

Mysterious sound from beneath of earth; Kodagu people panic about huge rain

ಆದರೆ, ಇದೀಗ ದಕ್ಷಿಣ ಕೊಡಗಿನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಅದು ಕೂಡ ಭಾರೀ ಮಳೆಯೊಂದಿಗೆ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಕಡೆ ಕಂಪಿಸಿದೆ. ಜತೆಗೆ ಭೂಮಿ ಒಳಗೆ ಏನೋ ಓಡಾಡಿದ ಅನುಭವವಾಗಿದೆ. ಭೂಮಿ ಕಂಪಿಸಿದ ಅನುಭವವಾದ ಬಗ್ಗೆ ಜನರು ಹೇಳಿದ್ದರಿಂದ ಜಿಲ್ಲಾ ಉಪವಿಭಾಗಾಧಿಕಾರಿ ಆದೇಶದ ಮೇರೆಗೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಭೇಟಿ ನೀಡಿ, ಕೆಲವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಮುಂಗಾರು ಮಳೆ ಆರಂಭ : ಕೊಡಗಿನಲ್ಲಿ 13 ಅಪಾಯಕಾರಿ ಸ್ಥಳ ಗುರುತುಮುಂಗಾರು ಮಳೆ ಆರಂಭ : ಕೊಡಗಿನಲ್ಲಿ 13 ಅಪಾಯಕಾರಿ ಸ್ಥಳ ಗುರುತು

ಯಾವಾಗ ದಕ್ಷಿಣ ಕೊಡಗಿನಲ್ಲಿ ಭೂಮಿ ಕಂಪಿಸಿದ ಬಗ್ಗೆ ಸುದ್ದಿ ಹರಿದಾಡಲು ಆರಂಭವಾಯಿತೋ ಜನರಲ್ಲಿ ಭಯವಂತೂ ಆರಂಭವಾಗಿದೆ. ಈಗಾಗಲೇ ಜಿಲ್ಲಾಡಳಿತ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಬೇಕಾದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಒಂದು ವೇಳೆ ಪ್ರವಾಹ ಭೂಕುಸಿದಂತಹ ದುರಂತಗಳು ನಡೆದರೆ ಏನು ಮಾಡಬೇಕು? ತುರ್ತು ರೀತಿಯ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು? ಮುಂತಾದವುಗಳ ಬಗ್ಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

Mysterious sound from beneath of earth; Kodagu people panic about huge rain

ಇನ್ನು ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರಾದ ೪೧೭ ಕುಟುಂಬಗಳು ಬಾಡಿಗೆ ಮನೆಯಲ್ಲಿ ದಿನ ಕಳೆಯುತ್ತಿದ್ದು ಅವರಿಗೆ ಇನ್ನೂ ಸೂರು ಸಿಕ್ಕಿಲ್ಲ.

ಇಂತಹ ಕುಟುಂಬಗಳು ಇದುವರೆಗೆ ಬಾಡಿಗೆ ಹಣವಾಗಿ ಒಟ್ಟು 2,91,90,000 ರೂ.ಗಳನ್ನು ಜಿಲ್ಲಾಡಳಿತ ಪಾವತಿ ಮಾಡಿದೆ. ಸಂತ್ರಸ್ತ ಕುಟುಂಬಗಳಿಗೆ ಕಳೆದ ನವೆಂಬರ್ ತಿಂಗಳಿನಿಂದ ಪ್ರತಿ ತಿಂಗಳಿಗೆ 10 ಸಾವಿರ ರೂ.ಗಳಂತೆ ಖಾತೆಗಳಿಗೆ ಬಾಡಿಗೆ ಹಣವನ್ನು ಸಂದಾಯ ಮಾಡಲಾಗುತ್ತಿದೆ.

ಮಳೆಗಾಲ ಆರಂಭ : ಕೊಡಗಿನಲ್ಲಿ ತೆಗೆದುಕೊಂಡ ಕ್ರಮಗಳುಮಳೆಗಾಲ ಆರಂಭ : ಕೊಡಗಿನಲ್ಲಿ ತೆಗೆದುಕೊಂಡ ಕ್ರಮಗಳು

ಭೂಕುಸಿತ ಸಂಭವಿಸಿದ ಸ್ಥಳಗಳಾದ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 67 ಕುಟುಂಬಗಳಿಗೆ, ಕೆ.ನಿಡುಗಣೆ ಗ್ರಾಮ ಪಂಚಾಯಿತಿಯ 26 ಕುಟುಂಬಗಳಿಗೆ, ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 66 ಕುಟುಂಬಗಳಿಗೆ, ಸಂಪಾಜೆ ಗ್ರಾಮ ಪಂಚಾಯಿತಿಯ 3 ಕುಟುಂಬಗಳಿಗೆ, ಮದೆ ಗ್ರಾಮ ಪಂಚಾಯಿತಿಯ 46 ಕುಟುಂಬಗಳಿಗೆ, ಬೆಟ್ಟಗೇರಿ ಗ್ರಾಮ ಪಂಚಾಯಿತಿಯ 9 ಕುಟುಂಬಗಳಿಗೆ, ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 1 ಕುಟುಂಬ,

Mysterious sound from beneath of earth; Kodagu people panic about huge rain

ಮಡಿಕೇರಿ ನಗರಸಭೆ ವ್ಯಾಪ್ತಿಯ 93 ಕುಟುಂಬ ಗಳಿಗೆ, ಕೆದಕಲು ಗ್ರಾ.ಪಂ. ವ್ಯಾಪ್ತಿಯ 5 ಕುಟುಂಬ, ಮಾದಾಪುರ ಗ್ರಾ.ಪಂ. ವ್ಯಾಪ್ತಿಯ 44 ಕುಟುಂಬಗಳು, ಗರ್ವಾಲೆ ಗ್ರಾಮ ಪಂಚಾಯಿತಿಯ 9 ಕುಟುಂಬಗಳು, ಕಂಬಿಬಾಣೆ ಪಂಚಾಯಿತಿಯ 4 ಕುಟುಂಬಗಳು, ಕೂಡಿಗೆ ಪಂಚಾಯಿತಿಯ 3, ಕೂಡುಮಂಗಳೂರು ಪಂಚಾಯಿತಿಯ 3, ನಂಜರಾಯಪಟ್ಟಣ ಪಂಚಾಯಿತಿಯ 1, ಕಿರಗಂದೂರು ಪಂಚಾಯಿತಿಯ 5,

ಬೇಲೂರು ಪಂಚಾಯಿತಿಯ 5, ಐಗೂರು ಪಂಚಾಯಿತಿಯ 1, ನೇರುಗಲಳೆ ಪಂಚಾಯಿತಿಯ 2, ಚೌಡ್ಲು ಪಂಚಾಯ್ತಿಯ 1, ಹಾನಗಲ್ಲು ಪಂಚಾಯಿತಿಯ 5, ಶಾಂತಳ್ಳಿ ಪಂಚಾಯಿತಿಯ 2, ತೋಳೂರು ಶೆಟ್ಟಳ್ಳಿ ಪಂಚಾಯಿತಿಯ 1, ಬೆಟ್ಟದಳ್ಳಿ ಪಂಚಾಯಿತಿ 1, ಕುಶಾಲನಗರ ಪಟ್ಟಣ ಪಂಚಾಯಿತಿಯ 14 ಕುಟುಂಬಗಳಿಗೆ ಬಾಡಿಗೆ ಹಣವನ್ನು ಪಾವತಿ ಮಾಡಲಾಗಿದೆ.

English summary
Mysterious sound from beneath of earth in Kodagu. People of Kodagu panic about huge rain, similar to last year, which was lashes out many lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X